ವಿದ್ಯಾರ್ಥಿನಿ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟ ಶಿಕ್ಷಕರಿಗೆ ಮುರಳಿ ಕಡೆಕಾರ್ ಗೆ ಸಚಿವ ಸುರೇಶ್ ಕುಮಾರ್ ಧನ್ಯವಾದ

Spread the love

ವಿದ್ಯಾರ್ಥಿನಿ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟ ಶಿಕ್ಷಕರಿಗೆ ಮುರಳಿ ಕಡೆಕಾರ್ ಗೆ ಸಚಿವ ಸುರೇಶ್ ಕುಮಾರ್ ಧನ್ಯವಾದ

ಉಡುಪಿ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ನಿವೃತ್ತ ಶಿಕ್ಷಕ ಮುರಳಿ ಕಡೇಕರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಾ, ವಿದ್ಯಾರ್ಥಿನಿ ನಯನಾ ವರ ಕುಟುಂಬಕ್ಕೆ ಉತ್ತಮ ಮನೆಯನ್ನು ಒದಗಿಸಿದ ಅವರ ಉದಾತ್ತ ಕೆಲಸಕ್ಕೆ ಧನ್ಯವಾದ ಹೇಳಿದ್ದಾರೆ. ಮುರಳಿ ಕಡೇಕರ್, ಅಕ್ಟೋಬರ್ 31 ರಂದು ಸರ್ಕಾರಿ ಅನುದಾನಿತ ನಿಟ್ಟೂರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾದರು.

ಒಂಬತ್ತನೇ ತರಗತಿ ವಿದ್ಯಾರ್ಥಿನಿ ನಯನಾ ವಾಸಿಸುವ ಮನೆಯ ಸ್ಥಿತಿಯ ಬಗ್ಗೆ ಕಳವಳಗೊಂಡಿದ್ದ ಮುರಳಿಕಡೇಕರ್, ಕುಟುಂಬಕ್ಕೆ ಸುಸ್ಥಿತಿಯಲ್ಲಿರುವ ಹೊಸ ಮನೆಯನ್ನು ಒದಗಿಸಲು ತನ್ನ ಸ್ವಂತ ಹಣವನ್ನು ಖರ್ಚು ಮಾಡಿದ್ದಾರೆ. ಉನ್ನತ ಶಿಕ್ಷಣವನ್ನು ಪಡೆಯಲು ನಯಾನಾಗೆ ಆರ್ಥಿಕ ನೆರವು ನೀಡಲು ನಿರ್ಧರಿಸಿದ್ದಾರೆ.

ಫೇಸ್‌ಬುಕ್ ಪೋಸ್ಟ್‌ನಲ್ಲಿ ಸಚಿವರು ಮುರಳಿ ಕಡೇಕರ್ ಅವರನ್ನು ಶ್ಲಾಘಿಸಿ ಬರೆದಿದ್ದು “ಇದೀಗ ಶ್ರೀ ಮುರಳಿ ಕಡೇಕರ್ ರೊಂದಿಗೆ ಮಾತನಾಡಿ ಅವರಿಗೆ ಅವರಿಗೆ ಧನ್ಯವಾದಗಳನ್ನು ತಿಳಿಸಿದೆ. ಅತ್ಯಂತ ನಿರ್ಲಿಪ್ತ ಭಾವನೆಯಿಂದ ಅವರು ನನ್ನ ಧನ್ಯವಾದಗಳನ್ನು ಸ್ವೀಕರಿಸಿದ್ದು ಒಂದು ವಿಶೇಷವೇ! ಮುರುಳಿ ಕಡೇಕರ್ ಉಡುಪಿಯ ಸರಕಾರಿ ಅನುದಾನಿತ ನಿಟ್ಟೂರು ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ಮೊನ್ನೆ ನಿವೃತ್ತಿ ಹೊಂದಿದರು.

ನಿವೃತ್ತಿ ಆಗಿರುವ ಈ ಶಿಕ್ಷಕ ಅವರ ಶಾಲೆಯ ಒಂಬತ್ತನೇ ತರಗತಿಯ ಬಾಲಕಿ ನಯನ ಳ ಕುಟುಂಬ ವಾಸವಾಗಿದ್ದ ಮನೆಯ ಪರಿಸ್ಥಿತಿ ಗಮನಿಸಿ ತನ್ನ ಸ್ವಂತ ಹಣದಿಂದ ಒಂದು ಒಳ್ಳೆಯ ಮನೆಯನ್ನು ಕಟ್ಟಿಸಿಕೊಟ್ಟು ಕೃತಾರ್ಥರಾಗಿದ್ದಾರೆ.

“ಇಷ್ಟೇ ಅಲ್ಲದೆ ನಯನಾ ಳ ಉನ್ನತ ಶಿಕ್ಷಣಕ್ಕೂ ಆರ್ಥಿಕ ಸಹಾಯ ಮಾಡುವೆನೆಂದು ನಿರ್ಧರಿಸಿದ್ದಾರೆ. ಇಂತಹ ಶಿಕ್ಷಕರೇ ಸಮಾಜದ ನಿಜವಾದ ಶಕ್ತಿ. ಮುರಳಿ ಕಡೆಕಾರ್ ಅವರ ಈ ಪ್ರವೃತ್ತಿ ಮುಂದುವರಿಯಲು ಅವರಿಗೆ ಅಗತ್ಯ ಚೈತನ್ಯ ಭಗವಂತ ನೀಡಲಿ.” ಎಂದಿದ್ದಾರೆ.

ಈ ಸಂಬಂಧ ಮಾದ್ಯಮ ಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ ಮುರಳಿ ಕಡೇಕರ್ ಸಚಿವರು ತಮ್ಮ ಕೆಲಸವನ್ನು ಗುರುತಿಸಿರುವುದು ಸಂತಸ ತಂದಿದೆ ಎಂದಿದ್ದಾರೆ.


Spread the love