ಶಾಲಾಮಕ್ಕಳೊಂದಿಗೆ ಮರಿಯಾನೆಯ ತುಂಟಾಟ!

Spread the love

ಶಾಲಾಮಕ್ಕಳೊಂದಿಗೆ ಮರಿಯಾನೆಯ ತುಂಟಾಟ!

ಚಾಮರಾಜನಗರ: ತಾಯಿಯಿಂದ ತಪ್ಪಿಸಿಕೊಂಡ ಮರಿ ಆನೆಯೊಂದು ಗಿರಿಜನg ಪೋಡಿನ ಶಾಲೆಗೆ ಬಂದು ಮಕ್ಕಳೊಟ್ಟಿಗೆ ಆಟವಾಡಿರುವ ಅಪರೂಪದ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಪುರಾಣಿಪೋಡಿನ ವಸತಿ ಶಾಲೆಯಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟ ಅರಣ್ಯ ಪ್ರದೇಶದಲ್ಲಿ ಅಮ್ಮನಿಂದ ಬೇರ್ಪಟ್ಟ ಗಂಡು ಮರಿಯಾನೆ ಪುರಾಣಿಪೋಡಿನ ವಸತಿ ಶಾಲೆ ಆವರಣದಲ್ಲಿ ಕಾಣಿಸಿಕೊಂಡಿದೆ. ಆನೆ ಕಂಡದ್ದೇ ತಡ ಶಾಲಾ ಮಕ್ಕಳಂತೂ ಫುಲ್ ಖುಷ್!. ಮಕ್ಕಳು ಆಡಿ ನಲಿದಾಡಿದರು. ಮನುಷ್ಯರನ್ನೇ ಕಾಣದ ಮರಿಯಾನೆಯೂ ಕೂಡಾ ಹೊಸ ಸ್ನೇಹಿತರೊಟ್ಟಿಗೆ ಸಮಯ ಕಳೆದು ಕೊಟ್ಟ ಹಾಲು ಕುಡಿದು ಸಂಭ್ರಮಿಸಿತು. ಮಕ್ಕಳಂತೂ ಬಾಳೆಹಣ್ಣು ತಿನ್ನಿಸಿ ಸಂಭ್ರಮಿಸಿದರು.

ಬಳಿಕ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಯಳಂದೂರು ವಲಯದ ಸಿಬ್ಬಂದಿ ಗಸ್ತು ತಿರುಗಿ ತಾಯಿ ಆನೆ ಘೀಳಿಡುತ್ತಿದ್ದುದನ್ನು ಗಮನಿಸಿದ್ದಾರೆ. ನಂತರ ಅವರು, ಈರಣ್ಣಕಟ್ಟೆ ಪೋಡಿನ ಬಳಿ ಈ ಮರಿಯಾನೆ ತಾಯಿಯನ್ನು ಸೇರುವಂತೆ ಮಾಡಿದರು.


Spread the love