ವಿಕಲಚೇತನ ಮಕ್ಕಳ ಹಕ್ಕುಗಳಿಗಾಗಿ ಶ್ರಮಿಸುತ್ತಿರುವ ಬಾಲ ಕಾರ್ಯಕರ್ತ  ಮೊಹಮ್ಮದ್ ಅಸೀಮ್ ವೆಲ್ಲಿಮಣ್ಣ

Spread the love

ವಿಕಲಚೇತನ ಮಕ್ಕಳ ಹಕ್ಕುಗಳಿಗಾಗಿ ಶ್ರಮಿಸುತ್ತಿರುವ ಬಾಲ ಕಾರ್ಯಕರ್ತ  ಮೊಹಮ್ಮದ್ ಅಸೀಮ್ ವೆಲ್ಲಿಮಣ್ಣ

ದೋಹಾ : ಪಾಲಕ್ಕಡನ್ ನಟ್ಟರಂಗು ಕತಾರ್ (PNQ), ದೋಹಾದಲ್ಲಿರುವ ಒಂದು ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆ ಇದು ಕತಾರ್ ನ ಭಾರತೀಯ ಸಾಂಸ್ಕೃತಿಕ ಕೇಂದ್ರದ ಸಹಯೋಗದೊಂದಿಗೆ ವಿಶ್ವಾದ್ಯಂತ ಇರುವ ವಿಕಲಚೇತನ ಮಕ್ಕಳ ಹಕ್ಕುಗಳಿಗಾಗಿ ಶ್ರಮಿಸುತ್ತಿರುವ ಬಾಲ ಕಾರ್ಯಕರ್ತ ಶ್ರೀ ಮೊಹಮ್ಮದ್ ಅಸೀಮ್ ವೆಲ್ಲಿಮಣ್ಣ ಅವರನ್ನು ಗೌರವಿಸಿತು.

16 ವರ್ಷದ ಬಾಲಕ ಕೇರಳದ ಕೋಯಿಕ್ಕೋಡ್ ಜಿಲ್ಲೆಯವನಾಗಿದ್ದು ಮತ್ತು 2017 ರಲ್ಲಿ ಯುನಿಸೆಫ್‌ನಿಂದ ಚೈಲ್ಡ್ ಅಚೀವರ್ ಪ್ರಶಸ್ತಿಯನ್ನು ಪಡೆದಿರುತ್ತಾನೆ, ಜೊತೆಗೆ ಇತರ ರಾಜ್ಯ ಮತ್ತು ರಾಷ್ಟ್ರೀಯ ಪ್ರಶಸ್ತಿಗಳ ಜೊತೆಗೆ ತನ್ನ ದೈಹಿಕ ಸವಾಲುಗಳೊಂದಿಗೆ ಪೆರಿಯಾರ್ ನದಿಯಲ್ಲಿ 800 ಮೀಟರ್ ಈಜುವ ಏಷ್ಯನ್ ವಿಶ್ವ ದಾಖಲೆ ಕೂಡ ಇವನ ಹೆಸರಲ್ಲಿದೆ. ಶ್ರೀ ಮೊಹಮ್ಮದ್ ಅಸೀಮ್ ಅವರು ಅಸೀಮ್ ವೆಲ್ಲಿಮಣ್ಣ ಫೌಂಡೇಶನ್‌ನ ಸ್ಥಾಪಕರು ಮತ್ತು ಅಂತರ್ಗತ ಶಿಕ್ಷಣವನ್ನು ಉತ್ತೇಜಿಸುವುದು ಈ ಫೌಂಡೇಶನ್ ನ ಉದ್ದೇಶವಾಗಿದೆ. ಫಿಫಾ ವಿಶ್ವಕಪ್‌ಗೆ ವೀಕ್ಷಿಸಲು ಅಸೀಮ್ ಅವರು ದೋಹಾ ಗೆ ಬಂದಿದ್ದರು. 01ನೇ ಡಿಸೆಂಬರ್ 2022 ರಂದು ಐಸಿಸಿಯ ಅಶೋಕ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಮತ್ತು ವಿವಿಧ ಸಮುದಾಯಗಳ ಜನರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಪಾಲಕ್ಕಡನ್ ನಟ್ಟರಂಗು ಕತಾರ್ ಜನರಲ್ ಸೆಕ್ರೆಟರಿ ಶ್ರೀ ನಿತಿನ್ ಬಾಬುರಾಜ್ ಅತಿಥಿಗಳನ್ನು ಸ್ವಾಗತಿಸಿದರು ಮತ್ತು ಗೌರವಾನ್ವಿತ ಅತಿಥಿ ಪಾಲಕ್ಕಡನ್ ನಟ್ಟರಂಗು ಕತಾರ್ ಅಧ್ಯಕ್ಷರಾದ ಶ್ರೀ ಗೋಪಿನಾಥ್ ರವರ ಉದ್ಘಾಟನಾ ಭಾಷಣದಿಂದ ಮುಂದುವರೆಯಿತು. ಶ್ರೀ ಬಾಬುರಾಜನ್, ಐಸಿಸಿ ಅಧ್ಯಕ್ಷರು, ಐಸಿಸಿ ಉಪಾಧ್ಯಕ್ಷರು ಸುಬ್ರಹ್ಮಣ್ಯ ಹೆಬ್ಬಾಗಿಲು, ಐಸಿಸಿ ಪ್ರಧಾನ ಕಾರ್ಯದರ್ಶಿ ಕೃಷ್ಣಕುಮಾರ್ ಅವರು ಶ್ರೀ ಅಸೀಮ್ ಅವರ ಸಾಧನೆಗಳ ಬಗ್ಗೆ ಶ್ಲಾಘನೀಯ ಭಾಷಣ ಮಾಡಿದರು ಮತ್ತು ಪ್ರತಿಯಾಗಿ ಶ್ರೀ ಅಸೀಮ್ ಅವರು ಈ ಗೌರವಕ್ಕಾಗಿ ಪಾಲಕ್ಕಡನ್ ನಟ್ಟರಂಗು ಕತಾರ್ ಮತ್ತು ICC ಗೆ ಧನ್ಯವಾದಗಳನ್ನು ತಿಳಿಸಿ ಅವರ ವಿಶಾಲ ಭವಿಷ್ಯದ ದೃಷ್ಟಿಕೋನಗಳ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ಪಾಲಕ್ಕಡನ್ ನಟ್ಟರಂಗು ಕತಾರ್ ಸದಸ್ಯರು ಮತ್ತು ಮೇಳಮ್ ದೋಹಾ ಅವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರದರ್ಶಿಸಿದರು.

ಪಾಲಕ್ಕಡನ್ ನಟ್ಟರಂಗು ಕತಾರ್ ಉಪಾಧ್ಯಕ್ಷರಾದ ಶ್ರೀ ವಾಸುದೇವನ್ ನಂಬೀಸನ್ ವಂದನಾರ್ಪಣೆ ಮಾಡಿದರು ಮತ್ತು PNQ ಖಜಾಂಚಿ ಶ್ರೀ ಚಂದ್ರಶೇಖರ್ ಕಾರ್ಯಕ್ರಮವನ್ನು ನಿರೂಪಿಸಿದರು.


Spread the love