ವಿಮಲಾ ವಿ.ಪೈ ನಿಧನ 

Spread the love

ವಿಮಲಾ ವಿ.ಪೈ ನಿಧನ 

ಮಂಗಳೂರು:  ದಿ|ಶ್ರೀ ಟಿ.ವಿ.ರಮಣ್ ಪೈ ಅವರ ಧರ್ಮಪತ್ನಿ ಶ್ರೀಮತಿ ವಿಮಲಾ ವಿ.ಪೈ , ದಿನಾಂಕ 6 ಸೆಪ್ಟೆಂಬರ್2022 ರಂದು ನಿಧನ ಹೊಂದಿದರು.

ಶ್ರೀಮತಿ ವಿಮಲಾ ಪೈ ಅವರು ಉದಾರ ಕೊಡುಗೈ ದಾನಿಗಳು ಆಗಿದ್ದರು. ಅವರು ಬಹಳಷ್ಟು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಿದ್ದಾರೆ.

ಅವರ ಆಸೆಯಂತೆ ಅವರ ಪುತ್ರ ಶ್ರೀ ಟಿ. ವಿ.ಮೋಹನದಾಸ್ ಪೈ ಅವರು, ಅವರ ತಂದೆ ಹಾಗೂ ನಮ್ಮ ಹಳೆ ವಿದ್ಯಾರ್ಥಿ ಆದ ಶ್ರೀ ಟಿ.ವಿ. ರಮಣ ಪೈ ಅವರ ಸ್ಮರಣಾರ್ಥ ಭವ್ಯವಾದ ಸಭಾಂಗಣವನ್ನು ಕೆನರಾ ಸಂಸ್ಥೆಗೆ ನೀಡಿರುತ್ತಾರೆ. ಶ್ರೀಮತಿ ವಿಮಲಾ ಪೈ ಅವರು ಸಮಾಜಕ್ಕೆ ನೀಡಿರುವ ಕೊಡುಗೆಗಳು ಚಿರಸ್ಮರಣೀಯವಾಗಿವೆ.

ಅವರ ಅಗಲಿಕೆಯ ಹಿನ್ನಲೆಯಲ್ಲಿ ಅವರ ಸಾಧನೆ, ಕೊಡುಗೆಗಳನ್ನು ಸ್ಮರಿಸಿ ಕೆನರಾ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಎಂ.ರಂಗನಾಥ್ ಭಟ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


Spread the love

Leave a Reply

Please enter your comment!
Please enter your name here