ವಿದೇಶಿ ವಿದ್ಯಾರ್ಥಿಗಳು ವಾಸ್ತವ್ಯದ ಮಾಹಿತಿಯನ್ನು ಆನ್ ಲೈನ್ ಮೂಲಕ ನೊಂದಾಯಿಸಿ – ನಗರ ಪೊಲೀಸರ ಸೂಚನೆ

Spread the love

ವಿದೇಶಿ ವಿದ್ಯಾರ್ಥಿಗಳು ವಾಸ್ತವ್ಯದ ಮಾಹಿತಿಯನ್ನು ಆನ್ ಲೈನ್ ಮೂಲಕ ನೊಂದಾಯಿಸಿ – ನಗರ ಪೊಲೀಸರ ಸೂಚನೆ

ಮಂಗಳೂರು: ವಿದೇಶಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಸಂಸ್ಥೆಗಳಿಂದ ಮಾಹಿತಿಗಳನ್ನು ಆನ್ ಲೈನ್ ಮೂಲಕ ಎಸ್ ಫಾರ್ಮ್ ನಲ್ಲಿ ನೊಂದಾಯಿಸಿಕೊಳ್ಳುವಂತೆ ನಗರ ಪೊಲೀಸ್ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯವರು ಸೂಚಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು ವಿದೇಶಿಯರು ಮಂಗಳೂರು ನಗರಕ್ಕೆ ಆಗಮಿಸಿದಾಗ ನಗರದ ಹೋಟೆಲ್/ಲಾಡ್ಜ್/ಅತಿಥಿಗೃಹ, ಸರ್ವಿಸ್ ಅಪಾರ್ಟ್ ಮೆಂಟ್ ಗಳಲ್ಲಿ ವಾಸ್ತವ್ಯ ಹೂಡಲಿರುತ್ತಾಋಎ ಹಾಗೂ ಅನಾರೋಗ್ಯದ ಸಮಸ್ಯೆಗಳಿಂದಾಗಿ ಚಿಕಿತ್ಸೆ ಬಗ್ಗೆ ನಗರದ ಆಸ್ಪತ್ರೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆನ್ ಲೈನ್ ಮುಖಾಂತರ ಸಿ ಫಾರ್ಮ್ ಮತ್ತು ವಿದೇಶಗಳಿಂದ ಶಿಕ್ಷಣದ ಬಗ್ಗೆ ಮಂಗಳೂರು ನಗರದ ವಿವಿಧ ಶೀಕ್ಷಣ ಸಂಸ್ಥೆಗಳಿಗೆ ಆಗಮಿಸಿದ ವಿದೇಶಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಶಿಕ್ಷಣ ಸಂಸ್ಥೆಗಳಿಂದ ಮಾಹಿತಿಯನ್ನು ಆನ್ ಲೈನ್ ಮುಖಾಂತರ ನೊಂದಾಯಿಸಿಕೊಳ್ಳುವ ಎಸ್ ಫಾರ್ಮ್ ನಲ್ಲಿನ ವಿದೇಶಿಯರ ಮಾಹಿತಿಗಳನ್ನು ಕಡ್ಡಾಯವಾಗಿ ನೋಂದಾಯಿಸುವಂಥೆ ಈಗಾಗಲೇ ಈ ಹಿಂದೆ ಪತ್ರಿಕಾ ಪ್ರಕಟಣೆ ಹಾಗೂ ಸಭೆಗಳಲ್ಲಿ ನಗರದ ಲಾಡ್ಜ್ ಹೋಟೆಲ್ ಅತಿಥಿಗೃಹ, ಸರ್ವಿಸ್ ಅಪಾರ್ಟ್ ಮೆಂಡ್ ಹಾಗೂ ಶಿಕ್ಷಣ ಸಂಸ್ಥೆಗಳು ಹಾಗೂ ಇತರ ಪ್ರಾಧಿಕಾರಗಳಿಗೆ ಮನವಿ ಮಾಡಲಾಗಿರುತ್ತದೆ ಆದರೂ ಕೆಲವು ವಿದೇಶಿಗರು ತಂಗುವಂತಹ ಮಾಹಿತಿಯನ್ನು ನಮೂದಿಸಿಲ್ಲ

ರಾಷ್ಟ್ರೀಯ ಭದ್ರತಾ ಹಿತದೃಷ್ಠಿಯಿಂದ ವಿದೇಶದಿಂದ ಆಗಮಿಸುವ ವಿದೇಶಿಗರ ಚಲನವಲನಗಳ ಸ್ಪಷ್ಟ ಮಾಹಿತಿಯನ್ನು ಹೊಂದಿರುವುದು ಅಗತ್ಯವಾಗಿರುತ್ತದೆ ಹಾಗೂ ವಿದೇಶಿಗರು ನಗರದಲ್ಲಿ ತಂಗುವಂತಹ ವಾಸ ಸ್ಥಳದ ಮಾಹಿತಿಯನ್ನು ಅವರುಗಳು ವಾಸ್ತವ್ಯ ಹೂಡಿದ 24 ಗಂಟೆಗಳ ಒಳಗಾಗಿ ಮಾಹಿತಿಯನ್ನು ಸಿ ಫಾರ್ಮ್ ನಲ್ಲಿ ಅನ್ ಲೈನ್ ಮೂಲಕ ಆಗಮನ ಮತ್ತು ನಿರ್ಗಮನ ದಿನಾಂಕ ಮತ್ತು ಸಮಯವನ್ನು ನಮೂದಿಸುವುದು ಕಡ್ಡಾಯವಾಗಿರುತ್ತದೆ.

ಆದರುದರಿಂದ ವಿದೇಶಿಯವರು ವಾಸ್ತವ್ಯವಿರುವ ಮತ್ತು ನಿರ್ಗಮಿಸುವ ಮಾಹಿತಿಯನ್ನು ಕಡ್ಡಾಯವಾಗಿ ದಾಖಲಿಸಿಕೊಳ್ಳುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love