ಶರಣ್ ಪಂಪುವೆಲ್ ಬಗ್ಗೆ ಹಾಗು ದುರ್ಗಾವಾಹಿನಿ ಸಂಘಟನೆಯ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಅವಹೇಳನಕಾರಿ ಪ್ರಕಟಣೆಗೆ ಖಂಡನೆ 

Spread the love

ಶರಣ್ ಪಂಪುವೆಲ್ ಬಗ್ಗೆ ಹಾಗು ದುರ್ಗಾವಾಹಿನಿ ಸಂಘಟನೆಯ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಅವಹೇಳನಕಾರಿ ಪ್ರಕಟಣೆಗೆ ಖಂಡನೆ 

ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್ ರವರ ಮೇಲೆ ಹಾಗು ದುರ್ಗಾವಾಹಿನಿ ಸಂಘಟನೆಯ ಬಗ್ಗೆ ನಿರಂತರ ಅಪಪ್ರಚಾರ ಸುಳ್ಳು ಸುದ್ದಿಗಳನ್ನು ಹರಡಿ ಅವಹೇಳನಕಾರಿ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿ ಅವಮಾನ ಮಾಡುತ್ತಿರುವುದು ಕಂಡು ಬಂದಿದ್ದು ಅಲ್ಲದೆ ನಮ್ಮ ವಿಶ್ವ ಹಿಂದೂ ಪರಿಷತ್ತಿನ ಯುವತಿಯರ ವಿಭಾಗ ದುರ್ಗಾವಾಹಿನಿಯ ಮೇಲೆ ಇಲ್ಲದ ಸುಳ್ಳು ಆರೋಪಗಳನ್ನು ಹಾಕಿ ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ.

ಮಂಗಳೂರು ಮಹಾನಗರದಲ್ಲಿ ನಿರಂತರ ಮಹಿಳೆಯರ ಮೇಲೆ ದೌರ್ಜನ್ಯ, ಲವ್ ಜಿಹಾದ್ ವಿರುದ್ಧ ಹೋರಾಟ ಮಾಡುತ್ತಿರುವ ಸಂಘಟನೆ ದುರ್ಗಾವಾಹಿನಿಯಾಗಿದ್ದು ಜೊತೆಗೆ ಮಹಿಳೆಯರಿಗೆ ಆತ್ಮಸ್ಥರ್ಯ ತುಂಬಿಸಲು, ಪುನರ್ವಸತಿಗೊಸ್ಕರ ಕೆಲಸ ಮಾಡುತ್ತಿದ್ದು ಇದನ್ನು ಸಹಿಸದ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ದುರ್ಗಾವಾಹಿನಿಯ ಬಗ್ಗೆ ಸುಳ್ಳು ಅಪಪ್ರಚಾರ ಮಾಡುತ್ತಿರುವುದು ಖಂಡನೀಯವಾಗಿದೆ, ಈಗಾಗಲೇ ಕೆಲವು ಠಾಣೆಗಳಿಗೆ ದೂರನ್ನು ಹಾಗು ವಿಭಾಗ ಕಾರ್ಯದರ್ಶಿಗಳು ಪೊಲೀಸ್ ಕಮಿಷನರಿಗೆ ದೂರು ನೀಡಿದ್ದು. ಪೊಲೀಸ್ ಇಲಾಖೆ ತಕ್ಷಣ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಲು ಈ ಮೂಲಕ ಆಗ್ರಹಿಸಿತ್ತಿದೇನೆ ಎಂದು ದುರ್ಗಾವಾಹಿನಿ ಜಿಲ್ಲಾ ಸಂಚಾಲಕಿ ಸುಕನ್ಯಾ ರಾವ್  ಪ್ರಕಟಣೆಯಲ್ಲಿ ತಿಳಿಸಿದರು


Spread the love

1 Comment

  1. Sharan Pumpwell is a useless fellow. No hindu agrees with his communal mindset. Chillar party. Dont post anything about him in ur group and demean your own credibility.

Comments are closed.