ಶಾರ್ಟ್ ಸರ್ಕ್ಯೂಟ್ ನಿಂದ ಬ್ರಹ್ಮಾವರದ ಸಪ್ತಮಿ ಹೋಟೆಲ್ ಬೆಂಕಿಗಾಹುತಿ

Spread the love

ಶಾರ್ಟ್ ಸರ್ಕ್ಯೂಟ್ ನಿಂದ ಬ್ರಹ್ಮಾವರದ ಸಪ್ತಮಿ ಹೋಟೆಲ್ ಬೆಂಕಿಗಾಹುತಿ

ಉಡುಪಿ : ಜಿಲ್ಲೆಯಲ್ಲಿ ಸುರಿದ ಗುಡುಗು ಸಹಿತ ಭಾರೀ ಮಳೆಯ ಹಿನ್ನಲೆಯಲ್ಲಿ ಸಿಡಿಲು ಬಡಿದು ಹೋಟೆಲೊಂದು ಬೆಂಕಿಗಾಹುತಿಯಾದ ಘಟನೆ ಬುಧವಾರ ರಾತ್ರಿ ನಡೆದಿದೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಆಕಾಶವಾಣಿ ಸಮೀಪವಿರುವ ಸಪ್ತಮಿ ಹೋಟೆಲಿಗೆ ಸಿಡಿಲು ಬಡಿದ ಪರಿಣಾಮ ಹೋಟೆಲಿನಲ್ಲಿದ್ದ ರೆಫ್ರಿಜರೇಟರ್ ನ ಕಂಪ್ರೇಸರ್ ಸಿಡಿದು ಬೆಂಕಿ ಹತ್ತಿಕೊಂಡ ಪರಿಣಾಮ ಹೋಟೆಲು ಬೆಂಕಿಗಾಹುತಿಯಾಗಿದೆ. ಘಟನೆಯಿಂದ ರೂ 80000 ಕ್ಕೂ ಅಧಿಕ ಮೊತ್ತದ ನಷ್ಟ ಸಂಭವಿಸಿದೆ

ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ತೆರಳಿ ಬೆಂಕಿಯನ್ನು ನಂದಿಸಿದ್ದಾರೆ. ಮಳೆಯ ಕಾರಣ ಹೋಟೆಲ್ ಬೇಗ ಮುಚ್ಚಿದ್ದರಿಂದ ಭಾರಿ ಅನಾಹುತ ತಪ್ಪಿದೆ.


Spread the love