
ವಿದ್ಯುತ್ ಗುತ್ತಿಗೆದಾರರ ಹಾಗೂ ಗ್ರಾಹಕರ ಸಮಸ್ಯೆಗೆ ಸ್ಪಂದಿಸಲು ಮನವಿ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ.) ಬೆಂಗಳೂರು ಇದರ ದ.ಕ ಜಿಲ್ಲಾ ಸಮಿತಿ ಮಂಗಳೂರು ಇದರ ನೂತನ ಪದಾಧಿಕಾರಿಗಳು ಒಳಗೊಂಡ ನಿಯೋಗವು ಇಂಧನ ಸಚಿವರಾದ ವಿ. ಸುನಿಲ್ ಕುಮಾರನ್ನು ಭೇಟಿ ಮಾಡಿ ವಿದ್ಯುತ್ ಗುತ್ತಿಗೆದಾರರ ಹಾಗೂ ಗ್ರಾಹಕರ ಸಮಸ್ಯೆಗಳ ಬಗ್ಗೆ ಮನವಿಯನ್ನು ನೀಡಲಾಯಿತು.
ಮುಖ್ಯವಾಗಿ ಕಳೆದ ಒಂದು ವರ್ಷಗಳಿಂದ ವಿದ್ಯುತ್ ಮೀಟರ್‍ಗಳ ಕೊರತೆಯಿಂದ ಹೊಸ ವಿದ್ಯುತ್ ಜೋಡನೆಗಳಿಗೆ ವಿಳಂಬ, ಮೆಸ್ಕಾಂ ಜಿಲ್ಲಾ ವ್ಯಾಪ್ತಿಯಲ್ಲಿ ಉಪವಿಭಾಗ, ಸೆಕ್ಷನ್ ವಿಭಾಗದಲ್ಲಿ ಖಾಲಿಯಿರುವ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಿಸುವುದು. ಪಿಡಬ್ಲೂಡಿ ಜಿಲ್ಲಾ ಪಂಚಾಯತ್ ಹಾಗೂ ಇನ್ನಿತರ ಇಲಾಖಾ ಕಾಮಗಾರಿಗಳನ್ನು ಟೆಂಡರ್ ಹಾಗೂ ಇನ್ನಿತರ ರೂಪದಲ್ಲಿ ನೀಡುವಾಗ ವಿದ್ಯುತ್ ಕಾಮಗಾರಿಯನ್ನು ಪ್ರತ್ಯೇಕವಾಗಿಟ್ಟು ಸಿವಿಲ್ ಕಾಮಗಾರಿಯನ್ನು ಮಾತ್ರ ಸಿವಿಲ್ ಗುತ್ತಿಗೆದಾರರಿಗೆ ನೀಡಿ, ಇದರಲ್ಲಿ ಬರುವ ವಿದ್ಯುತ್ ಕಾಮಗಾರಿಯನ್ನು ವಿದ್ಯುತ್ ಗುತ್ತಿಗೆದಾರರಿಗೆ ನೀಡುವಂತೆ ಸಂಬಂಧಪಟ್ಟವರಿಗೆ ಸೂಚಿಸಬೇಕು. ಇದೀಗ ನೂತನವಾಗಿ ಜಾರಿ ಬಂದಿರುವ ಸರ್ವರ್ ಎನರ್ಜಿ ಸಿಂಕ್ ಸಮಸ್ಯೆಯಿಂದ ಹೊಸ ಅರ್ಜಿಗಳು ಹಾಗೂ ಎಲ್ಲಾ ಕಛೇರಿ ಕೆಲಸಕ್ಕೆ ಗ್ರಾಹಕರು, ಗುತ್ತಿಗೆದಾರರು ಅಲೆದಾಡುವ ಪರಿಸ್ಥಿತಿ. ಬಡ ವಿದ್ಯುತ್ ಗುತ್ತಿಗೆದಾರರ ಅಭಿವೃದ್ಧಿ ನಿಗಮ ಸ್ಥಾಪನೆ, ಮೆಸ್ಕಾಂ ವ್ಯಾಪ್ತಿಯಲ್ಲಿ 1 ರಿಂದ 5 ಲಕ್ಷದವರೆಗೆ ಲೈನ್ ಕಾಮಗಾರಿಯನ್ನು ಟೆಂಡರ್ ಇಲ್ಲದೆ ಸಾಮಾನ್ಯ ಗುತ್ತಿಗೆದಾರರಿಗೆ ಕೆಲಸ ದೊರಕಿಸಿ ಕೊಡುವುದು.
ಗುತ್ತಿಗೆದಾರರು ವಿದ್ಯುತ್ ಲೈನ್ ಕಾಮಗಾರಿ ಅಪಘಾತ ನಡೆದಲ್ಲಿ ಗುತ್ತಿಗೆದಾರರಿಗೆ ಹೊಣೆ ಮಾಡದೆ ಇಲಾಖೆಯಿಂದ ಪರಿಹಾರ ಮೊತ್ತ ನೀಡುವಂತೆ ಕ್ರಮ ಕೈಗೊಳ್ಳುವುದು ಹಾಗೂ ಶತಮಾನದ ಆಚರಣಾ ವರ್ಷದಲ್ಲಿರುವ 2022 ರಾಜ್ಯ ಅನುಮತಿ ಪಡೆದ ಗುತ್ತಿಗೆದಾರರ ಸಂಘಕ್ಕೆ ಜಿಲ್ಲೆಯಲ್ಲಿ ಸಂಘಕ್ಕೆ ನಿವೇಶನ ಒದಗಿಸುವಂತೆ ಮನವಿಯನ್ನು ಜಿಲ್ಲಾಧ್ಯಕ್ಷರಾದ ಶ್ರೀ ಕುಶಲ್ ಪೂಜಾರಿ, ಮೆಸ್ಕಾಂ ಪ್ರತಿನಿಧಿ ಶ್ರೀ ಬಾಲಕೃಷ್ಣ ಸೆರ್ಕಳ, ಪ್ರಧಾನ ಕಾರ್ಯದರ್ಶಿ ಶ್ರೀ ಸುಶಿಲ್ ನೊರೊನ್ಹಾ, ಉಪಾಧ್ಯಕ್ಷರಾದ ಶ್ರೀ ರವಿ ಪ್ರಸಾದ್ ಕೆ.ಶೆಟ್ಟಿ ಮನವಿಯನ್ನು ನೀಡಿದರು. ಈ ಸಂದರ್ಭದಲ್ಲಿ ಖಜಾಂಜಿ ಶ್ರೀ ಪ್ರವೀಣ್ ಸುವರ್ಣ ಎಸ್., ಸಂಘಟನಾ ಕಾರ್ಯದರ್ಶಿ ಶ್ರೀ ಯೂಸುಫ್ ಎನ್. ಎ, ಮಾಜಿ ಉಪಾಧ್ಯಕ್ಷರಾದ ರವಿ ಸುವರ್ಣ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಚರಣ್ ಸನಿಲ್, ಮಂಗಳೂರು ಉಪಸಮಿತಿಯ ಅಧ್ಯಕ್ಷರಾದ ವಿವೇಕಾನಂದ, ಸದಸ್ಯರಾದ ಪದ್ಮನಾಭ ಮತ್ತು ನವೀನ್ ಕುಮಾರ್ ಉಪಸ್ಥಿತರಿದ್ದರು.