ವಿಷಕಾರಿ ಹಣ್ಣು ಎಂಟು ಮಕ್ಕಳು ಅಸ್ವಸ್ಥ

Spread the love

ವಿಷಕಾರಿ ಹಣ್ಣು ಎಂಟು ಮಕ್ಕಳು ಅಸ್ವಸ್ಥ

ಗುಂಡ್ಲುಪೇಟೆ : ಆಟದ ಮೈದಾನದ ಬಳಿಯಿದ್ದ ವಿಷಕಾರಿ ಹಣ್ಣುಗಳನ್ನು ತಿಂದು ಎಂಟು ಮಕ್ಕಳು ಅಸ್ವಸ್ಥರಾಗಿರುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ.

ವಿಷಕಾರಿ ಹಣ್ಣು ತಿಂದು ಅಸ್ವಸ್ಥಗೊಂಡ ಮಕ್ಕಳನ್ನು ಕಂಡ ಪೋಷಕರು ಕೂಡಲೇ ಗುಂಡ್ಲುಪೇಟೆ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪ್ರಥಮ ಚಿಕಿತ್ಸೆ ಕೊಡಿಸಿ ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.

ಇನ್ನೊಂದೆಡೆ ಮಕ್ಕಳ ಆರೋಗ್ಯ ಹದಗೆಟ್ಟ ವಿಚಾರ ತಿಳಿದ ಕೂಡಲೇ ಎಸ್ ಡಿ ಪಿ ಐ ತಾಲ್ಲೂಕು ಘಟಕ ಹಾಗೂ ಜಿಲ್ಲಾ ನಾಯಕರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ಇದೇ ಸಂದರ್ಭದಲ್ಲಿ ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷ ಹಾಗೂ ನಗರಸಭಾ ಸದಸ್ಯರಾದ ಅಬ್ರಾರ್ ಅಹಮದ್, ಜಿಲ್ಲಾ ಕಾರ್ಯದರ್ಶಿ ಹಾಗೂ ನಗರಸಭಾ ಸದಸ್ಯ, ಮಹೇಶ್ , ಗುಂಡ್ಲುಪೇಟೆಯ ಅಧ್ಯಕ್ಷ ಸರ್ಫರಾಜ್, ಸೈಯದ್ ಅಕ್ರಮ್ ರವರು ಪುರಸಭಾ ಸದಸ್ಯ ರಾಜಗೋಪಾಲ್ ರವರು ಮುದಾಸಿರ್ ಇಸ್ಲಾಂ ಮುಸ್ಲಿಂ ಮುಖಂಡರಾದ ಇಮ್ರಾನ್ ಖಾನ್ ಇದ್ದರು.


Spread the love

Leave a Reply

Please enter your comment!
Please enter your name here