Home Mangalorean News Kannada News ಶಿಕ್ಷಣದಲ್ಲಿ ಪಾಠದ ಜೊತೆಗೆ ಕಲೆಗಳ ಸಂವಹನ ಅಗತ್ಯ: ಆಸ್ಟ್ರೋ ಮೋಹನ್

ಶಿಕ್ಷಣದಲ್ಲಿ ಪಾಠದ ಜೊತೆಗೆ ಕಲೆಗಳ ಸಂವಹನ ಅಗತ್ಯ: ಆಸ್ಟ್ರೋ ಮೋಹನ್

Spread the love

ಶಿಕ್ಷಣದಲ್ಲಿ ಪಾಠದ ಜೊತೆಗೆ ಕಲೆಗಳ ಸಂವಹನ ಅಗತ್ಯ: ಆಸ್ಟ್ರೋ ಮೋಹನ್

ಉಡುಪಿ: ಶಿಕ್ಷಣದಲ್ಲಿ ಪಾಠದ ಜೊತೆಗೆ ಕಲೆಗಳ ಸಂವಹನ ಅಗತ್ಯ. ಶಿಕ್ಷಣ ಏಕಮುಖವಾಗದೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಾಗಬೇಕಾದರೆ ಅಲ್ಲಿ ಯಾವುದಾದರೊಂದು ಕಲೆಯ ಅಭ್ಯಾಸ ಅಗತ್ಯವೆನಿಸುತ್ತದೆ. ಮೆದುಳಿನ ಎಡಭಾಗ ಪಾಠಗಳಿಂದ ಬೆಳವಣಿಗೆಯಾದರೆ ಬಲಭಾಗ ಪಾಠೇತರ ಚಟುವಟಿಕೆಗಳಿಂದ ಪುಷ್ಟಿ ಪಡೆಯುತ್ತದೆ. ಶಾಲೆಗಳಲ್ಲಿ ವಿವಿಧ ಸಂಘಗಳ ಮೂಲಕ ಚಟುವಟಿಕೆ ನಡೆಸಿ ವಿದ್ಯಾರ್ಥಿಗಳು ಸಕ್ರಿಯರಾಗಿ ಪಾಲ್ಗೊಂಡಾಗ ಅವರ ಸಮಗ್ರ ಬೆಳವಣಿಗೆಯಾಗುತ್ತದೆ. ಇಂದಿಗೆ ಮೊಬೈಲ್, ವ್ಯಾಟ್ಸಪ್, ಫೇಸ್‍ಬುಕ್‍ಗಳ ಬಳಕೆ ಅತಿಯಾಗಿ ವಿದ್ಯಾರ್ಥಿಗಳಲ್ಲಿ ಸಂವಹನೆ ಕಲೆ ಕುಂಟಿತವಾಗಿದೆ. ಇದನ್ನು ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಛಾಯಾಚಿತ್ರಕಲಾವಿದ ಆಸ್ಟ್ರೋ ಮೋಹನ್ ನುಡಿದರು.

ಅವರು ಉಡುಪಿ ವಳಕಾಡಿನ ಸರಕಾರಿ ಸಂಯುಕ್ತ ಪ್ರೌಢಶಾಲೆಯ ನಲಂದಾ ಸಭಾಭವನದಲ್ಲಿ ನಡೆದ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನಾಡಿದರು.

ಉದ್ಘಾಟನಾ ಕಾರ್ಯಕ್ರಮವನ್ನು ವಿಶೇಷ ರೀತಿಯಲ್ಲಿ ನಡೆಸಲಾಯಿತು. ಉದ್ಘಾಟನಾ ದೃಶ್ಯ ಕೆಮರಾದ ಸಹಾಯದಿಂದ ಐಪ್ಯಾಡ್‍ನಲ್ಲಿ ಕ್ಲಿಕ್ ಮಾಡಿ ಮೂಡಿಬರುವಂತೆ ವ್ಯವಸ್ಥೆಗೊಳಿಸಲಾಗಿತ್ತು. ಇದು ವಿದ್ಯಾರ್ಥಿಗಳಿಗೆ ಸೋಜಿಗವೆನಿಸಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆ ಇಂದು ರಮಾನಂದ ಭಟ್ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಚಿತ್ರಕಲಾ ಸಂಘ, ಕನ್ನಡ ಭಾಷಾ ಸಂಘ, ಇಂಗ್ಲಿಷ್ ಭಾಷಾ ಸಂಘ, ಹಿಂದಿ ಭಾಷಾ ಸಂಘ, ಸಂಸ್ಕøತ ಭಾಷಾ ಸಂಘ, ಎಕೋ ಕ್ಲಬ್, ಗ್ರಾಹಕ ಕ್ಲಬ್, ಕ್ವಿಜ್ ಕ್ಲಬ್, ವಿಜ್ಞಾನ ಸಂಘ ಇತ್ಯಾದಿ ವಿವಿಧ ಸಂಘಗಳ ವಿದ್ಯಾರ್ಥಿ ಅಧ್ಯಕ್ಷರು ಆಯಾ ಸಂಘದ ಕಾರ್ಯಕ್ರಮಗಳ ಬಗ್ಗೆ ಸಭೆಗೆ ವಿವರಿಸಿದರು.

ಶಾಲಾ ಎಸ್.ಡಿ.ಎಂ.ಸಿಯ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ನಿರ್ಮಲ ಬಿ. ಪ್ರಸ್ಥಾವನೆಗೈದರು. ಚಿತ್ರಕಲಾ ಶಿಕ್ಷಕ ಉಪಾಧ್ಯಾಯ ಮೂಡುಬೆಳ್ಳೆ ಸ್ವಾಗತಿಸಿದರು. ವಿದ್ಯಾರ್ಥಿ ನಚಿಕೇತ ಕಾರ್ಯಕ್ರಮ ನಿರ್ವಹಿಸಿದರು. ಹಿರಿಯ ಶಿಕ್ಷಕಿ ಸುಗುಣ ವಂದನಾರ್ಪಣೆಗೈದರು.


Spread the love

Exit mobile version