ವಿಶ್ವ ಕುಂದಾಪ್ರ ಕನ್ನಡ ದಿನ – ಮೂಡು ಗಿಳಿಯಾರಿನಲ್ಲಿ ʼಕೆಸರಂಗ್‌ʼ ಕ್ರೀಡಾಕೂಟ

Spread the love

ವಿಶ್ವ ಕುಂದಾಪ್ರ ಕನ್ನಡ ದಿನ – ಮೂಡು ಗಿಳಿಯಾರಿನಲ್ಲಿ ʼಕೆಸರಂಗ್‌ʼ ಕ್ರೀಡಾಕೂಟ

ಕುಂದಾಪುರ: ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಪ್ರಯುಕ್ತ ಆ.8ರಂದು ಕುಂದಗನ್ನಡ ಭಾಗದಲ್ಲಿ ಹಲವ ಕಾರ್ಯಕ್ರಮಗಳನ್ನು ಸಂಘಟಿಸಿದ್ದು, ಕೋಟದ ಮೂಡು ಗಿಳಿಯಾರಿನಲ್ಲಿ ಜನಸೇವಾ ಟ್ರಸ್ಟ್ ಆಶ್ರಯದಲ್ಲಿ ಅಶೋಕ್ ನೀಲಾವರ ಕ್ರೀಡಾಂಗಣದಲ್ಲಿ ‘ಕೆಸರಂಗ್’ ‘ಕ್ರೀಡಾಕೂಟ ಜರಗಿತು.

ಈ ಸಂದರ್ಭ ಮಕ್ಕಳು, ಹಿರಿಯರು ಕೆಸರುಗದ್ದೆಯ ಆಟೋಟದಲ್ಲಿ ಭಾಗವಹಿಸಿದ್ದರು.

ಪತ್ರಕರ್ತ ಪ೦ಜು ಗಂಗೊಳ್ಳಿಯವರು ಭೂಮಿ ತಾಯಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಭಾಷೆ ಉಳಿಸಬೇಕಾದರೆ ದೊಡ್ಡ ಸಾಹಸ ಮಾಡಬೇಕಿಲ್ಲ ಯಾರೆಲ್ಲ ಭಾಷೆ ಯನ್ನು ಬಳಸುತ್ತಾರೆ, ಅವರೆಲ್ಲ ಭಾಷೆ ಯನ್ನು ಉಳಿಸಿದಂತೆ ಎಂದರು.

ಕುಂದಗನ್ನಡ ತಜ್ಞ ಮನು ಹಂದಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಕುಂದಗನ್ನಡಿಗರ ಭಾಷೆ, ಸಂಸ್ಕೃತಿಯಲ್ಲಿ ವಿಶೇಷ ಅಡಗಿದೆ ಎಂದರು.

ವೈದ್ಯಾಧಿಕಾರಿ ಡಾ|ನಾಗೇಶ್‌, ಜೈ ಭಾರ್ಗವ ಬಳಗದ ರಾಜ್ಯಾಧ್ಯಕ್ಷ ಆಜಿತ್‌ ಶೆಟ್ಟಿ ಕಿರಾಡಿ, ಉಡುಪಿ ಜಿಲ್ಲ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸಾಹಿತಿ ನರೇಂದ್ರ ಕುಮಾರ್ ಕೋಟ ಕೋಟ ಸಿ.ಎ ಬ್ಯಾಂಕ್ ಅಧ್ಯಕ್ಷ ಪೂಜಾರಿ, ಭರತ್‌ ಶೆಟ್ಟಿ ವಿಶ್ವನಾಥ ಹೇರ್ಳೆ, ಸಾಂಸ್ಕೃತಿಕ ಚಿಂತಕ ಉದಯ ಶೆಟ್ಟಿ ಪಡುಕರೆ, ಪ್ರವೀಣ್ ಯಕ್ಷಿಮಠ, ಸುಭಾಷ್ ಶೆಟ್ಟಿ ಗಿಳಿಯಾರು, ವಸಂತ್ ಗಿಳಿಯಾರು, ಆಲ್ವಿನ್‌ ಅಂದ್ರಾದೆ ಮತ್ತು ಜನಸೇವಾ ಟ್ರಸ್ಟ್‌ನ ಸದಸ್ಯರು ಮತ್ತಿತರರು ಸುನೀಲ್ ಪಾಂಡೇಶ್ವರ, ಕಾರ್ಯಕ್ರಮ ನಿರೂಪಿಸಿದರು.


Spread the love