ಶಂಕರನಾರಾಯಣ : ಏರ್‌ ಗನ್‌ ಸಿಡಿದು 4 ವರ್ಷದ ಬಾಲಕನಿಗೆ ಗಾಯ

Spread the love

ಶಂಕರನಾರಾಯಣ : ಏರ್‌ ಗನ್‌ ಸಿಡಿದು 4 ವರ್ಷದ ಬಾಲಕನಿಗೆ ಗಾಯ

ಕುಂದಾಪುರ: ಏರ್‌ ಗನ್‌ ಪೆಲೆಟ್‌ ಸಿಡಿದು 4 ವರ್ಷದ ಮಗುವೊಂದು ಗಾಯಗೊಂಡ ಘಟನೆ ಶಂಕರನಾರಾಯಣ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗಾಯಗೊಂಡ ಬಾಲಕನನ್ನು ಆರ್ಡಿ ನಿವಾಸಿ ಪ್ರಜತ್‌ ಕುಮಾರ್‌ ಶೆಟ್ಟಿ ಎಂಬವರ ಮಗ ಪ್ರಶು (4) ಎಂದು ಗುರುತಿಸಲಾಗಿದೆ.

ಹೆಬ್ರಿ ತಾಲೂಕಿನ ಅಲ್ಬಾಡಿ ನಿವಾಸಿ ಕುಶಲ ಶೆಟ್ಟಿ ಎಂಬವರು ತನ್ನ ವಾಸದ ಮನೆಯಲ್ಲಿ ಪರವಾನಿಗೆ ಹೊಂದಿದ ಏರ ಗನ್‌ ನ್ನು ಮನೆಯ ಒಳಗಡೆಯ ಜಗಲಿಯ ಮೇಲೆ ಇರಿಸಿದ್ದು ಪ್ರಜತ್‌ ಕುಮಾರ್‌ ಅವರ 6.5 ವರ್ಷದ ಮಗಳು ಪ್ರಸ್ತುತಿ ಎಂಬಾಕೆ ತೆಗೆದು ಬದಿಗೆ ಇಡಲು ಹೋದಾಗ ಆಕಸ್ಮಿಕವಾಗಿ ಏರಗನ್‌ನ ಪೆಲೆಟ್ ಸಿಡಿದು ಅಲ್ಲಿಯೇ ಇದ್ದ ಪ್ರಶು ಗಾಯಗೊಂಡಿದ್ದಾನೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love