ವಿಶ್ವ ಕೊಂಕಣಿ ಕೇಂದ್ರ ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಸಾಹಿತ್ಯ ಪುರಸ್ಕಾರಗಳ-ಘೋಷಣೆ

Spread the love

ವಿಶ್ವ ಕೊಂಕಣಿ ಕೇಂದ್ರ ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಸಾಹಿತ್ಯ ಪುರಸ್ಕಾರಗಳ-ಘೋಷಣೆ

ಮಂಗಳೂರು: ಮಣಿಪಾಲ ಗ್ಲೋಬಲ್ ಎಜುಕೇಶನ್ ಸರ್ವಿಸಸ್ ನ ಮುಖ್ಯಸ್ಥರಾದ ಟಿ. ವಿ. ಮೋಹನದಾಸ ಪೈ ಯವರ ಪ್ರಾಯೋಜಕತ್ವದ “ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಅತ್ಯುತ್ತಮ ಕೊಂಕಣಿ ಪುಸ್ತಕ ಪುರಸ್ಕಾರ -2020” ಕ್ಕಾಗಿ ಗೋವಾದ ಖ್ಯಾತ ಕೊಂಕಣಿ ಲೇಖಕ ಶ್ರೀ ಕೆ.ಎಮ್. ಸುಖತಣಕರ ಇವರ “ಘುಮಕ್ಯಾರ ಘುಮಕೆ” ಕಾದಂಬರಿ ಆಯ್ಕೆಗೊಂಡಿದೆ.

ಹಾಗೆಯೇ “ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಅತ್ಯುತ್ತಮ ಕೊಂಕಣಿ ಕವಿತಾ ಕೃತಿ ಪುರಸ್ಕಾರ-2020” ಕ್ಕಾಗಿ ಖ್ಯಾತ ಕವಿ ಮುಂಬಯಿಯ ಶ್ರೀ ಶೈಲೇಂದ್ರ ಮೆhಹತಾ ಇವರ “ಸಿಸಫಸ್ ತೆಂಗಸರ್” ಕವಿತಾ ಸಂಗ್ರಹ ಆಯ್ಕೆಗೊಂಡಿದೆ. ಹಾಗೆಯೇ ಹಿರಿಯ ಖ್ಯಾತ ಕೊಂಕಣಿ ಸಾಹಿತ್ಯಕಾರ, ಹಿರಿಯ ಕೊಂಕಣಿ ಚಳವಳಿ ಮುಂದಾಳು ಕುಮಟಾದ ಡಾ. ಶಿವರಾಮ ಕಾಮತ್, ಇವರು “ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಜೀವನ ಸಿದ್ಧಿ ಪುರಸ್ಕಾರ-2020” ಕ್ಕಾಗಿ ಆಯ್ಕೆಯಾಗಿದ್ದಾರೆ.

ಈ ಮೂರು ಪ್ರಶಸ್ತಿಗಳೂ ತಲಾ ರೂ. 1.00 ಲಕ್ಷ ಬಹುಮಾನ ಹಾಗೂ ಮಾನಪತ್ರ, ಸ್ಮರಣಿಕೆ, ಶಾಲುಗಳನ್ನು ಒಳಗೊಂಡಿದೆ ಎಂದು ವಿಶ್ವ ಕೊಂಕಣಿ ಕೇಂದ್ರದ ಪ್ರಕಟಣೆ ತಿಳಿಸಿದೆ.


Spread the love