ಶಾಸಕ ಅಪ್ಪಚ್ಚುರಂಜನ್ ಅಸಮಾಧಾನಗೊಂಡಿದ್ದೇಕೆ ?

Spread the love

ಶಾಸಕ ಅಪ್ಪಚ್ಚುರಂಜನ್ ಅಸಮಾಧಾನಗೊಂಡಿದ್ದೇಕೆ ?

ಮಡಿಕೇರಿ: ನೂತನ ಸಚಿವ ಸಂಪುಟದಲ್ಲಿ ತಮಗೆ ಸ್ಥಾನ ಸಿಗದಿರುವ ಬಗ್ಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಿರಿಯ ಶಾಸಕನಾಗಿರುವ ನನಗೆ ಈ ಬಾರಿಯಾದರೂ ಸಚಿವ ಸ್ಥಾನ ಸಿಗುತ್ತದೆ ಎನ್ನುವ ವಿಶ್ವಾಸವಿತ್ತು. ಆದರೆ ಒಂದೊಂದು ಜಿಲ್ಲೆಗೆ 3 ಬೆಂಗಳೂರಿಗೆ 8 ಸಚಿವ ಸ್ಥಾನ ನೀಡಿ ನಮ್ಮನ್ನು ಗುರುತಿಸದೆ ಇರುವುದು ಬೇಸರ ತಂದಿದೆ ಎಂದರು.

ಸಂಸದ ಪ್ರತಾಪ್ ಸಿಂಹ ಅವರಾದರೂ ನಮಗೆ ಸಚಿವ ಸ್ಥಾನ ಸಿಗಬೇಕೆಂದು ಒತ್ತಡ ಹಾಕಬಹುದಿತ್ತು. ಆದರೆ ಅವರೂ ಜಾಣ ಮೌನಕ್ಕೆ ಶರಣಾದರು, ಅವರ ಗೆಲುವಿಗೆ 80 ಸಾವಿರ ಲೀಡ್ ಮತಗಳನ್ನು ನೀಡಿದ್ದೇವೆ ಎಂದು ಅಪ್ಪಚ್ಚುರಂಜನ್ ಅಸಮಾಧಾನ ವ್ಯಕ್ತಪಡಿಸಿದರು.


Spread the love