Home Mangalorean News Kannada News ವಿಟ್ಲ: ರಿಕ್ರಿಯೇಶನ್ ಕ್ಲಬ್ಬಿಗೆ ದಾಳಿ – 25 ಮಂದಿ ಬಂಧನ

ವಿಟ್ಲ: ರಿಕ್ರಿಯೇಶನ್ ಕ್ಲಬ್ಬಿಗೆ ದಾಳಿ – 25 ಮಂದಿ ಬಂಧನ

Spread the love

ವಿಟ್ಲ: ರಿಕ್ರಿಯೇಶನ್ ಕ್ಲಬ್ಬಿಗೆ ದಾಳಿ – 25 ಮಂದಿ ಬಂಧನ

ವಿಟ್ಲ: ಅಕ್ರಮವಾಗಿ ನಡೆಯುತ್ತಿದ್ದ ರಿಕ್ರಿಯೇಶನ್ ಕ್ಲಬ್ ಒಂದಕ್ಕೆ ವಿಟ್ಲ ಪೊಲೀಸರು ದಾಳಿ ನಡೆಸಿ 25 ಮಂದಿಯನ್ನು ಭಾನುವಾರ ಬಂಧಿಸಿದ್ದಾರೆ.

ಭಾನುವಾರ ವಿಟ್ಲ PSI ಯಲ್ಲಪ್ಪ ರಾಜೇಶ್, ಕೀರ್ತಿಕುಮಾರ್, ಠಾಣಾ ಸಿಬ್ಬಂದಿ ಪ್ರತಾಪ್ ರವರು ರೌಂಡ್ಸ್ ಕರ್ತವ್ಯದಲ್ಲಿರುವಾಗ ಕಬಕ ಬಳಿಯ ಕಬಕ ರಿಕ್ರಿಯೇಶನ್ ಕ್ಲಬ್ ನಲ್ಲಿ ಕಾನೂನು ಬಾಹಿರವಾಗಿ ಉಲಾಯಿ-ಪಿದಾಯಿ ಎಂಬ ಅದೃಷ್ಟದ ಆಟವನ್ನು ಆಡುತ್ತಿದ್ದ ಬಗ್ಗೆ ಮಾಹಿತಿ ಬಂದಿದ್ದು ಅದರಂತೆ ASP ಬಂಟ್ವಾಳ ರವರ ಸರ್ಚ ವಾರೆಂಟ್ ಪಡೆದು ಸದರಿ ಕ್ಲಬ್ ಗೆ ದಾಳಿ ಮಾಡಿ ಅಲ್ಲಿ ಉಲಾಯಿ-ಪಿದಾಯಿ ಆಡುತ್ತಿದ್ದ 25 ಜನ,ಆಟಕ್ಕೆ ಬಳಸಿದ್ದ ₹ 76570/- ವಶಕ್ಕೆ ಪಡೆದಿದ್ದಾರೆ.

ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Exit mobile version