ವಿದ್ಯುತ್ ದರ ಹೆಚ್ಚಳ ಎಷ್ಟು ಸಮಂಜಸ – ಸುಶೀಲ್ ನೊರೊನ್ಹ

Spread the love

ವಿದ್ಯುತ್ ದರ ಹೆಚ್ಚಳ ಎಷ್ಟು ಸಮಂಜಸ – ಸುಶೀಲ್ ನೊರೊನ್ಹ

ಮಂಗಳೂರು: ಕರ್ನಾಟಕ ವಿದ್ಯುಚಕ್ತಿ ನಿಯಂತ್ರಣ ಅಯೋಗ ಎಕಾಎಕಿ ಕೊರೋನ ಹಾಗೂ ಲಾಕ್ ಡೌನ್ ಸಂಕಷ್ಟದಲ್ಲಿ ವಿರುವ ಜನಸಮಾನ್ಯರಿಗೆ ವಿದ್ಯುತ್ ದರ ಪರಿಷ್ಕರಣೆ ಮಾಡಿದ್ದು ದುರದ್ರಷ್ಟಕರ ಎಂದು ಜೆಡಿಎಸ್ ವಕ್ತಾರ ಸುಶೀಲ್ ನೊರೊನ್ಹ ಪ್ರತಿಕ್ರಿಯಿಸಿದ್ದಾರೆ .

ಅಯೋಗವು ತನ್ನದೇ ಸ್ವಾಯುತೆಯನ್ನು ಹೊಂದಿದ್ದು ಸರಕಾರ ಇದನ್ನು ನಿಯಂತ್ರಿಸಲು ವಿಫಲವಾಗಿರುವು ಶೋಚನೀಯ. ಕಳೆದ ಒಂದು ವರ್ಷದಲ್ಲಿ ಮೂರು ಬಾರಿ ದರವನ್ನು ಹೆಚ್ಚಳ ಮಾಡಿದ್ದು ಈ ಬಾರಿ ದರ ಹಾಗೂ ನಿಗದಿತ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ. ಒಬ್ಬ ಗ್ರಾಹಕನು ವಿದ್ಯುಚಕ್ತಿ ಬಳಸಲಿ ಅಥವಾ ಬಿಡಲಿ ಆದರೆ ನಿಗದಿತ ಶುಲ್ಕವನ್ನು ಪಾವತಿಸಬೇಕು ಇದು ಜನ ಸಮಾನ್ಯರಿಗೆ ದೊಡ್ಡ ಹೊರೆ. ಇದನ್ನು ಅಯೋಗವು ರದ್ದು ಮಾಡಬೇಕು.

ಮಾತ್ರವಲ್ಲದೇ ಇದೀಗ ಪರಿಷ್ಕ್ರತ ದರವನ್ನು ಹೆಚ್ಚಳ ಮಾಡಿ ಆದೇಶವನ್ನು ಹೊರಡಿಸಿದ್ದು ಎಪ್ರಿಲ್-ಮೇ ತಿಂಗಳ ಪರಿಷ್ಕ್ರತ ದರವನ್ನು ಗ್ರಾಹಕರು ಬಾಕಿ ಅದನ್ನು ಪಾವತಿಸಬೇಕೆಂದು ಯಾವ ನ್ಯಾಯ? ಆದರಿಂದ ಈ ರಾಜ್ಯದ ಇಂದನ ಖಾತೆ ಹೊಂದಿರುವ ಮಾನ್ಯ ಮುಖ್ಯಮಂತ್ರಿಗಳು ಮಧ್ಯ ಪ್ರವೇಶಿಸಿ ಈ ಆದೇಶವನ್ನು ಹಿಂಪಡೆಯುವಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಈ ಹಣವನ್ನು ಸರಕಾರವೇ ಭರಿಸಬೇಕು. ಅದೇ ರೀತಿ ಹಲವು ವಿದ್ಯುತ್ ಕಂಪೆನಿಗಳುವಿದ್ದು ಮೆಸ್ಕಾಂ ಬೆಸ್ಕಾಂ ಕಂಪೆನಿಗಳು ನಿರಂತರ ಲಾಭವನ್ನು ಗಳಿಸುತ್ತಿದ್ದು ಈ ಬಾಗದ ಜನರಿಗೆ ನಿರಂತರ ವಿದ್ಯುಚಕ್ತಿ ದರ ಏರಿಸುವುದು ಎಷ್ಟು ಸಮರ್ಪಕ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದಕ್ಶಿಣ ಕನ್ನಡ ಜಿಲ್ಲಾ ಜೆಡಿಎಸ್ ವಕ್ತಾರ ಸುಶೀಲ್ ನೊರೊನ್ಹ ಒತ್ತಾಯಿಸಿದ್ದಾರೆ.


Spread the love

Leave a Reply

Please enter your comment!
Please enter your name here