ವಿದ್ಯಾರ್ಥಿಗಳಿಂದ ಆನ್ ಲೈನ್ ತರಗತಿ ಬಹಿಷ್ಕಾರ

Spread the love

ವಿದ್ಯಾರ್ಥಿಗಳಿಂದ ಆನ್ ಲೈನ್ ತರಗತಿ ಬಹಿಷ್ಕಾರ

ಮೈಸೂರು: ಹಿಂದಿನ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಬಾರದು ಮತ್ತು ಎರಡು ಡೋಸ್ ಉಚಿತ ಲಸಿಕೆ ಆಗುವವರೆಗೂ ಆಫ್ ಲೈನ್ ತರಗತಿ ಅಥವಾ ಪರೀಕ್ಷೆಗಳು ನಡೆಯಬಾರದು ಎಂಬ ಕೂಗಿಗೆ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಸ್ಪಂದಿಸಿದ್ದಾರೆ. ಇಂದು ಸ್ವಯಂಪ್ರೇರಿತವಾಗಿ ಆನ್ ಲೈನ್ ತರಗತಿಗಳನ್ನು ಬಹಿಷ್ಕರಿಸಿದ್ದಾರೆ.

ಮೈಸೂರಿನ ಹತ್ತಾರು ಕಾಲೇಜುಗಳಿಂದಲೂ ವಿದ್ಯಾರ್ಥಿಗಳು ತರಗತಿ ಬಹಿಷ್ಕಾರ ಮಾಡಿದ್ದು ಪ್ರಮುಖವಾಗಿ ವಿದ್ಯಾವರ್ಧಕ ಪಾಲಿಟೆಕ್ನಿಕ್, ಎಂಐಟಿ ಫಸ್ಟ್ ಗ್ರೇಡ್ ಕಾಲೇಜ್, CPC ಪಾಲಿಟೆಕ್ನಿಕ್, ವಿದ್ಯವಿಕಾಸ್, ಜೆಎಸ್ಎಸ್, Jss women’s ಬನುಮಯ್ಯ ಪಾಲಿಟೆಕ್ನಿಕ್

ಮೊದಲಾದ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಆನ್ಲೈನ್ ತರಗತಿಗಳಲ್ಲಿ ಹಾಜರಾಗದೆ, ಈ ತರಗತಿಗಳನ್ನು ಬಹಿಷ್ಕರಿಸುವ ಮೂಲಕ ಯಶಸ್ವಿಯಾಗಿ ಹೋರಾಟದಲ್ಲಿ ಭಾಗವಹಿಸಿದ್ದಾರೆ..

ಆನ್ ಲೈನ್ ತರಗತಿ ಬಹಿಷ್ಕಾರದ ಯಶಸ್ಸು, ವಿದ್ಯಾರ್ಥಿಗಳು ಮತ್ತು ನಮ್ಮ ಬೇಡಿಕೆಗಳಿಗೆ ಪೋಷಕರು, ಶಿಕ್ಷಕರ ಬೆಂಬಲ ದೊಡ್ಡ ಮಟ್ಟದಲ್ಲಿ ಬೆಂಬಲ ಸೂಚಿಸಿದೆ.

ರಾಜ್ಯದಲ್ಲಿಯೂ ಇತರೆ ಜಿಲ್ಲೆಗಳಲ್ಲಿ ಹಲವು ಪ್ರತಿಷ್ಠಿತ ವಿವಿ ಹಾಗೂ ಕಾಲೇಜುಗಳು ನೂರಾರು ಸಂಖ್ಯೆಯಲ್ಲಿ ಬಂದ್ ಆಗಿವೆ. ಗುಲ್ಬರ್ಗಾ ವಿವಿಯಡಿಯಲ್ಲಿ ಬರುವ ಕಾಲೇಜುಗಳು, ಬಳ್ಳಾರಿಯ ಶ್ರೀ ಕೃಷ್ಣ ದೇವರಾಯ ವಿವಿ, ಧಾರವಾಡ ವಿವಿ, ಬಿಜಾಪುರ ವಿವಿ ಇವು ಸಂಪೂರ್ಣ ಆನ್ ಲೈನ್ ತರಗತಿ ಬಹಿಷ್ಕಾರಕ್ಕೆ ಸಾಕ್ಷಿಯಾಗಿವೆ.


Spread the love