
Spread the love
ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ 7 ಆರೋಪಿಗಳ ಬಂಧನ
ಮಂಗಳೂರು: ನಗರದ ಖಾಸಗಿ ಕಾಲೇಜಿನ ಬಳೀ ಶಾಮೀರ್ ಹಾಗೂ ಇಬ್ರಾಹಿಂ ಫಾಹೀಮ್ ಎಂಬವರನ್ನು ತಾಬೀಶ್ ಹಾಗೂ ಆತನ ಸಹಚರರು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಮಂಗಳೂರು ಉತ್ತರ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ,
ಬಂಧಿತರನ್ನು ಪಾಣೆಮಂಗಳೂರು ನಿವಾಸಿ ಇಬ್ರಾಹಿಂ ತಾಬೀಶ್(19), ಬಂಟ್ವಾಳ ನಿವಾಸಿ ಅಬ್ದುಲ್ಲಾ ಹನ್ನಾನ್ (19), ಮೊಹಮ್ಮದ ಶಕೀಫ್ (19), ಮೊಹಮ್ಮದ್ ಶಾಯಿಕ್ (19), ಯುಪಿ ತನ್ವೀರ್ (20), ಅಬ್ದುಲ್ ರಶೀದ್ (19) ಮತ್ತು ಮನ್ಸೂರ್ (37) ಎಂದು ಗುರುತಿಸಲಾಗಿದೆ.
ನಗರ ಪೊಲೀಸ್ ಆಯುಕ್ತ, ಉಪ ಆಯುಕ್ತರ ಸೂಚನೆಯಂತೆ ಉತ್ತರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬಂದಿಗಳ ತಂಡ ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
Spread the love