ವ್ಯಕ್ತಿಯೋರ್ವನಿಂದ ಡಯಟ್‌ ಸಂಸ್ಥೆಯ ಮೂವರು ಮಹಿಳಾ ಉದ್ಯೋಗಿಗಳ ಮೇಲೆ ಹಲ್ಲೆ

Spread the love

ವ್ಯಕ್ತಿಯೋರ್ವನಿಂದ ಡಯಟ್‌ ಸಂಸ್ಥೆಯ ಮೂವರು ಮಹಿಳಾ ಉದ್ಯೋಗಿಗಳ ಮೇಲೆ ಹಲ್ಲೆ

ಮಂಗಳೂರು: ವ್ಯಕ್ತಿಯೋರ್ವ ನಗರದ ಜೈಲ್‌ ರಸ್ತೆಯಲ್ಲಿರುವ ಡಯಟ್‌ ಸಂಸ್ಥೆಯಲ್ಲಿನ ಮೂವರು ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಘಟನೆ ಸೋಮವಾರ ನಡೆದಿದೆ.

ಗಾಯಗೊಂಡ ಮಹಿಳೆಯರನ್ನು ರೀನಾ, ಗುಣವತಿ ಮತ್ತು ನಿರ್ಮಲ ಎಂದು ಗುರುತಿಸಲಾಗಿದೆ.

ಪ್ರಾಥಮಿಕ ಮಾಹಿತಿಗಳ ಪ್ರಕಾರ ವ್ಯಕ್ತಿಯೋರ್ವ ಆಯುಧದೊಂದಿಗೆ ಡಯಟ್‌ ಸಂಸ್ಥೆಯ ಕಚೇರಿಗೆ ನುಗ್ಗಿ ಅಲ್ಲಿನ ಮಹಿಳಾ ಉದ್ಯೋಗಿಗಳಾದ ಗುಣವತಿ, ರೀನಾ ಮತ್ತು ನಿರ್ಮಲ ಎಂಬವರ ಮೇಲೆ ಹಲ್ಲೆ ನಡೆಸಿದ್ದು ಹಲ್ಲೆಯಲ್ಲಿ ನಿರ್ಮಲ ಎಂಬವರ ಸ್ಥಿತಿ ಗಂಭೀರವಾಗಿದೆ.

ಹಲ್ಲೆಗೆ ನಿಖರ ಕಾರಣ ಇನ್ನೂ ತಿಳೀದುಬಂದಿಲ್ಲ. ಸ್ಥಳಕ್ಕೆ ನಗರ ಪೊಲೀಸ್‌ ಕಮೀಷನರ್‌ ಎನ್‌ ಶಶಿಕುಮಾರ್‌, ಜಿಪಂ ಕಾರ್ಯನಿರ್ವಹಣಾಧಿಕಾರಿ ಡಾ ಕುಮಾರ್‌ ಭೇಟಿ ನೀಡಿದ್ದಾರೆ.


Spread the love