ವಿವಾದಾತ್ಮಕ ಹೇಳಿಕೆ ವಿಚಾರ : ಪಡುಮಲೆ ಕೋಟಿ ಚೆನ್ನಯರ ಗರಡಿಯಲ್ಲಿ ಜಗದೀಶ್ ಅಧಿಕಾರಿ ಕ್ಷಮೆಯಾಚನೆ

Spread the love

ವಿವಾದಾತ್ಮಕ ಹೇಳಿಕೆ ವಿಚಾರ : ಪಡುಮಲೆ ಕೋಟಿ ಚೆನ್ನಯರ ಗರಡಿಯಲ್ಲಿ ಜಗದೀಶ್ ಅಧಿಕಾರಿ ಕ್ಷಮೆಯಾಚನೆ

ಪುತ್ತೂರು  : ತನ್ನ ಹೇಳಿಕೆ ಮೂಲಕ ವಿವಾದಕ್ಕೆ ಕಾರಣವಾಗಿದ್ದ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಅವರು ಇಂದು ಕೋಟಿ-ಚೆನ್ನಯ್ಯರ ಪಡುಮಲೆ ಮೂಲ ಕ್ಷೇತ್ರದಲ್ಲಿ ತಪ್ಪು ಕಾಣಿಕೆ ಹಾಕಿ ಕ್ಷಮೆಯಾಚನೆ ಮಾಡಿದ್ದಾರೆ.

ಪುತ್ತೂರು ತಾಲೂಕಿನ ಪಡುಮಲೆಯಲ್ಲಿರುವ ಕೋಟಿ ಚೆನ್ನಯರ ಮೂಲಕ್ಷೇತ್ರದಲ್ಲಿ ದೇಯಿ ಬೈದೆತಿ ಅವರ ಸಮಾಧಿ ಸ್ಥಳದಲ್ಲಿ ಕೈ ಕಾಣಿಕೆಯಲ್ಲಿ ಒಪ್ಪಿಸಿದ್ದಾರೆ. ಕುವೆತೋಟದಲ್ಲಿ ಸುವರ್ಣಕೇದಗೆ ದೇಯಿ ಬೈದೆತಿಗೆ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ. ತನ್ನ ಹೇಳಿಕೆಯಿಂದ ಬಿಲ್ಲವ ಸಮುದಾಯಕ್ಕೆ ನೋವಾಗಿದೆ. ಈ ಹಿನ್ನೆಲೆಯಲ್ಲಿ ತಾನು ಪಡುಮಲೆಯ ಮೂಲಕ್ಷೇತ್ರಕ್ಕೆ ಬಂದು ಕ್ಷಮೆಯಾಚನೆ ಮಾಡುತ್ತಿದ್ದೇನೆ. ಕಾರಣಿಕ ಪುರುಷರಾದ ಅವಳಿ ವೀರರು ನನಗೆ ಕ್ಷಮೆ ಕರುಣಿಸಬೇಕು. ವೀರಪುರುಷರ ವಿಚಾರದಲ್ಲಿ ನನ್ನ ಮಾತಿನಲ್ಲಿ ತಪ್ಪಾಗಿದೆ ಎಂಬುವುದು ನನಗೆ ಅರಿವಾಗಿದೆ. ತನ್ನ ತಪ್ಪನ್ನು ಮನ್ನಿಸುವಂತಹ ಅನುಗ್ರಹವನ್ನು ಕರುಣಿಸಬೇಕೆಂದು ಕೇಳಿಕೊಂಡರು.


Spread the love