Home Mangalorean News Kannada News ವಿಜಯಡ್ಕ: ನೇಜಿ ನೆಡುವ ಕಾರ್ಯಕ್ರಮ

ವಿಜಯಡ್ಕ: ನೇಜಿ ನೆಡುವ ಕಾರ್ಯಕ್ರಮ

Spread the love

ವಿಜಯಡ್ಕ: ನೇಜಿ ನೆಡುವ ಕಾರ್ಯಕ್ರಮ

ವಿಟ್ಲ: ಸಂತ ಲಾರೆನ್ಸ್ ದೇವಾಲಯಕ್ಕೆ ಒಳಪಟ್ಟ ಗದ್ದೆಯಲ್ಲಿ ಜುಲೈ 19 ರಂದು ನೇಜಿ ನೆಡುವ ಕಾರ್ಯಕ್ರಮ ನಡೆಯಿತು.

ಈ ಗದ್ದೆಯಲ್ಲಿ ಕಳೆದ 40 ವರ್ಷದಲ್ಲಿ ಭತ್ತದ ಕೃಷಿ ಮಾಡಲಾಗುತ್ತದೆ. ಆದರೆ ಕಳೆದ ನಾಲ್ಕು ವರ್ಷಗಳಿಂದ ಸಂತ ಲಾರೆನ್ಸ್ ದೇವಾಲಯದ ಧರ್ಮಗುರುಗಳಾದ ಮೈಕಲ್ ಮಸ್ಕರೇನಸ್ ಹಾಗೂ ದೇವಾಲಯದ ಪಾಲನಾ ಮಂಡಳಿಯ ನೇತೃತ್ವದಲ್ಲಿ ಸುಮಾರು 150ಕ್ಕೂ ಹೆಚ್ಚು ದೇವಾಲಯದ ಕುಟುಂಬ ಸದಸ್ಯರು ಸೇವಾ ಮನೋಬಾವದೊಂದಿಗೆ ಶ್ರಮಾದಾನದ ಮೂಲಕ ಕೇವಲ ಅರ್ಧ ದಿವಸದಲ್ಲಿ ಸುಮಾರು 2 ಎಕರೆ ಗದ್ದೆಯಲ್ಲಿ ನೇಜಿ ನೆಡುವ ಕಾರ್ಯಕ್ರಮ ನಡೆಯುತ್ತದೆ.ಇದೇ ರೀತಿ ಮೂರು ತಿಂಗಳ ನಂತರ ಭತ್ತದ ಕಟಾವು ನಡೆಯುತ್ತದೆ.

image001vijayadka-church-paddy-cultivation

ಸಿಗುವ ಅಕ್ಕಿಯನ್ನು ದೇವಾಲಯದ ಹಬ್ಬಕ್ಕೆ, ದ್ಯಾನಕೂಟಕ್ಕೆ, ಯವಜನರ, ಮಕ್ಕಳ ಶಿಬಿರಗಳಿಗೆ ಹಾಗೂ ದೇವಾಲಯದ ಇನ್ನಿತರ ಕಾರ್ಯಕ್ರಮದ ಭೋಜನಕ್ಕೆ ಬಳಸಲಾಗುತ್ತದೆ. ದೇವಾಲಯದ ಕುಟುಂಬ ಸದಸ್ಯರು ಈ ನೇಜಿ ನೆಡುವ ಹಾಗೂ ಭತ್ತದ ಕಟಾವು ಅನ್ನು ಅತ್ಯಂತ ಸಂಬ್ರಮದಿಂದ ನಡೆಸಲಾಗುತ್ತದೆ.


Spread the love

Exit mobile version