ಶಶಿರೇಖಾ ಸಂಕಷ್ಟಕ್ಕೆ ಸ್ಪಂದಿಸಿದ ಸುಜೀವ್ ಸಂಸ್ಥೆ

Spread the love

ಶಶಿರೇಖಾ ಸಂಕಷ್ಟಕ್ಕೆ ಸ್ಪಂದಿಸಿದ ಸುಜೀವ್ ಸಂಸ್ಥೆ

ಮೈಸೂರು:ಕೊರೊನಾ ಮಹಾಮಾರಿಯನ್ನು ತಡೆಯುವ ಸಲುವಾಗಿ ಮಾಡಲಾದ ಲಾಕ್ ಡೌನ್ ನಿಂದ ಹಲವು ಕ್ಷೇತ್ರಗಳಿಗೆ ಹೊಡೆತ ಬಿದ್ದಿದ್ದು, ಜೀವನ ಮಾಡುವುದೇ ಕಷ್ಟವಾಗಿದೆ. ದಿನಗೂಲಿ ನೌಕರರು, ಟೈಲರ್, ಬಿದಿರು ಕೆಲಸ ಮಾಡುವವರು ಹೀಗೆ ದೈನಂದಿನ ದುಡಿಮೆ ನಂಬಿ ಬದುಕುವವರ ಬದುಕು ಹೈರಾಣವಾಗಿದೆ.

 ಮೈಸೂರು ನಗರದಲ್ಲಿ ಹಲವು ಕಡೆಗಳಲ್ಲಿ ಬಿದಿರು ಕೆಲಸ ಮಾಡಿ ಬದುಕುವ ನೂರಾರು ಕುಟುಂಬಗಳಿವೆ. ಬೀದಿಬದಿಯಲ್ಲಿ ಮೊರ, ಏಣಿ, ಬುಟ್ಟಿ, ಚಟ್ಟ ಹೀಗೆ ಹಲವು ಬಿದಿರಿನಿಂದ ಹಲವು ರೀತಿ ಪರಿಕರಗಳನ್ನು ತಯಾರಿಸಿ ಅದರ ಮಾರಾಟದಿಂದ ಜೀವನ ಸಾಗಿಸುತ್ತಾ ಬಂದಿದ್ದಾರೆ. ಇವರ ಬದುಕು ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟಕ್ಕೀಡಾಗಿತ್ತು.

ತಾವು  ಅನುಭವಿಸುತ್ತಿರುವ ನೋವು ಮತ್ತು ವಾಸ್ತವ ಸ್ಥಿತಿ ಬಿಂಬಿಸುವ ಮಾತುಗಳನ್ನು ಮೈಸೂರಿನ ಜನತಾ ನಗರ ನಿವಾಸಿ ಶಶಿರೇಖಾ ಎಂಬುವರು ಆಡಿದ್ದರಲ್ಲದೆ, ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸಹಾಯ ಹಸ್ತ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಇದನ್ನು ನೋಡಿದ ಸುಜೀವ್ ಸಂಸ್ಥೆಯ ಅಧ್ಯಕ್ಷರು, ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ರಾಜಾರಾಂ ಅವರು ಸಂಕಷ್ಟಕ್ಕೆ ಸ್ಪಂದಿಸಿದ್ದು, ಮೈಸೂರಿನ ಜನತಾನಗರದಲ್ಲಿರುವ  ಸುಮಾರು ಐವತ್ತು ಕುಟುಂಬಗಳಿಗೆ ದಿನಸಿ ಕಿಟ್ ಗಳ ನೆರವು ನೀಡಿದ್ದಾರೆ.

ಈ ವೇಳೆ ಮಂಜುಳ ಸೌಂಡ್ಸ್ ರೋಹಿತ್, ಸುನೀಲ್ ಸೇರಿದಂತೆ ಸುಜೀವ್ ಸಂಸ್ಥೆಯ ಇತರೆ ಸದಸ್ಯರು  ಇದ್ದರು.


Spread the love