ವೇಣೂರು: ಅಕ್ರಮ ಗೋ ಸಾಗಾಟ ಐವರ ಬಂಧನ

Spread the love

ವೇಣೂರು: ಅಕ್ರಮ ಗೋ ಸಾಗಾಟ ಐವರ ಬಂಧನ

ಮಂಗಳೂರು: ನಾರಾವಿ ಗುರುವಾಯನಕೆರೆದಲ್ಲಿ ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬೆಳ್ತಂಗಡಿ ನಿವಾಸಿ ತೌಸೀಫ್ (32), ಉಸ್ಮಾನ್ (55), ಇಕ್ಬಾಲ್ (34), ಇರ್ಫಾನ್ (25) ಮತ್ತು ಅನಾಸ್ ಎಂದು ಗುರುತಿಸಲಾಗಿದೆ.

ವೇಣೂರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಸೌಮ್ಯ ಜೆ ಅವರು ತನ್ನ ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುತ್ತಾ ಬೆಳ್ತಂಗಡಿ ತಾಲೂಕು ಬಡಗಕಾರಂದೂರು ಗ್ರಾಮದ ನಡಾಯಿ ನಮನ ಡಾಬಾ ಬಳಿ ನಾರಾವಿ-ಗುರುವಾಯನಕೆರೆ ಸಾರ್ವಜನಿಕ ರಸ್ತೆಯಲ್ಲಿ ನಾರಾವಿ ಕಡೆಯಿಂದ ಬರುತ್ತಿದ್ದ ದ್ವಿಚಕ್ರ ಕೆಎ.21.ಇಬಿ.2235 ನೇ ಯದನ್ನು ತಪಾಸಣೆ ನಡೆಸುವ ಸಮಯ ಸದ್ರಿಯವರುಗಳು ತಾವು ಮಾರುತಿ ಒಮ್ನಿ ಕಾರು ನಂಬ್ರ ಕೆಎ.20.ಎಂ.6451 ನೇ ಯದರಲ್ಲಿ ಅಕ್ರಮವಾಗಿ ಗೋ-ಸಾಗಾಟ ಮಾಡುತ್ತಿದ್ದು ನಾವುಗಳು ಬೆಂಗಾವಲಾಗಿ ಹೋಗುವುದಾಗಿ ತಿಳಿಸಿದ ಸಮಯ ದಿನಾಂಕ 04.01.2023 ರಂದು ಬೆಳಗ್ಗಿನ ಜಾವ 01.35 ಗಂಟೆಗೆ ಮಾರುತಿ ಒಮ್ನಿ ಕಾರು ಬರುವುದನ್ನು ಕಂಡು ಸಿಬ್ಬಂದಿಗಳ ಸಹಾಯದಿಂದ ತಡೆದು ನಿಲ್ಲಿಸಿ ಕಾರು ಪರಿಶೀಲಿಸಲಾಗಿ ಕಾರಿನಲ್ಲಿ ಚಾಲಕ ಹಾಗೂ ಇತರ ಇಬ್ಬರು ಇದ್ದು, ಕಾರಿನಲ್ಲಿ 5 ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕೈಕಾಲು ಕಟ್ಟಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು, ಸದ್ರಿ ಸ್ಥಳಕ್ಕೆ ಸಿಬ್ಬಂದಿಯವರ ಸಹಾಯದಿಂದ ಪಂಚಾಯತುದಾರರುಗಳನ್ನು ಬರಮಾಡಿಸಿ ಅವರುಗಳ ಸಮಕ್ಷಮ 5 ಜನ ಆರೋಪಿತರುಗಳನ್ನು ವಶಕ್ಕೆ ಪಡೆದು ಅಕ್ರಮ ಸಾಗಾಟ ಮಾಡುತ್ತಿದ್ದ 5 ಜಾನುವಾರುಗಳನ್ನು ಹಾಗೂ ಅಕ್ರಮ ಸಾಗಾಟಕ್ಕೆ ಉಪಯೋಗಿಸಿದ ಮಾರುತಿ ಒಮ್ನಿ ಕಾರು ಮತ್ತು ದ್ವಿಚಕ್ರ ವಾಹನವನ್ನು ಸ್ವಾಧೀನ ಪಡಿಸಿದ್ದು, ಸ್ವಾಧೀನ ಪಡಿಸಿದ ಜಾನುವಾರುಗಳ ಅಂದಾಜು ಮೌಲ್ಯ 15,000 ರೂ. ಹಾಗೂ ವಾಹನಗಳ ಅಂದಾಜು ಮೌಲ್ಯ 1,75,000/- ರೂ. ಆಗಿದೆ
ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Leave a Reply

Please enter your comment!
Please enter your name here