ಶರಣ್ ಪಂಪ್ವೆಲ್ ಬಂಧಿಸುವಂತೆ ಫಾಝಿಲ್ ತಂದೆಯಿಂದ ನಗರ ಪೊಲೀಸ್ ಆಯುಕ್ತರಿಗೆ ಮನವಿ

Spread the love

ಶರಣ್ ಪಂಪ್ವೆಲ್ ಬಂಧಿಸುವಂತೆ ಫಾಝಿಲ್ ತಂದೆಯಿಂದ ನಗರ ಪೊಲೀಸ್ ಆಯುಕ್ತರಿಗೆ ಮನವಿ

ಮಂಗಳೂರು: ತನ್ನ ಮಗ ಮೊಹಮ್ಮದ್ ಫಾಝಿಲ್ ಮಂಗಳಪೇಟೆ ಹತ್ಯೆಯ ಬಗ್ಗೆ ಶರಣ್ ಪಂಪ್ವೆಲ್ ನನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುವಂತೆ ಫಾಝಿಲ್ ತಂದೆ ಉಮರ್ ಫಾರೂಕ್ ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

2022 ರ ಜುಲೈ 28ರಂದು ತನ್ನ ಮಗನಾದ ಫಾಝಿಲ್ ನನ್ನು ದುಷ್ಕರ್ಮಿಗಳು ಬಹಿರಂಗವಾಗಿ ಜನಬಿಡದ ಪ್ರದೇಶದಲ್ಲಿ ಕೊಲೆ ಮಾಡಿದ್ದು ಸುರತ್ಕಲ್ ಠಾಣಾ ಆಕ್ರ ಸಂಖ್ಯೆ 62/2022 ರಂತೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಿ ಮಾನ್ಯ ತನಿಖಾಧಿಕಾರಿಯವರು 8 ಮಂದಿ ದುಷ್ಕರ್ಮಿಗಳನ್ನು ಬಂಧಿಸಿದ್ದು ಅವರ ಮೇಲೆ ಚಾರ್ಜ್ ಶೀಟ್ ಮಾನ್ಯ ನ್ಯಾಯಾಲಯಕ್ಕೆ ನಲ್ಲಿಸಿರುತ್ತಾರೆ.

ತಾನು ಈ ಪ್ರಕರಣ ಬಾಬು ತನಿಖಾಧಿಕಾರಿಯವರಲ್ಲಿ ಇದರ ಸೂತ್ರದಾರರ ಬಗ್ಗೆ ತನಿಖೆ ನಡೆಸಲು ಕೇಳಿಕೊಂಡು ಬರುತ್ತಿದ್ದು ಈ ವರೆಗೆ ಯಾವುದೇ ವ್ಯಕ್ತಿಗಳನ್ನು ತನಿಖೆಗೆ ಒಳಪಡಿಸಿರುವುದಿಲ್ಲ. ಜನವರಿ 29 ರಂದು ಮಾಧ್ಯಮವೊಂದರ ಯುಟ್ಯುಬ್ ಚಾನಲ್‌ ನೋಡಲಾಗಿದ್ದು, ಅದರಲ್ಲಿ ಬಜರಂಗದಳದ ಮುಖಂಡ ಶರಣ್ ಪಂಪೈಲ್ ಎಂಬಾತನು ನನ್ನ ಮಗನ ಹತ್ಯೆಯನ್ನು ಸಮರ್ತಿಸಿ ಸುರತ್ನಲ್ ನಲ್ಲಿ ಯುವಕರು ಈ ನಡೆಸಿದ್ದು, ಅದನ್ನು ಹೊಗಳಿ ತುಮಕೂರಿನಲ್ಲಿ ನಡೆದ ಬಜರಂಗದಳದ ಹತ್ಯೆ ಶೌರ್ಯಯಾತ್ರೆಯಲ್ಲಿ ಮಾತನಾಡಿದ ಶರಣ್ ಬಹಿರಂಗವಾಗಿ ಹೇಳಿಕೆಯನ್ನು ನೀಡಿದ್ದಾನೆ. ” ಪ್ರವೀಣ್ ಹತ್ಯೆಗೆ ಪ್ರತೀಕಾರವಾಗಿ ಸುರತ್ಕಲ್ ಮುಸ್ಲಿಂ ಯುವಕರ ಎದುರೇ ಪಾಝಿಲ್ ನನ್ನು ಕೊಲೆ ಮಾಡಲಾಯಿತು.” ನನ್ನ ಮಗನ ಹತ್ಯೆಯ ಬಗ್ಗೆ ಈ ಶರಣ್ ಗೆ ಸಂಪೂರ್ಣ ಮಾಹಿತಿ ಇದ್ದು ಆತನ ಅಣತಿಯಿಂದ ನಡೆದಿರಬಹುದೆಂಬ ಅನುಮಾನ ಇದು ಈ ಬಗ್ಗೆ ಆತನನ್ನು ಪ್ರಕರಣದಲ್ಲಿ ಬಂಧಿಸಿ ಸೂಕ್ತ ಹೆಚ್ಚುವರಿ ತನಿಖೆ ನಡೆಸುವಂತೆ ಮನವಿಯಲ್ಲಿ ಕೋರಿದ್ದಾರೆ.


Spread the love