ವ್ಯಕ್ತಿಯ ಕೊಲೆಯತ್ನ ಆರೋಪ;   6 ಮಂದಿ ಸೆರೆ

Spread the love

ವ್ಯಕ್ತಿಯ ಕೊಲೆಯತ್ನ ಆರೋಪ;   6 ಮಂದಿ ಸೆರೆ

ಮಂಗಳೂರು: ವ್ಯಕ್ತಿಯೊಬ್ಬರ ಕೊಲೆಗೆ ಯತ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಹಿಳೆಯ ಸಹಿತ 6 ಮಂದಿಯನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.

ನರಿಂಗಾನ ಗ್ರಾಮದ ಸಪ್ನಾಝ್ (26), ಸಾಜು ಯಾನೆ ಸಾಜಿಲ್ (24), ಸಿರಾಜ್ ಅಬೂಬಕರ್ (41), ಮುಝಮ್ಮಿಲ್ ಯಾನೆ ಅಲ್ಮದ್ (23), ಪಾವೂರು ಗ್ರಾಮದ ಮಸೂದ್ ಅಲಿ (30), ಅಂಬ್ಲಮೊಗರು ಗ್ರಾಮದ ಅಸ್ಫರ್ (28) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯನ್ನು ಬಾಡಿಗೆಗೆ ಕೊಡುವ ವಿಚಾರದಲ್ಲಿ ಆ.12ರಂದು ಸಂಜೆ 5:30ಕ್ಕೆ ನರಿಂಗಾನ ಗ್ರಾಮದ ನೆತ್ತಿಲಪದವಿನ ಮನ್ಸೂರ್ ಎಂಬವರಿಗೆ ಆರೋಪಿ ನಮೀರ್ ಹಂಝ ಎಂಬಾತನು ಅವಾಚ್ಯ ಶಬ್ದದಿಂದ ಬೈದು ತಲವಾರು ಮತ್ತು ಚೂರಿ ಬೀಸಿ ಕೊಲೆಗೆ ಯತ್ನಿಸಿದ್ದಾನೆ ಎಂದು ದೂರು ನೀಡಲಾಗಿತ್ತು.

ತನಿಖೆ ನಡೆಸಿದ ಪೊಲೀಸರು ಆರೋಪಿ ತಪ್ಪಿಸಿಕೊಳ್ಳಲು ಸಹಕರಿಸಿದ ಆತನ ಪತ್ನಿ ಸಪ್ನಾಝ್ ಮತ್ತಿತರ ಐದು ಮಂದಿಯ ವಿರುದ್ಧವೂ ಪ್ರಕರಣ ದಾಖಲಿಸಿ, ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ತಿಳಿದು ಬಂದಿದೆ.


Spread the love