ಶಂಕರನಾರಾಯಣ: ಕಾಡುಕೋಣ ಹತ್ಯೆ ಪ್ರಕರಣದ ಒರ್ವ ಆರೋಪಿಯ ಬಂಧನ

Spread the love

ಶಂಕರನಾರಾಯಣ: ಕಾಡುಕೋಣ ಹತ್ಯೆ ಪ್ರಕರಣದ ಒರ್ವ ಆರೋಪಿಯ ಬಂಧನ

ಕುಂದಾಪುರ: ಕಾಡುಕೋಣ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಕುಂದಾಪುರ ತಾಲೂಕು ಕಾವ್ರಾಡಿ ನಿವಾಸಿ ಗವಂಜಿ ಶಾಹಿದ್ ಬಿನ್ ಗವಂಜಿ ಮಹಮ್ಮದ್ (31) ಎಂದು ಗುರುತಿಸಲಾಗಿದೆ.

ಶಂಕರನಾರಾಯಣ ವಲಯದ ಹೆಂಗವಳ್ಳಿ ಗ್ರಾಮ ದೊಡ್ಡಬೆಳಾರು ಪ್ರದೇಶದಲ್ಲಿ ಹೆಣ್ಣು ಕಾಡುಕೋಣ ಹತ್ಯೆ ಬಗ್ಗೆ ದಾಖಲಾಗಿದ್ದ ದೂರಿನಂತೆ ಆರೋಪಿಗಳಲ್ಲಿ ಒಬ್ಬನಾದ ಗವಂಜಿ ಶಾಹಿದ್ ಬಿನ್ ಗವಂಜಿ ಮಹಮ್ಮದ್‌ ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ನ್ಯಾಯಾಂಗ ಬಂಧನಕ್ಕೆ ವಿಧಿಸಲಾಗಿದೆ. ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದ್ದು, ಉಳಿದ ಆರೋಪಿಗಳನ್ನು ಬಂಧಿಸಬೇಕಾಗಿದೆ

ಕಾರ್ಯಾಚರಣೆಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಸ್ ರೆಡ್ಡಿ ಎಂ. ವಿ. ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ  ಲೋಹಿತ್ ಇವರ ಮಾರ್ಗದರ್ಶನದಲ್ಲಿ ಶಂಕರನಾರಾಯಣ ವಲಯದ ವಲಯ ಅರಣ್ಯಾಧಿಕಾರಿ  ಚಿದಾನಂದ, ಉಪ ವಲಯ ಅರಣ್ಯಾಧಿಕಾರಿಗಳಾದ  ಕೀರ್ತನ್ ಶೆಟ್ಟಿ, ಮಂಜುನಾಥ ನಾಯಕ್, ಅಭಿನಂದನ್ ಹೆಗಡೆ ಅರಣ್ಯ ರಕ್ಷಕರಾದ ರವಿ, ಪ್ರಶಾಂತ್, ರವೀಂದ್ರ ಅರಣ್ಯ ವೀಕ್ಷಕರಾದ ಶಿವಣ್ಣ ಆರ್. ವೇಷಗಾರ್, ಚಂದ್ರು ಎರೇಶಿಮೆ ಮತ್ತು ವಾಹನ ಚಾಲಕರಾದ ರವಿ ಇವರುಗಳು ಭಾಗವಹಿಸಿರುತ್ತಾರೆ.


Spread the love

Leave a Reply