ವಿಶ್ರಾಂತಿ ಗೃಹದಲ್ಲಿ ಯುವತಿಗೆ ಅತ್ಯಾಚಾರ ನಡೆಸಿದ ಆರೋಪಿಯ ಬಂಧನ

Spread the love

ವಿಶ್ರಾಂತಿ ಗೃಹದಲ್ಲಿ ಯುವತಿಗೆ ಅತ್ಯಾಚಾರ ನಡೆಸಿದ ಆರೋಪಿಯ ಬಂಧನ

ಮಂಗಳೂರು: ವಿಶ್ರಾಂತಿ ಗ್ರಹವೊಂದರಲ್ಲಿ ಗೆಳೆಯರೊಂದಿಗೆ ಬೀಳ್ಕೊಡುಗೆ ಸಮಾರಂಭದ ಪಾರ್ಟಿಯೊಂದರಲ್ಲಿ ಯುವತಿಯೋರ್ವರನ್ನು ಅತ್ಯಾಚಾರ ನಡೆಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬ್ರಾಯನ್ ರಿಚ್ಚಾರ್ಡ್ ಅಮ್ಮನ್ನಾ ಎಂದು ಗುರುತಿಸಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ ನೌಕಾಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜಾಯಿಲಿನ್ ಪಿಂಟೋ ಎಂಬವರಿಗೆ ಅಂಡಮಾನ್ ಗೆ ವರ್ಗಾವಣೆಯಾಗಿಯಾಗಿರುವ ಹಿನ್ನಲೆಯಲ್ಲಿ ಫೆಬ್ರವರಿ 5ರಂದು ರಾತ್ರಿ ಆತ ಆಯೋಜಿಸಿದ್ದ ಬೀಳ್ಕೊಡುಗೆ ಪಾರ್ಟಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಆತನ ಸ್ನೇಹಿತೆ ಬ್ಯಾಂಕ್ ಉದ್ಯೋಗಿಯಾಗಿರುವ ಸಂತ್ರಸ್ಥ ಯುವತಿಯು ಆಕಾಶ್ ಸೆರಾವೊ ಎಂಬಾತನ ಮಾಲಕತ್ವದ ಕೊಡಿಪ್ಪಾಡಿಯ ವಿಶ್ರಾಂತಿ ಗೃಹಕ್ಕೆ ಬಂದಿದ್ದು, ಪಾರ್ಟಿಯಲ್ಲಿ ಸುಮಾರು 17 ರಿಂದ 20 ಜನರು ಪಾಲ್ಗೊಂಡಿದ್ದರು.

ಪಾರ್ಟಿ ಮುಗಿದ ಬಳಿಕ ಉಳಿದವರು ತೆರಳಿದ್ದು, ತಡರಾತ್ರಿಯಾಗಿರುವುದರಿಂದ ಸಂತ್ರಸ್ಥ ಯುವತಿ ಮತ್ತು ಆರೋಪಿ ಬ್ರಾಯನ್ ರಿಚರ್ಡ್ ಅಮನ್ನಾ ಸೇರಿ ಒಟ್ಟು 04 ಜನರು ಸದರಿ ವಿಶ್ರಾಂತಿ ಗೃಹದಲ್ಲೇ ಉಳಿದುಕೊಂಡಿದ್ದುರು.

ಸಂತ್ರಸ್ಥ ಯುವತಿ ಅಲ್ಲೇ ರೂಮೊಂದರಲ್ಲಿ ಮಲಗಿದ್ದು, ಬೆಳಿಗ್ಗೆ 05.00 ಗಂಟೆಗೆ ಸುಮಾರಿಗೆ ಆರೋಪಿ ಬ್ರಾಯನ್ ರಿಚರ್ಡ್ ಅಮ್ಮನ್ನಾ ಯುವತಿ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಸಂತ್ರಸ್ಥ ಯುವತಿ ನೀಡಿರುವ ದೂರಿನಂತೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಕಲಂ 328, 376 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ ಆರೋಪಿಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.


Spread the love