Home Mangalorean News Kannada News ವಿಶೇಷ ಕಾರ್ಯಪಡೆ ‘ಆ್ಯಂಟಿ ಹಿಂದೂ ಸ್ಪೆಷಲ್ ಟಾಸ್ಕ್ ಫೋರ್ಸ್’ ಆಗದಿರಲಿ – ಶರಣ್ ಪಂಪ್ವೆಲ್

ವಿಶೇಷ ಕಾರ್ಯಪಡೆ ‘ಆ್ಯಂಟಿ ಹಿಂದೂ ಸ್ಪೆಷಲ್ ಟಾಸ್ಕ್ ಫೋರ್ಸ್’ ಆಗದಿರಲಿ – ಶರಣ್ ಪಂಪ್ವೆಲ್

Spread the love

ವಿಶೇಷ ಕಾರ್ಯಪಡೆ ‘ಆ್ಯಂಟಿ ಹಿಂದೂ ಸ್ಪೆಷಲ್ ಟಾಸ್ಕ್ ಫೋರ್ಸ್’ ಆಗದಿರಲಿ – ಶರಣ್ ಪಂಪ್ವೆಲ್

ಮಂಗಳೂರು: ನಗರದಲ್ಲಿ ಹೊಸದಾಗಿ ಆರಂಭಿಸಿರುವ ವಿಶೇಷ ಕಾರ್ಯಪಡೆ ಹಿಂದೂಗಳನ್ನು ಟಾರ್ಗೆಟ್ ಮಾಡದೆ ನ್ಯಾಯಾಯುತವಾಗಿ ಕಾರ್ಯಮಾಡಲಿ ಎಂದು ವಿಶ್ವ ಹಿಂದೂ ಪರಿಷದ್ ಮುಖಂಡ ಶರಣ್ ಪಂಪ್ ವೆಲ್ ಆಗ್ರಹಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು ಆ್ಯಂಟಿ ಕಮ್ಯೂನಲ್ ಸ್ಪೆಷಲ್ ಟಾಸ್ಕ್ ಫೋರ್ಸ್ ನ್ನು ನಾನು ಸ್ವಾಗತಿಸುತ್ತೇನೆ. ಆದರೆ ಇದು ಹಿಂದುಗಳನ್ನು ಟಾರ್ಗೆಟ್ ಮಾಡದೆ ನ್ಯಾಯಯುತವಾಗಿ ಕಾರ್ಯಮಾಡಲಿ.

ಇದು ಆ್ಯಂಟಿ ಹಿಂದೂ ಸ್ಪೆಷಲ್ ಟಾಸ್ಕ ಫೋರ್ಸ್ ಆಗದಿರಲಿ. ಕರಾವಳಿಯಲ್ಲಿ ಸಂಘರ್ಷಕ್ಕೆ ಕಾರಣವಾಗುವ ಲವ್ ಜಿಹಾದ್, ಮತಾಂತರ, ಗೋಹತ್ಯೆ / ಅಕ್ರಮ ಗೋಸಾಗಾಟ .ಡ್ರಗ್ಸ್ ದಂದೆ,ಮರಳು ದಂದೆ.,ಸೇರಿದಂತೆ ಎಲ್ಲಾ ಅಕ್ರಮ ದಂದೆಗಳಿಗೆ ಕಡಿವಾಣ ಬೀಳಲಿ ಎಂದು ಅವರು ಆಗ್ರಹಿಸಿದ್ದಾರೆ.


Spread the love

Exit mobile version