Home Mangalorean News Kannada News ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡಲು ಯತ್ನಿಸಿದ ಆರೋಪ: ಐವರು ಆರೋಪಿಗಳಿಗೆ 12 ರಿಂದ 14...

ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡಲು ಯತ್ನಿಸಿದ ಆರೋಪ: ಐವರು ಆರೋಪಿಗಳಿಗೆ 12 ರಿಂದ 14 ವರ್ಷ ಕಠಿಣ ಸಜೆ

Spread the love

ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡಲು ಯತ್ನಿಸಿದ ಆರೋಪ: ಐವರು ಆರೋಪಿಗಳಿಗೆ 12 ರಿಂದ 14 ವರ್ಷ ಕಠಿಣ ಸಜೆ

ಮಂಗಳೂರು: ಮಂಗಳೂರು ನಗರದ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಎಂಡಿಎಂ ಮಾರಾಟ ಮಾಡಲು ಯತ್ನಿಸಿದ ಆರೋಪ ಎದುರಿಸುತ್ತಿದ್ದ ಐವರು ಆರೋಪಿಗಳಿಗೆ ಮಂಗಳೂರಿನ ಜಿಲ್ಲಾ ಪ್ರಧಾನ ನ್ಯಾಯಾಲಯವು 12ರಿಂದ 14 ವರ್ಷಗಳ ಕಠಿಣ ಸಜೆ ವಿಧಿಸಿದೆ.

ಆರೋಪಿಗಳಾದ ಬೆಂಗಳೂರು ವರ್ತೂರಿನ ಗುಂಟೂರ್ ಪಾಳ್ಯದ ಲುವಾಲ್ ಡೇನಿಯಲ್ ಜಸ್ಟಿನ್ ಬೌಲೊ ಅಲಿಯಾಸ್ ಡ್ಯಾನಿ, ಉಪ್ಪಳದ ಮುಹಮ್ಮದ್ ರಮೀಜ್ ಅಲಿಯಾಸ್ ಮುಹಮ್ಮದ್ ಮೀಜ್ , ಕಾಸರಗೋಡು ಕುನ್ನಿಲ್‌ನ ಮೊಯ್ದೀನ್, ಉಪ್ಪಳದ ಅಬ್ದುಲ್ ರವೂಪ್ ಮತ್ತು ಬೆಂಗಳೂರು ಮಡಿವಾಳದ ಸಬಿತಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಆರೋಪಿ ಲೋವೆಲ್ ಡೇನಿಯಲ್ ಜಸ್ಟಿನ್ ಬೌಲೋ ಅಲಿಯಾಸ್ ಡ್ಯಾನಿಗೆ ಎನ್‌ಡಿಪಿಎಸ್ ಆ್ಯಕ್ಟ್ 21, 21(ಸಿ) , 27(ಬಿ) ಪ್ರಕಾರ 12 ವರ್ಷ ಮತ್ತು 6 ತಿಂಗಳು ಕಠಿಣ ಸಜೆ ಮತ್ತು 1,35 ,000 ದಂಡ. ಮುಹಮ್ಮದ್ ರಮೀಜ್‌ಗೆ 14 ವರ್ಷ ಮತ್ತು 6 ತಿಂಗಳು 1,55,000 ದಂಡ. ಮೊಯಿದ್ದೀನ್ ರಶೀದ್‌ಗೆ 12 ವರ್ಷ ಮತ್ತು 6 ತಿಂಗಳು ಮತ್ತು 1,35,000 ದಂಡ. ಅಬ್ದುಲ್ ರವೂಫ್‌ಗೆ 13 ವರ್ಷ ಮತ್ತು 6 ತಿಂಗಳು ಕಠಿಣ ಸಜೆ 1,45,000 ದಂಡ. ಸಬಿತಾ ಅಲಿಯಾಸ್ ಚಿಂಚುಗೆ 12 ವರ್ಷ ಮತ್ತು 6 ತಿಂಗಳು 1, 35,000 ದಂಡ ವಿಧಿಸಿ ನ್ಯಾಯಾಲಯವು ತೀರ್ಪು ನೀಡಿದೆ.

2022ರ , ಜೂ.6ರಂದು ಮಂಗಳೂರು ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್ ತಮ್ಮ ತಂಡದೊಂದಿಗೆ ದಾಳಿ ನಡೆಸಿ ವಿದ್ಯಾರ್ಥಿಗಳಿಗೆ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಲ್ಲಿ ಐವರನ್ನು ಬಂಧಿಸಿ, ಅವರ ಬಳಿಯಿಂದ 125 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದರು. ಈ ಸಂಬಂಧ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸ್ ಇನ್ಸ್‌ಪೆಕ್ಟರ್ ತನಿಖೆಯನ್ನು ಪೂರ್ಣಗೊಳಿಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ಮಂಗಳೂರಿನ ಪ್ರಧಾನ ಜಿಲ್ಲಾ ನ್ಯಾಯಾಧೀಶರು (ಪಿಡಿಜೆ ) ಈ ವಿಷಯದಲ್ಲಿ ಎಲ್ಲಾ ಆರೋಪಿಗಳನ್ನು ದೋಷಿಗಳೆಂದು ತೀರ್ಮಾನಿಸಿ ತೀರ್ಪು ನೀಡಿದೆ. ಮಂಗಳೂರಿನ ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯದ ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಅವರು ಸರಕಾರದ ಪರ ವಾದಿಸಿದ್ದರು.


Spread the love

Exit mobile version