ವಿಶ್ವ ಕೊಂಕಣಿ ಕೇಂದ್ರದಿಂದ ಕೊಂಕಣಿ ಭಾಷಿಕ ಮಹಿಳಾ ಭಾಷಿಕ ಮಹಿಳಾ ಸಂಘಗಳಿಗೋಸ್ಕರ ಪ್ರದರ್ಶನ ಹಾಗೂ ವಿವಿಧ ಸ್ಪರ್ಧೆ

Spread the love

ವಿಶ್ವ ಕೊಂಕಣಿ ಕೇಂದ್ರದಿಂದ ಕೊಂಕಣಿ ಭಾಷಿಕ ಮಹಿಳಾ ಭಾಷಿಕ ಮಹಿಳಾ ಸಂಘಗಳಿಗೋಸ್ಕರ ಪ್ರದರ್ಶನ ಹಾಗೂ ವಿವಿಧ ಸ್ಪರ್ಧೆ

ಮಂಗಳೂರು: ವಿಶ್ವ ಕೊಂಕಣಿ ಕೇಂದ್ರವು ಮಾರ್ಚ್ 19-20 ರಂದು ಆಯೋಜಿಸುತ್ತಿರುವ ವಿಶ್ವ ಕೊಂಕಣಿ ಸಮಾರೋಹ ಅಂಗವಾಗಿ ಕೊಂಕಣಿ ಭಾಷಿಕ ಮಹಿಳಾ ಸಂಘಗಳಿಗೋಸ್ಕರ ಪ್ರದರ್ಶಿನ ಹಾಗೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ

1. ಸರ್ವಶ್ರೇಷ್ಠ ಕೊಂಕಣಿ ಮಹಿಳಾ ಸಂಘ:
ಕೊಂಕಣಿ ಭಾಷಿಕ ಮಹಿಳಾ ಸಂಘಗಳು ಕಳೆದ ಐದು ವರ್ಷಗಳಲ್ಲಿ ಕೈಗೊಂಡ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಮಾತೃಭಾಷಾ ಪ್ರೋತ್ಸಾಹನ ಚಟುವಟಿಕೆಗಳನ್ನು ನೀಡಲಾಗುವ ಸೂಚನಾ ಫಲಕದಲ್ಲಿ ಪ್ರದರ್ಶಿಸಬೇಕು. ನಿರ್ಣಾಯಕರು ಈ ಚಟುವಟಿಕೆಗಳ ಗುಣಮಟ್ಟ, ನಾವೀನ್ಯತೆ, ಒಳಗೊಳ್ಳುವಿಕೆ ಮತ್ತು ಸಮಾಜಮುಖಿ ಪ್ರಯೋಜನಗಳನ್ನು ಪರಿಶೀಲಿಸಿ ಸರ್ವಶ್ರೇಷ್ಠ ಕೊಂಕಣಿ ಮಹಿಳಾ ಸಂಘ ಪ್ರಶಸ್ತಿಗೆ ಆಯ್ಕೆ ಮಾಡುವರು. ಪ್ರದರ್ಶಿನಿಯಲ್ಲಿ ಪ್ರತಿ ಸಂಘದ ಒಬ್ಬ ಸದಸ್ಯರು ಸದಾಕಾಲ ಉಪಸ್ಥಿತರಿರತಕ್ಕದ್ದು. ಸಮಾರೋಹದ ಎರಡೂ ದಿನಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5 ರತನಕ ಪ್ರದರ್ಶಿನಿಯು ತೆರೆದಿರುವುದು. ಸರ್ವಶ್ರೇಷ್ಠ ಕೊಂಕಣಿ ಮಹಿಳಾ ಸಂಘಕ್ಕೆ ರೂ. ೨೫,೦೦೦/- ನಗದು ಬಹುಮಾನವು ಲಭಿಸುವುದು.

2. ಕೊಂಕಣಿ ಆಶು ಕವಿತಾ ಸ್ಪರ್ಧೆ (ವೈಯಕ್ತಿಕ)
ಮಾರ್ಚ್ 19ರಂದು ಬೆಳಗ್ಗೆ ನೀಡಲಾಗುವ ವಿಷಯವನ್ನು ಆಧರಿಸಿ ಕೊಂಕಣಿ ಕವಿತೆಯನ್ನು ಸ್ಥಳದಲ್ಲೇ ರಚಿಸಿ ವಾಚಿಸಬೇಕು. ಕೊಂಕಣಿ ಭಾಷೆಯ ಯಾವುದೇ ಪ್ರಬೇಧದಲ್ಲಿ (ಬೋಲಿ) ಕವಿತೆಯನ್ನು ರಚಿಸಬಹುದು. ನಿಗದಿತ ವಿಷಯದ ಮೇಲೆ ಕನಿಷ್ಠ 12 ಸಾಲುಗಳ ಕವಿತೆಯನ್ನು ರಚಿಸತಕ್ಕದ್ದು. ಸ್ಪರ್ಧೆಯು ಮಾರ್ಚ್ 19ರ ಮಧ್ಯಾಹ್ನ 2.00 ಗಂಟೆಗೆ ನಡೆಯುವುದು.

3. ಸಿರಿಧಾನ್ಯಗಳನ್ನು ಬಳಸಿ ಕೊಂಕಣಿ ಪಾರಂಪರಿಕ ಖಾದ್ಯ ತಯಾರಿ ಸ್ಪರ್ಧೆ (ವೈಯಕ್ತಿಕ)
ಒಂದು ತಂಡದಿಂದ ಒಂದಕ್ಕಿಂತ ಹೆಚ್ಚು ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಒಂದು ಸ್ಪರ್ಧಿಗೆ ಒಂದು ಖಾದ್ಯವನ್ನು ಪ್ರದರ್ಶಿಸಲು ಮಾತ್ರ ಅವಕಾಶ. ಖಾದ್ಯವನ್ನು ಮನೆಯಲ್ಲೇ ತಯಾರಿಸಿ ತಂದು ಪ್ರದರ್ಶಿಸುವುದು. ಖಾದ್ಯದ ರುಚಿ, ಬಳಸಿದ ಸಿರಿಧಾನ್ಯಗಳ ಪ್ರಮಾಣ, ಪ್ರದರ್ಶಿಸಿದ ರೀತಿ ಇವುಗಳ ಆಧಾರದ ಮೇಲೆ ಅಂಕಗಳನ್ನು ನೀಡಲಾಗುವುದು. ಖಾದ್ಯದ ತಯಾರಿಕಾ ವಿಧಾನವನ್ನು ಕೊಂಕಣಿಯಲ್ಲಿ ಬರೆದು ಖಾದ್ಯದ ಬಳಿ ಪ್ರದರ್ಶಿಸತಕ್ಕದ್ದು. ಖಾದ್ಯವು ಮಾರ್ಚ್ 19ರ ಬೆಳಗ್ಗೆ 11 ಗಂಟೆಯ ಒಳಗಾಗಿ ಪ್ರದರ್ಶಿಸಲ್ಪಡಬೇಕು.

4. ಕೊಂಕಣಿ ಕೋಲಾಟ ನೃತ್ಯ ಸ್ಪರ್ಧೆ (ತಂಡ ವಿಭಾಗ)
ನೃತ್ಯಕ್ಕೆ ಕೊಂಕಣಿ ಹಾಡುಗಳನ್ನು ಮಾತ್ರ ಬಳಸತಕ್ಕದ್ದು. ಪ್ರತಿ ತಂಡದಲ್ಲಿ 8 ರಿಂದ 12 ನರ್ತಕಿಯರು ಪಾಲ್ಗೊಳ್ಳಬಹುದು. ನೃತ್ಯವು ಕನಿಷ್ಟ 5 ನಿಮಿಷಗಳಿಗೆ ಕಡಿಮೆಯಾಗದಂತೆ ಗರಿಷ್ಟ 7 ನಿಮಿಷಗಳಿಗೆ ಮೀರದಂತಿರಬೇಕು. ಉಡುಗೆ ತೊಡುಗೆ, ನೃತ್ಯದ ನಾವೀನ್ಯತೆ, ತಂಡದ ಸಮನ್ವಯ, ಕ್ರಿಯಾಶೀಲತೆ ಗಳನ್ನು ಆಧರಿಸಿ ಅಂಕಗಳನ್ನು ನೀಡಲಾಗುವುದು. ಸ್ಪರ್ಧೆಯು ಮಾರ್ಚ್ 19ರ ಸಂಜೆ ಗಂಟೆ 5.00 ರಿಂದ 7.00 ರವರೆಗೆ ವೃತ್ತಾಕಾರದ ಹೊರಾಂಗಣದಲ್ಲಿ ನಡೆಯಲಿರುವುದು.

೫. ಕೊಂಕಣಿ ಪಾರಂಪರಿಕ ರಸಪ್ರಶ್ನೆ
ರಸಪ್ರಶ್ನೆಯು ಕೊಂಕಣಿ ಪಾರಿಭಾಷಿಕ ಶಬ್ದಗಳನ್ನು ಆಧರಿಸಿ ನಡೆಯುವುದು. ಪ್ರತೀ ಮಹಿಳಾ ಸಂಘದಿಂದ ಎರಡು ಸದಸ್ಯರನ್ನೊಳಗೊಂಡ ಒಂದು ತಂಡವು ಭಾಗವಹಿಸಬಹುದು. ಸ್ಪರ್ಧೆಯು ಮಾರ್ಚ್ 19ರ ಬೆಳಿಗ್ಗೆ 11.00 ಗಂಟೆಗೆ ನಡೆಯಲಿರುವುದು.

೬. ಕೊಂಕಣಿ ಪಾರಂಪರಿಕ ವಿನ್ಯಾಸ ಗೊದ್ದಡಿ (ಕೌದಿ) ಪ್ರದರ್ಶನ ಸ್ಪರ್ಧೆ
ಒಂದು ಸಂಘದಿಂದ ಒಂದಕ್ಕಿಂತ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಬಹುದು. ಓರ್ವ ಸ್ಪರ್ಧಾಳು ಕೇವಲ ಒಂದು ಕೌದಿಯನ್ನು ಪ್ರದರ್ಶಿಸಬಹುದು. ಬಳಸದೇ ಇರುವ 20×20 ಅಥವಾ 30×30 ಇಂಚಿನ ಕೌದಿಯನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುವುದು. ಸ್ಪಂಜು ಅಥವಾ ಫೋಮನ್ನು ಬಳಸಿರಬಾರದು. ಕೌದಿಯನ್ನು ಮಾರ್ಚ್ 19ರ ಬೆಳಗ್ಗೆ 11 ಗಂಟೆಯ ಒಳಗಾಗಿ ಪ್ರದರ್ಶಿಸಬೇಕು.

ಎಲ್ಲಾ ಸ್ಪರ್ಧೆಗಳು ವಿಶ್ವ ಕೊಂಕಣಿ ಕೇಂದ್ರ, ಶಕ್ತಿನಗರ, ಮಂಗಳೂರು ಇಲ್ಲಿ ಜರುಗುವವು. ಸ್ಪರ್ಧಾ ವಿಜೇತರಿಗೆ ಆಕರ್ಷಕ ನಗದು ಬಹುಮಾನಗಳನ್ನು ನೀಡಲಾಗುವುದು. ಕೊಂಕಣಿ ಭಾಷಿಕ ಮಹಿಳಾ ಸಂಘಗಳು ಮಾರ್ಚ್ 17, 2022ರ ಸಂಜೆ ಗಂಟೆ 5.00ರ ಒಳಗಾಗಿ 9900924313 ಮೊಬೈಲ್ ಸಂಖ್ಯೆಗೆ ವಾಟ್ಸಪ್ ಮೂಲಕ ಸಂದೇಶವನ್ನು ಕಳುಹಿಸಿ ನೋಂದಾಯಿಸಬಹುದು. ಮಹಿಳಾ ಸಂಘದ ಹೆಸರು, ಊರು, ಸಂಪರ್ಕ ವ್ಯಕ್ತಿಯ ಹೆಸರು ಮತ್ತು ಮೊಬೈಲ್ ನಂಬ್ರ, ಸ್ಪರ್ಧೆಯ ಹೆಸರು, ಸ್ಪರ್ಧಾಳುವಿನ ಹೆಸರು, ಸ್ಪರ್ಧಾಳುವಿನ ಮೊಬೈಲ್ ನಂಬ್ರ ಇತ್ಯಾದಿ ವಿವರಗಳನ್ನು ಸಂಘದ ಲೆಟರ್ ಹೆಡ್ ನಲ್ಲಿ ಮುದ್ರಿಸಿ ವಾಟ್ಸಪ್ ಮೂಲಕ ಕಳುಹಿಸಬೇಕು. ಸಂದೇಶ ಕಳುಹಿಸಿದ ಬಳಿಕ 9900924313 ನಂಬ್ರಕ್ಕೆ ಕರೆಮಾಡಿ ನೋಂದಣಿಯನ್ನು ಖಾತ್ರಿ ಪಡಿಸಿಕೊಳ್ಳಬೇಕು.


Spread the love