ಶಾಸಕ ಜಿ.ಟಿ.ದೇವೇಗೌಡರ ವಿರುದ್ಧ ಬಂಡಾಯದ ಕಹಳೆ!

Spread the love

ಶಾಸಕ ಜಿ.ಟಿ.ದೇವೇಗೌಡರ ವಿರುದ್ಧ ಬಂಡಾಯದ ಕಹಳೆ!

ಮೈಸೂರು: ಶಾಸಕ ಜಿ.ಟಿ.ದೇವೇಗೌಡರ ವಿರುದ್ಧ ಬಂಡಾಯವೆದ್ದಿರುವ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಮುಖಂಡರು, ಬೆಂಬಲಿಗರು, ಕಾರ್ಯಕರ್ತರ ಶಕ್ತಿ ಪ್ರದರ್ಶನ ಮಾಡಿ ಜೆಡಿಎಸ್ ಸದಸ್ಯತ್ವಕ್ಕೆ ಸಾಮೂಹಿಕ ರಾಜೀನಾಮೆ ಪಕ್ಷ ತೊರೆಯುವುದಾಗಿ ಘೋಷಣೆ ಮಾಡುವ ಮೂಲಕ ಬಂಡಾಯದ ಕಹಳೆ ಮೊಳಗಿಸಿದ್ದಾರೆ.

ಶಾಸಕ ಜಿ.ಟಿ.ದೇವೇಗೌಡರಿಂದ ಅಂತರ ಕಾಯ್ದುಕೊಂಡಿದ್ದ ಜಿಪಂ ಮಾಜಿ ಸದಸ್ಯರಾದ ಮಾದೇಗೌಡ, ಬೀರಿಹುಂಡಿ ಬಸವಣ್ಣ, ಮೈಮುಲ್ ಮಾಜಿ ಅಧ್ಯಕ್ಷ ಮಾವಿನಹಳ್ಳಿ ಸಿದ್ಧೇಗೌಡ, ಮುಖಂಡರಾದ ಕೃಷ್ಣನಾಯಕ ಸೇರಿ 50ಕ್ಕೂ ಹೆಚ್ಚು ಮಂದಿ ಮುಖಂಡರು ಜೆಡಿಎಸ್ ತೊರೆಯುವ ಘೋಷಣೆ ಮಾಡಿದ್ದು ಜೆಡಿಎಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಜಗಜ್ಜಾಹೀರಾಗಿದೆ.

ಕೇರ್ಗಳ್ಳಿಯ ಸಮುದಾಯ ಭವನದಲ್ಲಿ ಸ್ವಾಭಿಮಾನಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಬೀರಿಹುಂಡಿ ಬಸವಣ್ಣ, ನಮ್ಮನ್ನು ಕಳೆದ ಜಿಪಂ ಚುನಾವಣೆಯಲ್ಲೇ ಸೋಲಿಸುವ ಪ್ರಯತ್ನ ನಡೆದಿತ್ತು, ಮತದಾರರು ಅದನ್ನು ತಪ್ಪಿಸಿದರು. ಲೋಕಸಭೆ, ನಗರಪಾಲಿಕೆ, ಎಪಿಎಂಸಿ, ಸಹಕಾರ ಇಲಾಖೆ, ನಗರಪಾಲಿಕೆ, ಎಂಎಲ್‌ಸಿ ಚುನಾವಣೆಗಳಲ್ಲಿ ಪಕ್ಷಕ್ಕಾಗಿ ದುಡಿದವರು ನಾವು. ಶಾಸಕರು ನಮ್ಮ ವಿರುದ್ಧವಾದರು. 2013ರಲ್ಲಿ ನನಗೆ ಅವಮಾನ ಮಾಡಿದರು. ಬೆಳವಾಡಿ ಶಿವಮೂರ್ತಿಯವರೊಂದಿಗೆ ಜಗಳವಾಯಿತು. ಐತಿಹಾಸಿಕ ದಸರೆಯಲ್ಲಿ ಓರ್ವ ಮಹಿಳೆ ಮೇಯರ್ ಆಗಿ ಪುಷ್ಪಾರ್ಚನೆ ಮಾಡುವುದು ತಪ್ಪಿಸಲಾಯಿತು. ದಡದ ಕಲ್ಲಹಳ್ಳಿಗೆ ಸಿದ್ದರಾಮಯ್ಯರನ್ನು ಕರೆಸಿ ಮುಂದಿನ ಸಿಎಂ ಆಗಲೆಂದು ಪೂಜೆ ಮಾಡಿಸಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರು ಯಾರು? ಇಷ್ಟೆಲ್ಲಾ ಕಾರಣಗಳಿಂದ ನಾವು ಜೆಡಿಎಸ್‌ನಲ್ಲೇ ಉಳಿಯಬೇಕೇ ಎಂದು ಪ್ರಶ್ನಿಸಿದರು.

ಮಾವಿನಹಳ್ಳಿ ಸಿದ್ದೇಗೌಡ ಮಾತನಾಡಿ, ಮುಂದೆ ನಾವು ಕೈಗೊಳ್ಳುವ ತೀರ್ಮಾನಕ್ಕೆ ನೀವೆಲ್ಲರೂ ಶಕ್ತಿ ತುಂಬಬೇಕು. ನನಗೆ ಹಾಗೂ, ನನ್ನಂತಹ ನೂರಾರು ಮಂದಿಗೆ ಆಗಿರುವ ಅನ್ಯಾಯಕ್ಕೆ 2023ರ ಚುನಾವಣೆ ಮೂಲಕ ಉತ್ತರ ಕೊಡಬೇಕಿದೆ. ಹೀಗಾಗಿ ನಾವು ಮುಂದೆ ಕೈಗೊಳ್ಳುವ ನಿರ್ಧಾರಕ್ಕೆ ಶಕ್ತಿ ನೀಡಿ. ಜೆಡಿಎಸ್ ನಾಯಕರ ಬಗ್ಗೆಯಾಗಲಿ, ಪಕ್ಷದ ಬಗ್ಗೆಯಾಗಲಿ ನಮ್ಮ ಅಭ್ಯಂತರವಿಲ್ಲ. ಆದರೆ, ಶಾಸಕ ಜಿ.ಟಿ.ದೇವೇಗೌಡರಿಂದ ಆಗಿರುವ ಅನಾಹುತ ಸರಿಪಡಿಸಬೇಕಿದೆ. ಪಕ್ಷಕ್ಕೆ ಸೇರಿದ ಬಳಿಕವೂ ನಮ್ಮನ್ನು ಕರೆಸಿ ಮಾತನಾಡುವ ನಾಯಕರಿಲ್ಲ. ಹೀಗಾಗಿ ಸ್ವಾಭಿಮಾನಕ್ಕಾಗಿ ಪಕ್ಷ ತೊರೆದಿದ್ದೇವೆ. ಮುಂದೆ ತೆಗೆದುಕೊಳ್ಳುವ ತೀರ್ಮಾನಕ್ಕೆ ನಿಮ್ಮ ಬೆಂಬಲ ಇರಲಿ ಎಂದಿದ್ದಾರೆ. ಚುನಾವಣೆ ಹೊಸ್ತಿಲಲ್ಲಿರುವ ಈ ಸಂದರ್ಭದಲ್ಲಿ ಆಗಿರುವ ಬೆಳವಣಿಗೆ ಹಾಲಿ ಶಾಸಕ ಜಿ.ಟಿ.ದೇವೇಗೌಡರು ಮಾತ್ರವಲ್ಲದೆ, ಜೆಡಿಎಸ್ ಗೆ ಶಾಕ್ ನೀಡಿದ್ದಂತು ನಿಜ


Spread the love