ವಿಧಾನ ಪರಿಷತ್ ಚುನಾವಣೆ; ಉಡುಪಿ ಜಿಲ್ಲೆಯಲ್ಲಿ ಬಿರುಸಿನ‌ ಮತದಾನ

Spread the love

ವಿಧಾನ ಪರಿಷತ್ ಚುನಾವಣೆ; ಉಡುಪಿ ಜಿಲ್ಲೆಯಲ್ಲಿ ಬಿರುಸಿನ‌ ಮತದಾನ

ಉಡುಪಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಬಿರುಸಿನ‌ ಮತದಾನ ನಡೆದಿದ್ದು, ಬೆಳಗ್ಗೆ 10 ಗಂಟೆಯವರೆಗೆ ಶೇ.43.91 ಮತದಾನ‌ ಆಗಿದ್ದು, ಉಡುಪಿ ಶಾಸಕ ರಘುಪತಿ ಭಟ್‌ ಅವರು ಎಲ್ಲಾ ಬಿಜೆಪಿ ನಗರ ಸದಸ್ಯರೊಂದಿಗೆ ಆಗಮಿಸಿ ಉಡುಪಿ ನಗರಸಭೆಯ ಮತಕೇಂದ್ರದಲ್ಲಿ ಮತದಾನ ಮಾಡಿದರು.

ರಾಜ್ಯದ ಇಂಧನ, ಕನ್ನಡ ಭಾಷೆ ಮತ್ತು ಸಂಸ್ಕೃತಿ ಇಲಾಖೆ ಸಚಿವ, ಕಾರ್ಕಳ ಕ್ಷೇತ್ರದ ಶಾಸಕ ವಿ ಸುನೀಲ್ ಕುಮಾರ್ ಅವರು ಕಾರ್ಕಳ ಪುರಸಭೆಯ ಕೇಂದ್ರದಲ್ಲಿ ಮತದಾನ ಮಾಡಿದರು.

ಪರಿಷತ್ ಚುನಾವಣೆಗೆ ಜಿಲ್ಲೆಯಲ್ಲಿ 158 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಜಿಲ್ಲೆಯ ಗ್ರಾಮ ಪಂಚಾಯತ್ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ಸದಸ್ಯರು ಸೇರಿದಂತೆ ಒಟ್ಟು 2505 ಮಂದಿ ಮತದಾರರು ತಮ್ಮ ಮತ ಚಲಾಯಿಸಲಿದ್ದು, ಎಲ್ಲಾ ಮತಗಟ್ಟೆಗಳಲ್ಲಿ ವೀಡಿಯೋಗ್ರಫಿ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ 8 ರಿಂದ ಮಧ್ಯಾಹ್ನ 4 ರ ವರೆಗೆ ಮತದಾನ ನಡೆಯಲಿದೆ

ಜಿಲ್ಲೆಯಲ್ಲಿ 2505 ಮತದಾರರ ಪೈಕಿ 553 ಮಹಿಳೆಯರು ಹಾಗೂ 547 ಪುರುಷರು ಸೇರಿದಂತೆ ಒಟ್ಟು 1100 ಮಂದಿ ಮತದಾನ ಮಾಡಿದರು.

ಜಿಲ್ಲೆಯಲ್ಲಿ ಉಡುಪಿ ತಾಲೂಕು ಕನಿಷ್ಟ ಶೇ.23.31 ಹಾಗೂ ಕಾರ್ಕಳ ತಾಲೂಕು ಗರಿಷ್ಠ ಶೇ. 72.60 ಮತದಾನ‌ ಆಗಿದೆ ಎಂದು ಮೂಲಗಳು ತಿಳಿಸಿವೆ.


Spread the love