ವೃದ್ದ ವ್ಯಕ್ತಿಯನ್ನು ಕೊಲೆ ಮಾಡಿ ಗುಂಡಿ ತೆಗೆದು ಮುಚ್ಚಿದ ಪ್ರಕರಣ – ನಾಲ್ವರ ಬಂಧನ

Spread the love

ವೃದ್ದ ವ್ಯಕ್ತಿಯನ್ನು ಕೊಲೆ ಮಾಡಿ ಗುಂಡಿ ತೆಗೆದು ಮುಚ್ಚಿದ ಪ್ರಕರಣ – ನಾಲ್ವರ ಬಂಧನ

ಮಂಗಳೂರು : ನಗರದ ಕೊಣಾಜೆ ಠಾಣಾ ವ್ಯಾಪ್ತಿಯ ಪಾವೂರು ಗ್ರಾಮದ ಮಲಾರ್ ಆಕ್ಷರನಗರದ ನಿವಾಸಿ ಪಳ್ಳಿಯಬ್ಬ, ಪ್ರಾಯ 71 ವರ್ಷ ಎಂಬವರನ್ನು ಅಪಹರಿಸಿಕೊಂಡು ಹೋಗಿ ಇರಾ ಗ್ರಾಮದ ಮೂಳೂರು ಡಬಲ್ ರೋಡ್ ನಿರ್ಜನ ಪ್ರದೇಶದ ಗುಡ್ಡಜಾಗದಲ್ಲಿ ಕೊಲೆ ಮಾಡಿ ಗುಂಡಿ ತೆಗೆದು ಮುಚ್ಚಿದ ಪ್ರಕರಣದ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಕೊಲೆ ಪ್ರಕರಣವನ್ನು ಬೇದಿಸಿ ಆರೋಪಿತರನ್ನು ದಸ್ತಗಿರಿ ಮಾಡುವಲ್ಲಿ ಯಶ್ವಸ್ವಿಯಾಗಿರುತ್ತಾರೆ.

ಬಂಧಿತ ಆರೋಪಿಗಳನ್ನು ಪಾವೂರು ನಿವಾಸಿ ತೇಂಝ(44), ಬಂಟ್ವಾಳ ಸಜಿಪನಡು ನಿವಾಸಿ ಅಮೀರ್ (20), ಅರ್ಪಾಜ್ (20), ಮೊಹಮ್ಮದ್ ಅಜರುದ್ದೀನ್ (27) ಎಂದು ಗುರುತಿಸಲಾಗಿದೆ.

ದಿನಾಂಕ 01-11-2020 ರಂದು ಪಿರ್ಯಾದಿದಾರರಾದ ಅಬ್ದುಲ್ ಮಜೀದ್, ಪ್ರಾಯ: 51 ವರ್ಷ, ತಂದೆ: ದಿ. ಹಸನಬ್ಬ, ವಾಸ: ಡೊ.ನಂ 2/114, ಅಕ್ಷರ ನಗರ, ಪಾವೂರು ಗ್ರಾಮ, ಮಂಗಳೂರು ತಾಲೂಕು ಎಂಬವರು ಠಾಣೆಗೆ ಬಂದು ದೂರೂ ನೀಡಿದ್ದು, ಪಿರ್ಯಾದಿದಾರರ ಅಣ್ಣನಾದ ಪಳ್ಳಿಯ (71) ಎಂಬವರು ದಿನಾಂಕ 29.10.2020 ರಂದು ಸಂಜೆ 7:30 ಗಂಟೆಗೆ ಮಲಾರ್ನ ಅಝರ್ ಎಂಬಾತನ ಆಟೋರಿಕ್ಷಾದಲ್ಲಿ ಹೋದವರು ಬಳಿಕ ಕಾಣೆಯಾಗಿರುವ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಗೆ ಈಗಾಗಲೇ ದೂರು ನೀಡಿದ್ದು, ಈ ದಿನ ವಾಪಾಸು ಠಾಣೆಗೆ ಬಂದು ದಿನಾಂಕ 29.10.2020 ರಂದು ಆ ನ ಆಟೋರಿಕ್ಷಾ ದಲ್ಲಿ ಪಳ್ಳಿಯಬ್ಬರವರ ಜೊತೆಯಲ್ಲಿ ಗೊತ್ತಿರುವ ವ್ಯಕ್ತಿಗಳು ಇದ್ದುದಾಗಿ ತಿಳಿದು, ಹಳ್ಳಿಯಬ್ಬರವರನ್ನು ಹಣದ ವಿಚಾರಣಕ್ಕೆ ಅಥವಾ ಬೇರೆ ಯಾವುದೇ ದ್ವೇಷ ಕಾರಣದಿಂದ ಪುಸಲಾಯಿಸಿ ಅಪಹರಿಸಿಕೊಂಡು ಹೋಗಿ ಕೊಲೆ ಮಾಡಿ ಹಾಕಿದ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಕೊಣಾಜೆ ಪೊಲೀಸ್ ಠಾಣಾ ಅಧಿಕಾರಿ 04 ಆರೋಪಿಗಳನ್ನು ಬಂಧಿಸುವಲ್ಲಿ ಯಶ್ವಸಿಯಾಗಿರುತ್ತಾರೆ.

ಪ್ರಕರಣದಲ್ಲಿನ ಇನ್ನೋರ್ವ ಆರೋಪಿಯು ತಲೆಮರೆಸಿಕೊಂಡಿದ್ದು. ಪತ್ತೆ ಮುಂದುವರೆಸಲಾಗಿರುತ್ತದೆ. ದಸ್ತಗಿರಿ ಮಾಡಿದ 04 ಆರೋಪಿಗಳನ್ನು  ಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.

ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ವಿಕಾಸ್ ಕುಮಾರ್ ಐಪಿಎಸ್ ರವರ ರ್ದೇಶನದಂತೆ ಅರುಣಾಂಶಗಿರಿ ಐಪಿಎಸ್ ಡಿ.ಸಿ.ಪಿ (ಕಾನೂನು ಮತ್ತು ಸುವ್ಯವಸ್ಥೆ) ಮತ್ತು ವಿನಯ್ ಏ ಗಾವಂಕರ್ .ಡಿ.ಸಿ.ಪಿ (ಅಪರಾಧ ಮತ್ತು ಸಂಚಾರ ವಿಭಾಗ)ರವರ ಸಲಹೆಯಂತೆ ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ರಂಜಿತ್ ಕುಮಾರ್ ಬಂಡಾರು ಐಪಿಎಸ್ ರವರ ಮಾರ್ಗದರ್ಶನದಲ್ಲಿ ಕೊಣಾಜೆ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಧುಸೂನ್ ರವರ ನೇತೃತ್ವದಲ್ಲಿ ಪಿಎಸ್ಐ ಯೋಗೀಶ್ವರನ್, ಪಿಎಸ್ಐ ಶರಣಪ್ಪ ಭಂಡಾರಿ, ಪಿಎಸ್ಐ ಮಲ್ಲಿಕಾರ್ಜನ ಬಿರಾದಾರ್ ಹಾಗೂ ಸಿಬ್ಬಂದಿಗಳಾದ ಅಶೋಕ್, ವಿನ್ಸೆಂಟ್, ರಮೇಶ್, ಅನಿಲ್, ಪುರುಷೋತ್ತಮ್, ಶಿವಕುಮಾರ್, ಮಂಜುನಾಥ್ ಚೌಟಗಿ ಹಾಗೂ ಮಂಗಳೂರು ದಕ್ಷಿಣ ಉಪವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿದಾರರಾದ ಮೊಹಮ್ಮದ್ ಇಕ್ವಾಲ್, ಮಹೇಶ್, ಮೊಹಮ್ಮದ್ ಶರೀಫ್, ದಯಾನಂದ ರವರು ಭಾಗವಹಿಸಿರುತ್ತಾರೆ.


Spread the love