
ಶಾಂತಿ ಸೌಹಾರ್ದತೆಗೆ ಕಾಂಗ್ರೆಸಿಗೆ ಮತ ನೀಡಿ – ಕಾಂಗ್ರೆಸ್ ಅಭ್ಯರ್ಥಿ ಲೋಬೊ ಕರೆ
ದ. ಕ. ಜಿಲ್ಲೆ ವಿದ್ಯಾವಂತರ ಜಿಲ್ಲೆ. ಜನರು ಅತ್ಯಂತ ಶಾಂತಿಪ್ರಿಯರು. ಇಲ್ಲಿ ಶಾಂತಿಯನ್ನು ಕೆದಕುವಂತಹ ಕೆಲಸಕ್ಕೆ ಅವಕಾಶ ಮಾಡಿಕೊಡಬಾರದು. ಶಾಂತಿ ಸೌಹಾರ್ದತೆಗೆ ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಬೇಕೆಂದು ಕಾಂಗ್ರೆಸ್ ಅಭ್ಯರ್ಥಿ ಜೆ. ಆರ್. ಲೋಬೊ ರವರು ಕರೆಯಿತ್ತರು. ಅವರು ತಾ 3.4.2023ರಂದು ಬಂದರು ರಸ್ತೆ ಬದ್ರಿಯಾ ಜಂಕ್ಷನ್ ನಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ ಹೇಳಿದರು.
ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಅನೇಕ ಯೋಜನೆಗಳು ಜಾರಿಗೆ ಬಂದಿತ್ತು. ಅದನ್ನೇ ಇಂದಿನ ಶಾಸಕರು ಮುಂದುವರಿಸಿಕೊಂಡು ಬಂದಿರುತ್ತಾರೆ. ಸ್ಮಾರ್ಟ್ ಸಿಟಿ ಯೋಜನೆಯನ್ನು ಹಳೆ ಬಂದರು ಮತ್ತು ಮೀನುಗಾರಿಕೆ ಉದ್ಯಮವನ್ನು ಮುಂದಿಟ್ಟುಕೊಂಡು ಅನುಷ್ಠಾನ ಮಾಡಿದ್ದು ನಾನು ಶಾಸಕನಾದ ವೇಳೆಯಲ್ಲಿ. ಆದರೆ ದುರದೃಷ್ಟವಶಾತ್ ಬಿಜೆಪಿ ಯವರ ಅಪಪ್ರಚಾರದಿಂದ ನಾನು ಚುನಾವಣೆಯಲ್ಲಿ ಪರಾಭವಗೊಂಡೆ. ಆದರೆ ಈಗಿನ ಜನಪ್ರತಿನಿಧಿಗಳು ಬಂದರು ಮತ್ತು ಮೀನುಗಾರಿಕೆ ಉದ್ಯಮಕ್ಕೆ ಯಾವುದೇ ಒತ್ತನ್ನು ನೀಡಿಲ್ಲ. ಅದಲ್ಲದೆ ಬಂದರು ಪ್ರದೇಶದ ಅಭಿವೃದ್ಧಿಗೆ ಕಿಂಚಿತ್ತೂ ತಲೆ ಹಾಕಲಿಲ್ಲ ಎಂದರು.
ಸಭೆಯಲ್ಲಿ ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲಿಂ, ಕಾರ್ಪೊರೇಟರ್ ಗಳಾದ ಎ. ಸಿ. ವಿನಯರಾಜ್, ಅಬ್ದುಲ್ ಲತೀಫ್, ಡಿ. ಎಂ. ಅಸ್ಲಾಂ ಮಾತನಾಡಿದರು.ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಪದಾಧಿಕಾರಿಗಳಾದ ರಾಮ್ಲನ್ ಸಹಿತ ಅನೇಕ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು ಒಪ್ಪಿ ಜೆ. ಆರ್. ಲೋಬೊ ರವರ ಸಮ್ಮುಖದಲ್ಲಿ ಸೇರಿಕೊಂಡರು.
ವಾರ್ಡ್ ಅಧ್ಯಕ್ಷ ಸಾಲ್ವಡರ್,ಓಸ್ವಲ್ಡ್ ಫುರ್ತಾದೋ,ಹನೀಫ್ ಹಾಜಿ, ದೀಪಕ್ ಶೆಟ್ಟಿ, ವಿನೋದ್ ಕುಮಾರ್, ಗಿಲ್ಬರ್ಟ್ ಡಿಸೋಜಾ,ಮೋಹನ್ ಶೆಟ್ಟಿ, ಸುಜಾತಾ, ಶಶಿಕಿರಣ್,, ಐಡಾ ಕುಟಿನ್ಹಾ ಮೊದಲಾದವರು ಉಪಸ್ಥಿತರಿದ್ದರು.