ವೇದ ವಾಂಗ್ಮಯದ ಸಾರ್ವಕಾಲಿಕತೆ ವಿಚಾರಗೋಷ್ಟಿ ಸಮಾರೋಪ

Spread the love

ವೇದ ವಾಂಗ್ಮಯದ ಸಾರ್ವಕಾಲಿಕತೆ ವಿಚಾರಗೋಷ್ಟಿ ಸಮಾರೋಪ

ಶಿರಸಿ: ಸೋದೆ ವಾದಿರಾಜ ಮಠದ ಅಂಗಸಂಸ್ಥೆಯಾದ ಶ್ರೀಭಾವಿಸಮೀರ ತತ್ವಪ್ರಸಾರಣ ಪ್ರತಿಷ್ಠಾನ ಹಾಗೂ ಯೋಗ ಕ್ಷೇಮ ಟ್ರಸ್ಟ್ ಚೆನ್ನೈ ಇದರ ಸಹಯೋಗದಲ್ಲಿ ಸೋದೆ ಶ್ರೀವಾದಿರಾಜ ಮಠದಲ್ಲಿ ಸೋದೆ ಶ್ರೀವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥರ , ಭೀಮನಕಟ್ಟೆ ಮಠದ ಶ್ರೀರಘುವರೇಂದ್ರ ತೀರ್ಥರ ಹಾಗೂ ಶೀರೂರು ಮಠದ ಶ್ರೀವೇದವರ್ಧನ ತೀರ್ಥರ ಉಪಸ್ಥಿತಿಯಲ್ಲಿ “ವೇದ ವಾಂಗ್ಮಯದ ಸಾರ್ವಕಾಲಿಕತೆ” ಎಂಬ ವಿಷಯದಲ್ಲಿ ನಡೆಯುತ್ತಿರುವ ವಿಚಾರ ಗೋಷ್ಠಿಯ ಸಮಾರೋಪ ಸಮಾರಂಭವು ಆಗಸ್ಟ್ 27ರಂದು ನಡೆಯಿತು.

ಮುಖ್ಯ ಅತಿಥಿಗಳಾಗಿ ಲಾಲ್ ಬಹಾದ್ದೂರ್ ಶಾಸ್ತ್ರೀ ರಾಷ್ಟ್ರೀಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಮುರಳಿಮನೋಹರ ಪಾಠಕ್ ,ಅಯೋಧ್ಯೆಯ ರಾಮಮನೋಹರಲೋಹೀಯಾ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದ ಮಾಜಿ ಅಧ್ಯಕ್ಷರಾದ ಪ್ರೊ. ಜ್ವಲಂತಕುಮಾರ ಶಾಸ್ತ್ರೀ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿದರು.

ಅಷ್ಟಾವಧಾನಿ ಸುಬ್ರಹ್ಮಣ್ಯ ಭಟ್ ಉಪನ್ಯಾಸ ನೀಡಿದರು. ಚಿದಾನಂದ ಶಾಸ್ತ್ರೀ ,ವಿಷ್ಣು ಹತ್ವಾರ್ , ರಾಧಾಕೃಷ್ಣ ಬಿ. ಪ್ರಸಾದ್ ಜೋಶಿ ಪ್ರಬಂಧ ಮಂಡಿಸಿದರು.

ನಿಪ್ಪಾಣಿ ಗುರುರಾಜ ಆಚಾರ್ಯರು ಕಾರ್ಯಕ್ರಮ ನಿರ್ವಹಿಸಿದರೆ , ಡಾ. ಸುಮನ್ ಆಚಾರ್ಯರು ಸ್ವಾಗತಿಸಿ ಜಂಬುಖಂಡಿ ವಾದಿರಾಜ ಆಚಾರ್ಯರು ವಂದಿಸಿದರು.


Spread the love