
‘ವೈ.ಎಫ್.ಸಿ ಟ್ರೋಫಿ’ ಕ್ರಿಕೆಟ್ ಪಂದ್ಯಾಟ ಸಂಪನ್ನ
ಮಂಗಳೂರು: ವೈ.ಎಫ್.ಸಿ ಬಜಾಲ್ ನಂತೂರ್ ವತಿಯಿಂದ ನಾಲ್ಕು ದಿನಗಳ ಕಾಲ ಬಜಾಲ್ ನಂತೂರಿನ ರೆಡ್ ಮೈದಾನದಲ್ಲಿ ಆಯೋಜಿಸಿದ್ದ ಅಂಡರ್ ಆರ್ಮ್ ‘ವೈ.ಎಫ್.ಸಿ ಟ್ರೋಫಿ’ ಕ್ರಿಕೆಟ್ ಪಂದ್ಯಾಟ ಬುಧವಾರ ಸಂಪನ್ನಗೊಂಡಿತು.
ಸೆಮಿ ಫೈನಲ್ ನಲ್ಲಿ ಎನ್.ಎಂ. ಮಂಗಳೂರು ತಂಡವನ್ನು ಸುರತ್ಕಲ್ ನ ತಾರ್ಪೊಡೋಸ್ ಕಾನ ತಂಡ, ಶೈನ್ ಬಂಟ್ವಾಳ ತಂಡವನ್ನು ನಝರ್ 9th ಬ್ಲಾಕ್ ಕೃಷ್ಣಾಪುರ ತಂಡ ಸೋಲಿಸಿ ಫೈನಲ್ ಪ್ರವೇಶಿಸಿತು. ಫೈನಲ್ ಪಂದ್ಯಾಟದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ನಝರ್ 9th ಬ್ಲಾಕ್ ಕೃಷ್ಣಾಪುರ ತಂಡದ ವಿರುದ್ಧ ತಾರ್ಪೊಡೋಸ್ ಕಾನ 7 ಒವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 46 ರನ್ ಗಳಿಸಿತು. ನಝರ್ ತಂಡ 6 ವಿಕೆಟ್ ನಷ್ಟಕ್ಕೆ 41 ರನ್ ಗಳಿಸಿ ಪರಾಭವಗೊಂಡಿತು. ಆ ಮೂಲಕ ತಾರ್ಪೊಡೋಸ್ ಕಾನ ತಂಡ ‘ವೈ.ಎಫ್.ಸಿ 2023’ ಸೀಸನ್-2 ಟ್ರೋಫಿ, 60,000 ರೂ. ನಗದು ಪಡೆದುಕೊಂಡಿತು. ದ್ವಿತೀಯ ತಂಡಕ್ಕೆ 30,000 ರೂ. ನಗದು ಮತ್ತು ಟ್ರೋಫಿ ವಿತರಿಸಲಾಯಿತು.
ಸರಣಿ ಶ್ರೇಷ್ಠ ನಝರ್ ತಂಡದ ಇಶಾಮ್, ಪಂದ್ಯ ಶ್ರೇಷ್ಠ ತಾರ್ಪೊಡೋಸ್ ಕಾನ ತಂಡದ ಮಂಜುನಾಥ್, ಉತ್ತಮ ಎಸೆತಗಾರ ತಾರ್ಪೊಡೋಸ್ ಕಾನ ತಂಡದ ರಂಜಿತ್ ಹಾಗೂ ಉತ್ತಮ ದಾಂಡಿಗ ಶೈನ್ ಬಂಟ್ವಾಳ ತಂಡದ ಸಲಾಂ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಒಟ್ಟು ಜಿಲ್ಲೆಯ 24 ತಂಡಗಳು ಭಾಗವಹಿಸಿತ್ತು.
ಸಮಾರೋಪ ಸಮಾರಂಭದಲ್ಲಿ ಮಾಜಿ ಶಾಸಕ ಐವನ್ ಡಿಸೋಜಾ, ನಝೀರ್ ಬಜಾಲ್ ವಿಜೇತ ತಂಡಕ್ಕೆ ಪ್ರಶಸ್ತಿ ವಿತರಿಸಿದರು. ಸ್ಥಳೀಯ ಕಾರ್ಪೊರೇಟರ್ ಅಶ್ರಫ್ ಕೆ.ಇ, ಡಾ. ಸೆಬಿಲ್ ಅಬ್ರಾಹಂ, ರಫೀಕ್ ಇ.ಕೆ, ಹಬೀಬ್ ಕಣ್ಣೂರು, ಪಿಯೂಸ್ ಮೊಂತೇರೊ, ಯಂಗ್ ಫ್ರೆಂಡ್ಸ್ ಕ್ರಿಕೆಟರ್ಸ್ ಬಜಾಲ್ ನಂತೂರ್ ತಂಡದ ಜಬ್ಬಾರ್ ಎಚ್.ಎಸ್, ಯು.ಪಿ ವಾಸಿಂ, ಶೌಕತ್ ಇಬ್ರಾಹೀಂ, ಬದ್ರು ಮುನೀರ್ ಎಚ್.ಎಸ್, ಸಿರಾಜ್, ನವಾಜ್, ಅನೀಸ್ ಇಕ್ರಾ, ಇಬ್ರಾಹೀಂ ಜಿಯಾ ಮೊದಲಾದವರು ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಗೋರಿ ಇಕ್ಬಾಲ್, ನಾಸೀರ್ ಬಜಾಲ್, ಆರೀಫ್ ಜೋಕಟ್ಟೆ ಸಹಕರಿಸಿದರು. ಸತೀಶ್ ಮಂಗಳೂರು ಕಾರ್ಯನಿರೂಪಣೆ ಗೈದರು. ಗೋಪಿ ಮಂಗಳೂರು ಸ್ವಾಗತಿಸಿ, ವಂದಿಸಿದರು.