ಶಬರಿಮಲೆ ದರ್ಶನಕ್ಕೆ ಸಿದ್ಧರಾದ ಕ್ರೈಸ್ತ ಪಾದ್ರಿ: ಕಠಿಣ ವ್ರತಾಚರಣೆಯಲ್ಲಿ ಬೆಂಗಳೂರಿನ ಫಾ.ಮನೋಜ್‌

Spread the love

ಶಬರಿಮಲೆ ದರ್ಶನಕ್ಕೆ ಸಿದ್ಧರಾದ ಕ್ರೈಸ್ತ ಪಾದ್ರಿ: ಕಠಿಣ ವ್ರತಾಚರಣೆಯಲ್ಲಿ ಬೆಂಗಳೂರಿನ ಫಾ.ಮನೋಜ್‌

ಕಾಸರಗೋಡು: ಕ್ರೈಸ್ತ ಪಾದ್ರಿಯೊಬ್ಬರು ಶಬರಿಮಲೆ ಸನ್ನಿಧಾನಕ್ಕೆ ಭೇಟಿ ನೀಡಿ ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ಮುಂದಾಗಿದ್ದಾರೆ. ಕೇವಲ ದರ್ಶನ ಮಾತ್ರವಲ್ಲ, ಮಾಲೆ ಧರಿಸಿ 41 ದಿನಗಳ ಕಠಿಣ ವ್ರತದೊಂದಿಗೆ ಎಲ್ಲ ವಿಧಿಗಳನ್ನು ಅನುಸರಿಸಿಕೊಂಡು ದರ್ಶನ ಮಾಡಲಿದ್ದಾರೆ.

ರೆವರೆಂಡ್‌ ಡಾ.ಮನೋಜ್‌ ಕೆ.ಜಿ. ಅವರಿಗೆ ಶಬರಿಮಲೆ ದರ್ಶನಕ್ಕೆ ಅನಾದಿ ಕಾಲದಿಂದಲೇ ಆಸೆ ಇತ್ತು. ಈ ದಿನಗಳಲ್ಲಿಅನ್ಯ ಧರ್ಮದವರು ಶಬರಿಮಲೆ ಅಯ್ಯಪ್ಪನ ದರ್ಶನ ಪಡೆಯುವುದು ದೊಡ್ಡ ವಿಚಾರವಲ್ಲ. ಆದರೆ ಕ್ರೈಸ್ತ ಪಾದ್ರಿಯೊಬ್ಬರು ಮಹತ್ತರ ಉದ್ದೇಶದಿಂದ ಅಯ್ಯಪ್ಪನ ದರ್ಶನಕ್ಕೆ ಸಿದ್ಧತೆ ನಡೆಸಿರುವುದು ವಿಶೇಷತೆಯಾಗಿದೆ.

ಫಾ.ಮನೋಜ್‌ ಅವರು 50ನೇ ವಯಸ್ಸಿನಲ್ಲಿ ವ್ರತದೊಂದಿಗೆ ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಸಜ್ಜಾಗುತ್ತಿದ್ದಾರೆ. ಫಾ.ಮನೋಜ್‌ ಕೆ.ಜಿ. ಇತರ ಭಕ್ತರಿಗಿಂತ ಭಿನ್ನವಾಗಿರುವುದೇ ಅವರು ಕ್ರಿಶ್ಚಿಯನ್‌ ಪಾದ್ರಿಯಾಗಿರುವುದರಿಂದ. ಶಬರಿಮಲೆಗೆ ತೀರ್ಥಯಾತ್ರೆ ಕೈಗೊಳ್ಳುವ ಭಕ್ತರು ಮುಖ್ಯವಾಗಿ ಹಿಂದೂಗಳಾಗಿದ್ದಾರೆ. ಬೆಂಗಳೂರಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಆಂಗ್ಲಿಕನ್‌ ಚರ್ಚ್ ಆಫ್‌ ಇಂಡಿಯಾದ ಅಡಿಯಲ್ಲಿ ಪಾದ್ರಿಯಾಗಿರುವ ಮನೋಜ್‌ ಅವರು ಸೆಪ್ಟೆಂಬರ್‌ 20ರಂದು ಶಬರಿಮಲೆಗೆ ಭೇಟಿ ನೀಡಲಿದ್ದಾರೆ.

ಅದಕ್ಕಾಗಿ ಇವರು ಶಬರಿಮಲೆ ಅಯ್ಯಪ್ಪ ಭಕ್ತರು ಧರಿಸುವ ಮಾಲೆಯನ್ನು ತಿರುವನಂತಪುರದ ತಿರುಮಲದ ಶಿವ ದೇವಾಲಯದಿಂದ ಹಾಕಿದ್ದರು. ವ್ರತಧಾರಿಗಳ ಆಚರಣೆಗಳ ಬಗ್ಗೆ ಅಧಿವರು ಪುಸ್ತಕದಿಂದ ಓದಿ ಮತ್ತು ಸ್ನೇಹಿತರ ಮೂಲಕ ಅರಿತುಕೊಂಡಿದ್ದಾರೆ. ಚರ್ಚ್ ಆಫ್‌ ಸೌತ್‌ ಇಂಡಿಯಾ ಸಮುದಾಯದಲ್ಲಿ ಜನಿಸಿದ ಫಾದರ್‌ ಮನೋಜ್‌ ಅವರು 2010 ರಲ್ಲಿ ಆಂಗ್ಲಿಕನ್‌ ಚರ್ಚ್ನ ಅಡಿಯಲ್ಲಿ ಪಾದ್ರಿಯಾಗಿ ದೀಕ್ಷೆ ಪಡೆದಿದ್ದರು. ನಂತರದ ವರ್ಷಗಳಲ್ಲಿ ಅವರು ಪಿಎಚ್‌ಡಿ ಪಡೆದುಕೊಂಡಿದ್ದಾರೆ.. ವಿಶ್ವದಲ್ಲಿಒಬ್ಬನೇ ದೇವರು ಇದ್ದಾನೆ. ಅದನ್ನು ಜನರು ಅನೇಕ ರೂಪಗಳಲ್ಲಿ ಪೂಜಿಸುತ್ತಾರೆ ಎಂಬುದಾಗಿ ಫಾದರ್ ಹೇಳುತ್ತಾರೆ. ನಾವು ಒಂದು ವಿಷಯವನ್ನು ಸಂಪೂರ್ಣವಾಗಿ ಅನುಭವಿಸಿದಾಗ ಮಾತ್ರ ನಾನು ಅದರ ಬಗ್ಗೆ ಮಾತನಾಡುತ್ತೇನೆ. ಹಾಗಾಗಿ ಶಬರಿಮಲೆ ಕ್ಷೇತ್ರದ ಬಗ್ಗೆ ಮಾತನಾಡುವ ಮೊದಲು ಅದರ ಚೈತನ್ಯ ಮತ್ತು ಶಕ್ತಿಯನ್ನು ನಾನು ಅನುಭವಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.


Spread the love

Leave a Reply

Please enter your comment!
Please enter your name here