Home Mangalorean News Kannada News ವಿಟ್ಲ: ಕಾರಿಗೆ ಟಿಪ್ಪರ್‌ ಢಿಕ್ಕಿ; ಓರ್ವ ಮೃತ್ಯು, ಮಗು ಸಹಿತ ಇಬ್ಬರು ಗಂಭೀರ

ವಿಟ್ಲ: ಕಾರಿಗೆ ಟಿಪ್ಪರ್‌ ಢಿಕ್ಕಿ; ಓರ್ವ ಮೃತ್ಯು, ಮಗು ಸಹಿತ ಇಬ್ಬರು ಗಂಭೀರ

Spread the love

ವಿಟ್ಲ: ಕಾರಿಗೆ ಟಿಪ್ಪರ್‌ ಢಿಕ್ಕಿ; ಓರ್ವ ಮೃತ್ಯು, ಮಗು ಸಹಿತ ಇಬ್ಬರು ಗಂಭೀರ

ವಿಟ್ಲ: ಮಿನಿ ಟಿಪ್ಪರ್ ಮತ್ತು ಆಲ್ಟೊ ಕಾರು ನಡುವೆ ಭೀಕರ ಅಪಘಾತ ಸಂಭವಿಸಿ, ಕಾರಿನಲ್ಲಿದ್ದ ಚಾಲಕ ಮೃತಪಟ್ಟಿದ್ದು ಹಾಗೂ ಆತನ ಸಹೋದರಿ ಮತ್ತು ಮಗು ಗಂಭೀರ ಗಾಯಗೊಂಡ ಘಟನೆ ವೀರಕಂಭ ಗ್ರಾಮದ ಕೆಲಿಂಜದಲ್ಲಿ ನಡೆದಿದೆ.

ಮೃತ ಚಾಲಕನನ್ನು ಅನಂತಾಡಿ ಆಶ್ವತ್ತಡಿ ಮೂಲದ ಅನೀಶ್ ಎಂದು ಗುರುತಿಸಲಾಗಿದೆ. ಕಲ್ಲಡ್ಕದಿಂದ ವಿಟ್ಲ ಕಡೆ ಬರುತ್ತಿದ್ದ ಆಲ್ಟೊ ಕಾರಿಗೆ ವಿಟ್ಲದಿಂದ ಕಲ್ಲಡ್ಕ ಕಡೆ ಚಲಿಸುತ್ತಿದ್ದ ಮಿನಿ ಟಿಪ್ಪರ್ ಢಿಕ್ಕಿ ಹೊಡೆದಿದ್ದು, ಪರಿಣಾಮ ಕಾರಿನಲ್ಲಿದ್ದ ಅನೀಶ್ ಹಾಗೂ ಅವರ ಸಹೋದರಿ ಮತ್ತು ಮಗು ಗಂಭೀರ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಸೋಮವಾರ ತಡರಾತ್ರಿ ಚಾಲಕ ಅನೀಶ್ ಅನಂತಾಡಿ (34) ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.


Spread the love

Exit mobile version