Home Mangalorean News Kannada News ಲೋನ್ ಆ್ಯಪ್‌ ಗಳ ಕಿರುಕುಳ : ಸಾಲ ತೀರಿಸಲಾಗದೇ ಬೇಸತ್ತು ಯುವಕ ನೇಣಿಗೆ ಶರಣು 

ಲೋನ್ ಆ್ಯಪ್‌ ಗಳ ಕಿರುಕುಳ : ಸಾಲ ತೀರಿಸಲಾಗದೇ ಬೇಸತ್ತು ಯುವಕ ನೇಣಿಗೆ ಶರಣು 

Spread the love

ಲೋನ್ ಆ್ಯಪ್‌ ಗಳ ಕಿರುಕುಳ : ಸಾಲ ತೀರಿಸಲಾಗದೇ ಬೇಸತ್ತು ಯುವಕ ನೇಣಿಗೆ ಶರಣು 

ಮಂಗಳೂರು: ಇತ್ತಿಚ್ಚಿನ ದಿನಗಳಲ್ಲಿ ಹಣ ಇಲ್ಲದೆ ಮಾಧ್ಯಮ ವರ್ಗದ ಜನ ಆಪ್ ಲೋನಿನ ಮೊರೆಹೋಗುತ್ತಿರುವುದು ಅತಿಹೆಚ್ಚು,ಸಾಲ ಮಾಡಿ ವ್ಯವಹಾರಗಳಿಗೆ ಹೂಡಿಕೆ ಮಾಡಿದವರು ಕೊನೆಗೆ ಕೈಸುಟ್ಟು ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳು ಹೆಚ್ಚುತ್ತಲೇ ಇದೆ.ಅದರಂತೆಯೇ ಆ್ಯಪ್‌ಗಳಲ್ಲಿ ಸಾಲ ಪಡೆದು ತೀರಿಸಲಾಗದೇ ಆರ್ಥಿಕ ಹೊರೆಯಿಂದ ಬೇಸತ್ತು ಯುವಕನೋರ್ವನು ನೇಣಿಗೆ ಶರಣಾದ ಘಟನೆ ಮಂಗಳೂರಿನ ಕೋಡಿಕಲ್‌ನಲ್ಲಿ ನಡೆದಿದೆ. ಕೋಡಿಕಲ್ ನಿವಾಸಿ ನಿಖಿಲ್ ಪೂಜಾರಿ (30) ಮೃತಪಟ್ಟ ಯುವಕ.

ಈ ಹಿಂದೆ ಆಪ್ ಗಳಲ್ಲಿ ಲೋನ್ ಪಡೆದವರಿಗೆ ಕಿರುಕುಳ ನೀಡುತ್ತಿರುವುದಲ್ಲದೆ ಲೋನ್ ಪಡೆದವರ ಫೋನ್ ನ ಕಂಟ್ರೋಲ್ ಪಡೆದು ಫೋಟೋ ಹಾಗೂ ಫೋನ್ ನಂಬರ್ ಪಡೆದು ಕಾಂಟಾಕ್ಟ್ ಲಿಸ್ಟ್ ನವರಿಗೂ ಕಿರುಕುಳ ನೀಡಿ ಫೋನ್ ನಲ್ಲಿದ್ದ ಫೋಟೋಗಳನ್ನು ದುರ್ಬಳಕೆ ಮಾಡಿದ್ದರಿಂದ ಹಲವಾರು ಆತ್ಮಹತ್ಯೆ ಮಾಡಿಕೊಂಡಿದ್ದರು.

ಎಂದಿನಂತೆಯೇ ಬೆಳಗ್ಗೆ ಮನೆಯಲ್ಲಿ ಉಪಹಾರ ಸೇವಿಸಿದ ನಿಖಿಲ್ ಪೂಜಾರಿ ತಮ್ಮ ಕೋಣೆ ಸೇರಿದ್ದರು. ಆ ಬಳಿಕ ಅವರು ಕೋಣೆಯಿಂದ ಹೊರ ಬಂದಿರಲಿಲ್ಲ‌. ಸಂಜೆಯವರೆಗೆ ಅವರು ಮಲಗುವ ಅಭ್ಯಾಸ ಇರುವ ಕಾರಣ ಮನೆಯವರು ಇತ್ತ ಕಡೆ ಹೆಚ್ಚಿನ ಗಮನ ಹರಿಸಿರಲಿಲ್ಲ. ಆದರೆ ಸಂಜೆ ಬಳಿಕ ಬಾಗಿಲು ಬಡಿದರೂ ತೆಗೆಯದಿದ್ದು, ಫೋನ್ ಕರೆಯನ್ನು ಸ್ವೀಕರಿಸುತ್ತಿರಲಿಲ್ಲ. ಆದ್ದರಿಂದ ಬಾಗಿಲಿನ ಎಡೆಯಿಂದ ನೋಡಿದಾಗ ನಿಖಿಲ್ ಆತ್ಮಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಪ್ರಾಥಮಿಕ ತನಿಖೆಯಲ್ಲಿ ಆತನಿಗೆ ಆರ್ಥಿಕ ಹೊರೆಯಿತ್ತು. ಬೇರೆ ಬೇರೆ ಆ್ಯಪ್‌ಗಳಲ್ಲಿ ಆತ ಸಾಲ ಪಡೆದಿದ್ದು, ಗಮನಕ್ಕೆ ಬಂದಿದೆ. ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Exit mobile version