
Spread the love
ವಿಟ್ಲ: ಬಿಜೆಪಿ – ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಗಳ; ದೂರು, ಪ್ರತಿದೂರು ದಾಖಲು
ವಿಟ್ಲ: ಮಾಣಿ ಜಂಕ್ಷನ್ ನಲ್ಲಿ ಕ್ಷುಲ್ಲಕ ಕಾರಣಕ್ಕೆ ಕಾಂಗ್ರೆಸ್ – ಬಿಜೆಪಿ ಕಾರ್ಯಕರ್ತರ ನಡುವೆ ಹಲ್ಲೆ ನಡೆದಿದ್ದು, ವಿಟ್ಲ ಠಾಣೆಯಲ್ಲಿ ಬುಧವಾರ ದೂರು ಪ್ರತಿದೂರು ದಾಖಲಾಗಿದೆ.
ಕಾಂಗ್ರೆಸ್ ಕಾರ್ಯಕರ್ತರಾದ ರಾಕೇಶ್, ಮಂಜುನಾಥ್, ರಾಜೇಶ್ ಮತ್ತು ಇತರರ ಮೇಲೆ ಪ್ರಕರಣ ದಾಖಲಾಗಿದೆ.
ಬಿಜೆಪಿ ಕಾರ್ಯಕರ್ತ ಮಾಣಿ ಕೊಡಾಜೆ ನಿವಾಸಿ ಮಹೇಂದ್ರ (26) ಗಾಯಾಳು.
ಮಾಣಿ ಗ್ರಾಮದ ಪಟ್ಲಕೋಡಿ ಎಂಬಲ್ಲಿ ಅನಂತಾಡಿ ಕರಿಂಕ ನಿವಾಸಿ ಈಶ್ವರ ನಾಯ್ಕ ಯಾನೆ ಪ್ರವೀಣ್ ನಾಯ್ಕ (28)ಗೆ ಅವಾಚ್ಯವಾಗಿ ನಿಂದಿಸಿ ಜಾತಿ ನಿಂದನೆ ನಡೆಸಲಾಗಿದೆ ಎಂದು ಆರೋಪಿಸಲಾಗಿದ್ದು, ಮಹೇಂದ್ರ, ಪ್ರಶಾಂತ್, ಚರಂಜೀವಿ, ಪ್ರವೀಣ್ , ದೇವಿಪ್ರಸಾದ್, ಹರೀಶ್ ವಿರುದ್ಧ ದೂರು ನೀಡಲಾಗಿದೆ.
Spread the love