ವೈದ್ಯರ ಸಲಹಾ ಚೀಟಿ ಇಲ್ಲದೇ ಔಷಧ ಮಾರಾಟ- ದಿಶಾ ಮೆಡಿಕೇರ್ ಸಂಸ್ಥೆಯ ಪರವಾನಿಗೆ ಅಮಾನತು

Spread the love

ವೈದ್ಯರ ಸಲಹಾ ಚೀಟಿ ಇಲ್ಲದೇ ಔಷಧ ಮಾರಾಟ- ದಿಶಾ ಮೆಡಿಕೇರ್ ಸಂಸ್ಥೆಯ ಪರವಾನಿಗೆ ಅಮಾನತು

ಉಡುಪಿ: ವೈದ್ಯರ ಸಲಹಾ ಚೀಟಿ ಇಲ್ಲದೇ ಔಷಧ ಮಾರಾಟ ಮಾಡಿದ ಉಡುಪಿಯ ದಿಶಾ ಮೆಡಿಕೇರ್ ಸಂಸ್ಥೆಯ ಪರವಾನಿಗೆ 15 ದಿನಗಳವರೆಗೆ ಅಮಾನತುಗೊಳಿಸಿಆದೇಶ ಹೊರಡಿಸಲಾಗಿದೆ.

ಉಡುಪಿಯ ಕೋರ್ಟ್ ಕಾಂಪ್ಲೆಕ್ಸ್ ಎದುರಿನ ದಿಶಾ ಮೆಡಿಕೇರ್ ಸಂಸ್ಥೆಯವರು ನೋಂದಾಯಿತ ವೈದ್ಯರ ಸಲಹಾ ಚೀಟಿ ಇಲ್ಲದೆ ಮತ್ತು ಮಾರಾಟ ರಶೀದಿಗಳನ್ನು ನಿರ್ವಹಿಸದೇ ಇರುವುದರಿಂದ ಸಂಸ್ಥೆಯ ಪರವಾನಿಗೆಗಳನ್ನು ಒಟ್ಟು 15 ದಿನಗಳವರೆಗೆ ಅಮಾನತುಗೊಳಿಸಿ ಉಡುಪಿ ಸಹಾಯಕ ಔಷಧ ನಿಯಂತ್ರಕರು ಮತ್ತು ಪರವಾನಿಗೆ ಪ್ರಾಧಿಕಾರಿ ಕೆ.ವಿ. ನಾಗರಾಜ ಆದೇಶ ಹೊರಡಿಸಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.


Spread the love