ಶಾಲೆಗೆ ಬೆಂಕಿ ಹಚ್ಚಿದ್ದಾ ಕಿಡಿಗೇಡಿಗಳು?

Spread the love

ಶಾಲೆಗೆ ಬೆಂಕಿ ಹಚ್ಚಿದ್ದಾ ಕಿಡಿಗೇಡಿಗಳು?

ಗುಂಡ್ಲುಪೇಟೆ: ತಾಲ್ಲೂಕಿನ ಹಂಗಳ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಮತ್ತು ಪೀಠೋಪಕರಣಗಳು ಬೆಂಕಿಗೆ ಆಹುತಿಯಾಗಿದೆ.

ಸಂಜೆ 6 ಗಂಟೆಯ‌ ಸಮಯದಲ್ಲಿ ಶಾಲೆಗೆ ಬೆಂಕಿಬಿದ್ದಿದ್ದು, ಶಾಲೆಯ ಕೊಠಡಿಯೊಳಗೆ ಹೊಗೆ ಕಾಣಿಸಿಕೊಂಡದನ್ನು ಗಮನಿಸಿದ ಗ್ರಾಮಸ್ಥರು ಬೆಂಕಿ ನಂದಿಸುವಲ್ಲಿ ಪ್ರಯತ್ನ ಪಟ್ಟಿದ್ದಾರೆ. ಆದರೂ ಶಾಲೆಯ ಕೊಠಡಿಯಲ್ಲಿದ್ದ ಪುಸ್ತಕ ಮತ್ತು ಮರದ ಪೀಠೋಪಕರಣಗಳು ಸುಟ್ಟು ಕರಲಾಗಿದೆ ಎನ್ನಲಾಗಿದೆ. ಘಟನಾ ನಂತರ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಯವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಶಾಲೆಯಲ್ಲಿ ಸಿ.ಸಿ ಕ್ಯಾಮರಾ ಅಳವಡಿಸಿದ್ದು ಪರಿಶೀಲಿಸಿದ ನಂತರ ಕೃತ್ಯ ಮಾಡಿದವರ ಬಗ್ಗೆ ತಿಳಿಯಲಿದೆ.


Spread the love