ವ್ಯಾಕ್ಸಿನ್ ವಿಚಾರದಲ್ಲಿ ಕೇಂದ್ರದಿಂದ ಕರ್ನಾಟಕಕ್ಕೆ ಸುಣ್ಣ, ಗುಜರಾತಿಗೆ ಬೆಣ್ಣೆ: ಡಿ.ಕೆ.ಶಿವಕುಮಾರ್

Spread the love

ವ್ಯಾಕ್ಸಿನ್ ವಿಚಾರದಲ್ಲಿ ಕೇಂದ್ರದಿಂದ ಕರ್ನಾಟಕಕ್ಕೆ ಸುಣ್ಣ, ಗುಜರಾತಿಗೆ ಬೆಣ್ಣೆ: ಡಿ.ಕೆ.ಶಿವಕುಮಾರ್

ಉಡುಪಿ: ವ್ಯಾಕ್ಸಿನ್ ವಿಚಾರದಲ್ಲಿ ಗುಜರಾತ್ ಬೆಣ್ಣೆ ಹಚ್ಚಿಕೊಳ್ಳುತ್ತಿದ್ದಾರೆ ಕರ್ನಾಟಕಕ್ಕೆ ಸುಣ್ಣ ನೀಡಲಾಗಿದೆ ಎಂದರು. ಕೇಂದ್ರ ಕೊಡುವ ವ್ಯಾಕ್ಸಿನ್ ಏನೇನೂ ಸಾಲದುಲಸಿಕೆ ಹಂಚಿಕೆ ಕುರಿತು ಕೇಂದ್ರ ಸರಕಾರ ಕರ್ನಾಟಕ ರಾಜ್ಯಕ್ಕೆ ಆದ್ಯತೆ ನೀಡುತ್ತಿಲ್ಲ. ಕರ್ನಾಟಕದ ಬಗ್ಗೆ ಅಸಡ್ಡೆ ತೋರುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಅವರು ಮಂಗಳವಾರ ಉಡುಪಿ ಕಾಂಗ್ರೆಸ್‌ ಭವನದಲ್ಲಿ ಕರೆದ ಸುದ್ದಿಗೋಷ್ಠೀಯಲ್ಲಿ ಮಾತನಾಡಿ ಗುಜರಾತ್ ಮತ್ತು ಕರ್ನಾಟಕಕ್ಕೆ ಎಷ್ಟು ಲಸಿಕೆ ಬರುತ್ತಿದೆ ಎಂಬುದರ ಬಗ್ಗೆ ತುಲನೆಯಾಗಲಿ. ಗುಜರಾತಿಗೆ ಅತಿ ಹೆಚ್ಚು ಲಸಿಕೆ ನೀಡಲಾಗುತ್ತಿದೆ. ಕರ್ನಾಟಕಕ್ಕೆ ಲಸಿಕೆ ನೀಡದ ಪರಿಣಾಮ ಜನ ಪರದಾಡುತ್ತಿದ್ದಾರೆ. ಈ ಮೂಲಕ ಕೇಂದ್ರ ಸರಕಾರವು ಕರ್ನಾಟಕ ರಾಜ್ಯಕ್ಕೆ ಸುಣ್ಣ, ಗುಜರಾತ್ ರಾಜ್ಯಕ್ಕೆ ಬೆಣ್ಣೆ ಎಂಬ ನೀತಿಯನ್ನು ಅನುಸರಿಸುತ್ತಿದೆ . ಲಸಿಕೆಯ ಸಂಖ್ಯೆಯಲ್ಲಿ ಬೋಗಸ್ ಆಗುತ್ತಿದೆ. ರಾಜ್ಯಕ್ಕೆ ನೀಡುವ ಲಸಿಕೆ ಸಾಲದು. ಲಸಿಕೆ ಖರೀದಿಸುವಂತೆ ಕೇವಲ ಖಾಸಗಿಯವರಿಗೆ ಉತ್ತೇಜನ ಮಾಡಲಾಗುತ್ತಿದೆ. ಉಚಿತ ಲಸಿಕೆ ನೀಡಲು ತಾರತಮ್ಯ ಎಸಗುತ್ತಿ ದ್ದಾರೆ ಎಂದು ದೂರಿದರು.

ನನ್ನನ್ನು ಸಿಎಂ ಅಭ್ಯರ್ಥಿ ಮಾಡಿ ಎಂದು ನಾನು ಯಾರಲ್ಲೂ ಎಂದೂ ಕೇಳಿಲ್ಲ. ಸಿಎಂ ಅಭ್ಯರ್ಥಿ ವಿಚಾರ ಚರ್ಚೆ ಮಾಡುವ ವಿಷಯವೇ ಅಲ್ಲ ಎಂದರು. ಸಿದ್ದರಾಮಯ್ಯ ಎಲ್ಲಿ ಸ್ಪರ್ಧೆ ಮಾಡಬೇಕು ಎಂಬೂದು ಪಕ್ಷದ ಒಳಗೆ ತೀರ್ಮಾನಿಸುವ ವಿಚಾರ ಎಂದರು. ಕೇಂದ್ರ ಸಚಿವ ಸಂಪುಟ ವಿಸ್ತರಣೆ ಆಗುತ್ತಿದ್ದು ರಾಜ್ಯಕ್ಕೆ ಧ್ವನಿಯಾಗುವವರು ಸಚಿವರಾಗಲಿ. ನಮ್ಮ 25 ಸಂಸದರು ಮಾತನಾಡುತ್ತಿಲ್ಲ ಎಂದರು. ಸಂಸದರು ನಮ್ಮ ರಾಜ್ಯದ ಬಗ್ಗೆ ಬಾಯಿ ಬಿಚ್ಚುವುದಿಲ್ಲ. ಜೆಎಸ್‌ಟಿ, ಲಸಿಕೆ ಹಂಚಿಕೆಯಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡುತ್ತಿಲ್ಲ ಎಂದು ಅವರು ಟೀಕಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪ ಪರ ಮಾತನಾಡಿದ ಡಿಕೆ ಶಿವಕುಮಾರ್ ಶಾಸಕ ಯತ್ನಾಳ್ ಮತ್ತು ಸಚಿವ ಯೋಗೀಶ್ವರ್ ಖಾಲಿ ಪಾತ್ರೆಗಳು ಎಂದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಗೋಪಾಲ ಪೂಜಾರಿ, ಮುಖಂಡರಾದ ಪಿ.ವಿ.ಮೋಹನ್, ನಿವೇದಿತಾ ಆಳ್ವ, ಭಾಸ್ಕರ್ ರಾವ್ ಕಿದಿಯೂರು, ವರೆನಿಕಾ ಕರ್ನೆಲಿಯೋ ಉಪಸ್ಥಿತರಿದ್ದರು.


Spread the love