ವೆಂಕಟರಮಣ ದೇವಳದಲ್ಲಿ ಕಾರ್ತಿಕ ಏಕಾದಶಿ   ಪ್ರಯುಕ್ತ ವಿಶೇಷ ಅಭಿಷೇಕ

Spread the love

ವೆಂಕಟರಮಣ ದೇವಳದಲ್ಲಿ ಕಾರ್ತಿಕ ಏಕಾದಶಿ   ಪ್ರಯುಕ್ತ ವಿಶೇಷ ಅಭಿಷೇಕ

ಮಂಗಳೂರು: ಶ್ರೀ ವೆಂಕಟರಮಣ ದೇವಸ್ಥಾನ ರಥಬೀದಿ ಯಲ್ಲಿ ಕಾರ್ತಿಕ ಏಕಾದಶಿ ಯಂದು ಶ್ರೀ ದೇವರ ಚಾತುರ್ಮಾಸ ಸಮಾಪನಗೊಂಡಿದ್ದು ಈ ಪ್ರಯುಕ್ತ ಪ್ರಾತಃ ಕಾಲ ಮಹಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡು ಶ್ರೀ ದೇವರ ವಿಗ್ರಹ ಗಳಿಗೆ ಪಂಚಾಮೃತ , ಪುಳಕಾಭಿಷೇಕ , ಗಂಗಾಭಿಷೇಕ ಗಳು ನೆರವೇರಿದವು, ಶ್ರೀ ದೇವಳದ ವೈದಿಕರಿಂದ ಶಾಸ್ತ್ರೋಕ್ತ ವಿಧಿ ವಿಧಾನಗಳು ನೆರವೇರಿದವು . ಬಳಿಕ ಮಧ್ಯಾಹ್ನ ಪೂಜೆ ,ರಾತ್ರಿ ಪೂಜೆ ನೆರವೇರಿತು.

ಈ ಸಂದರ್ಭದಲ್ಲಿ ಶ್ರೀ ದೇವಳದ ಆಡಳಿತ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ , ಸಾಹುಕಾರ್ ಕಿರಣ್ ಪೈ , ಸತೀಶ್ ಪ್ರಭು , ಕೆ . ಗಣೇಶ್ ಕಾಮತ್ ದೇವಳದ ತಂತ್ರಿಗಳಾದ ಪಂಡಿತ್ ನರಸಿಂಹ ಆಚಾರ್ಯ , ವೇದಮೂರ್ತಿ ಹರೀಶ್ ಭಟ್ , ವೇದಮೂರ್ತಿ ಚಂದ್ರಕಾಂತ್ ಭಟ್ ಹಾಗೂ ಸಾವಿರಾರು ಭಜಕರು ದೇವರ ದರ್ಶನ ಪಡೆದು ಪುನೀತರಾದರು .

ಚಿತ್ರ : ಮಂಜು ನೀರೇಶ್ವಾಲ್ಯ


Spread the love

Leave a Reply

Please enter your comment!
Please enter your name here