ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಕ್ಕೆ ಚಾಲನೆ: ಚಾಮುಂಡಿ ದೇವಿಗೆ ರಾಷ್ಟ್ರಪತಿ ಸೇರಿ ಗಣ್ಯರಿಂದ ಪುಷ್ಪಾರ್ಚನೆ

Spread the love

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಕ್ಕೆ ಚಾಲನೆ: ಚಾಮುಂಡಿ ದೇವಿಗೆ ರಾಷ್ಟ್ರಪತಿ ಸೇರಿ ಗಣ್ಯರಿಂದ ಪುಷ್ಪಾರ್ಚನೆ

ಮೈಸೂರು: ನಾಡದೇವತೆ ಚಾಮುಂಡೇಶ್ವರಿಗೆ ದೀಪ ಬೆಳಗಿ ಪುಷ್ಪಾರ್ಚನೆ ಸಲ್ಲಿಸಿ ನಮಿಸುವ ಮೂಲಕ ನಾಡಹಬ್ಬ ದಸರಾ 2022ಕ್ಕೆ ಅದ್ದೂರಿ ಚಾಲನೆ ಸೋಮವಾರ ಸಿಕ್ಕಿದೆ. ವೃಶ್ಚಿಕ ಲಗ್ನದಲ್ಲಿ ಬೆಳಗ್ಗೆ 10.10ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್,ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಇತರ ಗಣ್ಯರು ಚಾಲನೆ ನೀಡಿದರು.

ಬೆಳ್ಳಿರಥದಲ್ಲಿ ಮಹಿಳಾಸುರ ಮರ್ದಿನಿ ಅವತಾರದ ಪಂಚಲೋಹದ ವಿಗ್ರಹಕ್ಕೆ ಶುಭ ವೃಶ್ಚಿಕ ಲಗ್ನದಲ್ಲಿ ರಾಷ್ಟ್ರಪತಿಗಳು ಪುಷ್ಪಾರ್ಚನೆ ಮಾಡುವುದರೊಂದಿಗೆ 412ನೇ ದಸರಾದ ವಿಧಿವಿಧಾನಗಳು ಆರಂಭವಾದವು. ಈ ಮೂಲಕ ಎರಡು ವರ್ಷಗಳ ಕೋವಿಡ್ ಸಾಂಕ್ರಾಮಿತ ನಂತರ ಅದ್ದೂರಿ ಮೈಸೂರು ದಸರಾಕ್ಕೆ ಮುನ್ನುಡಿ ಬರೆದಾಗಿದೆ. ಮೈಸೂರು ದಸರಾ ಎಂದರೆ ಅದನ್ನು ನೋಡಲು ಕಣ್ಣುಗಳೆರಡು ಸಾಲದು, ವರ್ಣಿಸಲು ಪದಗಳು ಸಾಲದು ಎಂದು ಪ್ರತಿವರ್ಷ ಜರಗುತ್ತದೆ.

ದೇಶದ ರಾಷ್ಟ್ರಪತಿಗಳು ದಸರಾಕ್ಕೆ ಚಾಲನೆ ನೀಡುತ್ತಿರುವುದು ಇದೇ ಮೊದಲು. ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್, ಸಚಿವ ಸುನಿಲ್ ಕುಮಾರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದಾರೆ.


Spread the love