ವೆಂಕಟರಮಣ ದೇವಸ್ಥಾನದ ಶಾರದಾ ಮೂರ್ತಿಯ ಶೋಭಾಯಾತ್ರೆ – ಅ. 6 ರಿಂದ ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ

Spread the love

ವೆಂಕಟರಮಣ ದೇವಸ್ಥಾನದ ಶಾರದಾ ಮೂರ್ತಿಯ ಶೋಭಾಯಾತ್ರೆ – ಅ. 6 ರಿಂದ ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ

ಮಂಗಳೂರು: ನಗರದ ರಥಬೀದಿಯಲ್ಲಿರುವ ವೆಂಕಟರಮಣ ದೇವಸ್ಥಾನದ ಶಾರದಾ ಮೂರ್ತಿಯ ಶೋಭಾಯಾತ್ರೆಯ ವೇಳೆ ಶಾರದಾ ಮಾತೆಯ ವಿಗ್ರಹ ಹಾಗೂ ವಿವಿಧ ಟ್ಯಾಬ್ಲೋಗಳು ಮತ್ತು ಅಪಾರ ಜನಸಂಖ್ಯೆ ಸೇರುವ ನಿರೀಕ್ಷೆ ಇರುವುದರಿಂದ ಕಾನೂನು ಸುವ್ಯವಸ್ಥೆ, ವಾಹನಗಳ ಸುಗಮ ಸಂಚಾರ ಹಾಗೂ ಸಾರ್ವಜನಿಕ ಸುರಕ್ಷತೆಯ ದೃಷ್ಠಿಯಿಂದ ಭಾರತೀಯ ಮೋಟಾರು ವಾಹನ ಕಾಯ್ದೆ 1988 ಕಲಂ 115 ಮತ್ತು 116ರಲ್ಲಿ ಪ್ರದತ್ತ ಅಧಿಕಾರವನ್ನು ಚಲಾಯಿಸಿ ಅ.06ರ ಗುರುವಾರ ಸಂಜೆ 6 ಗಂಟೆಯಿಂದ ಅ.07ರ ಶುಕ್ರವಾರ ಬೆಳಿಗ್ಗೆ 6 ಗಂಟೆಯವರೆಗೆ ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಲಾಗಿದೆ.

ವಿವರ ಇಂತಿದೆ:

ಬಾಲಾಜಿ ಜಂಕ್ಷನ್‍ನಿಂದ ರಥಬೀದಿ ವೆಂಕಟರಮಣ ದೇವಸ್ಥಾನದ ಕಡೆಗೆ ಸಂಚರಿಸುವ ವಾಹನಗಳ ಸಂಚಾರವನ್ನು ನಿμÉೀಧಿಸಲಾಗಿದೆ. ವಾಹನಗಳು ಬಾಲಾಜಿ ಜಂಕ್ಷನ್‍ನಿಂದ ಲೋವರ್ ಕಾರ್‍ಸ್ಟ್ರೀಟ್ ನಿಂದಾಗಿ ಅಜೀಜುದ್ದೀನ್ ರಸ್ತೆಯ ಮುಖಾಂತರ ಸಂಚರಿಸುವುದು.

ಗಣಪತಿ ಹೈಸ್ಕೂಲ್ ರಸ್ತೆ ಜಂಕ್ಲನ್ ಮುಖಾಂತರ ಕಾರ್‍ಸ್ಟ್ರೀಟ್ ಕಡೆಗೆ ಸಂಚರಿಸುವ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ವಾಹನಗಳು ತಾರಾ ಕ್ಲಿನಿಕ್ ಮುಂದುಗಡೆಯಿಂದ ಶರವು ದೇವಸ್ಥಾನದ ಎದುರಿನಿಂದಾಗಿ ಕೆ.ಎಸ್.ಆರ್ ರಸ್ತೆ ಮುಖೇನ ಸಂಚರಿಸುವುದು.

ಕೇಂದ್ರ ಮಾರುಕಟ್ಟೆಯಿಂದ ಕಾರ್‍ಸ್ಟ್ರೀಟ್ ಕಡೆಗೆ ಬರುವ ವಾಹನಗಳ ಸಂಚಾರವನ್ನು ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳ ನಿಲುಗಡೆಯನ್ನು ನಿμÉೀಧಿಸಲಾಗಿದೆ. ಸದರಿ ವಾಹನಗಳು ಕೇಂದ್ರ ಮಾರುಕಟ್ಟೆ ರಸ್ತೆಯಲ್ಲಿ ಸಂಚರಿಸಿ ಕ್ಲಾಕ್‍ಟವರ್ ಮುಖೇನ ಮುಂದುವರೆಯುವುದು ಹಾಗೂ ಮೆರವಣಿಗೆ ಸಾಗುವ ರಸ್ತೆಯ ಇಕ್ಕೆಲಗಳಲ್ಲಿ ಎಲ್ಲಾ ತರಹದ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ ಎಂದು ಮಂಗಳೂರು ನಗರ ಪೆÇಲೀಸ್ ಕಮೀಷನರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love