ವಸುಂಧರೋತ್ಸವ ೨೦೨೨ರಲ್ಲಿ ನಾದನೃತ್ಯದ ಚಿಣ್ಣರು 

Spread the love

ವಸುಂಧರೋತ್ಸವ ೨೦೨೨ರಲ್ಲಿ ನಾದನೃತ್ಯದ ಚಿಣ್ಣರು 
ಮಂಗಳೂರು: ನಾದನೃತ್ಯ ಕಲಾಶಾಲೆಯ ಆರು ಮಂದಿ ನರ್ತನ ಚತುರೆಯರು ಮೈಸೂರಿನಲ್ಲಿ ಇಂದು ನಡೆಯಲಿರುವ  ‘ಚಿಗುರುಸಂಜೆ’ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಈ ಕಾರ್ಯಕ್ರಮವು ಕಳೆದ ೪ ದಶಕಗಳಿಂದ ಅಂತಾರಾಷ್ಟ್ರೀಯ  ಖ್ಯಾತಿಯ  ಗುರು ನೃತ್ಯ ಗುರು ಡಾ.ವಸುಂಧರಾ ದೊರೆಸ್ವಾಮಿಯವರು ಆಯೋಜಿಸುತ್ತಿರುವ   ರಾಷ್ಟ್ರೀಯ ಮಟ್ಟದ ನೃತ್ಯ-ಸಂಗೀತ ಕಾರ್ಯಕ್ರಮಗಳ ವಸುಂಧರೋತ್ಸವ ೨೦೨೨ ರ ಅಂಗವಾಗಿ ನಡೆಯಲಿದೆ.
ನೃತ್ಯ ಗುರು ವಿದುಷಿ  ಭ್ರಮರಿ ಶಿವಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ಮಂಗಳೂರಿನ ನಾದನೃತ್ಯ ಕಲಾಶಾಲೆಯ ವಿದ್ಯಾರ್ಥಿನಿಯರಾದ ಶುಕೀ ರಾವ್, ಸಂಜನಾ ಶೆಣೈ, ಶಿವಾನಿ ರಾವ್, ಮಹಾಲಕ್ಷ್ಮೀ ಶೆಣೈ, ವರ್ಣಿಕಾ ಆಚಾರ್ಯ, ಚಿನ್ಮಯೀ ಕೊಟ್ಯಾನ್ ಇವರುಗಳು ನೃತ್ಯ ಕಾರ್ಯಕ್ರಮ ನೀಡಲಿದ್ದಾರೆ. ಇಂದು(೧೦-೧೧-೨೦೨೨) ಸಂಜೆ ೭.೧೫ಕ್ಕೆ  ಸರಿಯಾಗಿ ಮೈಸೂರಿನ ಜೆ.ಎಲ್.ಬಿ. ರಸ್ತೆಯಲ್ಲಿರುವ ಶ್ರೀನಾದಬ್ರಹ್ಮಸಂಗೀತ ಸಭಾದ ವೇದಿಕೆಯಲ್ಲಿ   ಗುರು-ಶಿಷ್ಯ-ಪ್ರಶಿಷ್ಯರುಗಳು ಸಂಗಮಿಸುತ್ತಿರುವ ಅಪೂರ್ವ ಕಾರ್ಯಕ್ರಮ ಇದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Spread the love

Leave a Reply

Please enter your comment!
Please enter your name here