ಶಿಕ್ಷಣ ಪ್ರತಿ ಮಗುವಿಗೆ ಸಿಗಬೇಕಾದ ಹಕ್ಕು:ಎಸ್.ಎ.ರಾಮದಾಸ್

Spread the love

ಶಿಕ್ಷಣ ಪ್ರತಿ ಮಗುವಿಗೆ ಸಿಗಬೇಕಾದ ಹಕ್ಕು:ಎಸ್.ಎ.ರಾಮದಾಸ್

ಮೈಸೂರು: ಶಿಕ್ಷಣ ಎನ್ನುವುದು ಪ್ರತಿಯೊಂದು ಮಗುವಿಗೆ ಸಿಗಬೇಕಾದ ಮೂಲಭೂತ ಹಕ್ಕು ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು.

ಕೆಎಂಪಿಕೆ ಚಾರಿಟೇಬಲ್ ಟ್ರಸ್ಟ್ ಹಾಗೂ ಬ್ರಹ್ಮಿ ಭೂತ ಶ್ರೀ ವಾಸುದೇವ್ ಮಹಾರಾಜ್ ಫೌಂಡೇಶನ್ ವತಿಯಿಂದ ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಕ್ಷರಭ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಮೂಹಿಕ ವಿವಾಹವನ್ನು ಸರಳ ರೀತಿಯಲ್ಲಿ ಸರ್ಕಾರದ ವತಿಯಿಂದ ತಂದಿರುವ ಸಪ್ತಪದಿ ಯೋಜನೆಯಂತೆ ಅಕ್ಷರಭ್ಯಾಸ ಕಾರ್ಯಕ್ರಮವನ್ನ ಶಿಕ್ಷಣ ಇಲಾಖೆ ವತಿಯಿಂದ ರಾಜ್ಯದ ಎಲ್ಲಾ ಶಾಲೆಗಳಲ್ಲೂ ಹಮ್ಮಿಕೊಳ್ಳುವಂತೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು,

ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಪೋಷಕರ ಕರ್ತವ್ಯ, ಮಕ್ಕಳಿಗೆ ಶಿಕ್ಷಣದ ಜೊತೆಯಲ್ಲಿಯೇ ಕಲೆ ಕ್ರೀಡೆ ಸಾಂಸ್ಕೃತಿಕ ಸಂಗೀತ ಸೇರಿದಂತೆ ಯಾವ ಕ್ಷೇತ್ರದಲ್ಲಿ ಪ್ರತಿವಭಾವಂತರು ಎಂದು ಅರಿತು ಪ್ರಥಮ ಹಂತದಲ್ಲಿಯೇ ಪೋಷಕರು ಮನೆಯಿಂದ ಪ್ರೋತ್ಸಾಹ ನೀಡಬೇಕು ಮಕ್ಕಳು ಮುಖ್ಯವಾಹಿನಿಗೆ ಬಂದು ದೇಶದ ಅತ್ಯುತ್ತಮ ವ್ಯಕ್ತಿಯಾಗಿ ನಿರ್ಮಾಣವಗಾತ್ತಾರೆ. ಪುರಾಣ ನಂಬಿಕೆಯ ಪ್ರಕಾರ ಅಕ್ಷರಾಭ್ಯಾಸ ಮಾಡುವುದರಿಂದ ಮಕ್ಕಳ ನಾಲಗೆಯ ಮೇಲೆ ಸರಸ್ವತಿ ದೇವಿ ನೆಲೆಸಿ ಮಕ್ಕಳ ಶೈಕ್ಷಣಿಕ ಬದುಕು ಉತ್ತಮವಾಗಿರುತ್ತವೆ ಎಂಬ ನಂಬಿಕೆಯಿದೆ ಎಂದು ಹೇಳಿದರು.

ತಲಕಾಡಿನ ಶ್ರೀ ಬಾಲಕೃಷ್ಣಾನಂದ ಸಂಸ್ಥಾನಂ ಶುಕಶಂಕರ ಪೀಠದ ಶ್ರೀ ಶ್ರೀ ಶ್ರೀ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ರವರು ಮಾತನಾಡಿ ಪುರಾಣ ಇತಿಹಾಸದಲ್ಲಿರುವ ಪಾರ್ವತಿದೇವಿ ತನ್ನ ಮಗು ಗಣೇಶನಿಗೂ ಸಹ ಅಕ್ಷರಾಭ್ಯಾಸ ಕಲಿಸಿದ ಉಲ್ಲೇಖವಿದೆ, ಮಗು ಪೋಷಕರಿಂದ ಕಲಿತ ಮೊದಲ ಅಕ್ಷರದಲ್ಲಿರುವ ಆಸಕ್ತಿ, ಶ್ರಮಪಟ್ಟ ಕನಸನ್ನ ಕಂಡ ಪೋಷಕರು ಅದೇ ರೀತಿಯಲ್ಲೆ ಸನ್ಮಾರ್ಗದ ಕಡೆ ಮಗು ಬೆಳೆಯುವಂತೆ ನೋಡಿಕೊಳ್ಳುವುದು ಪೋಷಕರ ಕರ್ತವ್ಯವಾಗಿದೆ, ಶಿಕ್ಷಣಕ್ಕೆ ಎಂದು ಅಂತ್ಯವಿಲ್ಲ, ತಂತ್ರಜ್ಞಾನ ಮುಂದಿನ ಪೀಳಿಗೆ ಕಲಾಮಾನಕ್ಕೆ ತಕ್ಕಂತೆ ಪ್ರತಿದಿನ ಸಮಾಜದಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ತಿಳಿಯುತ್ತಲೇಯಿರಬೇಕು, ಪ್ರತಿಯೊಬ್ಬರು ಶಿಕ್ಷಣ ಪಡೆದ ನಂತರದಲ್ಲಿ ಅದನ್ನ ಮತ್ತೊರ್ವರಿಗೆ ವಿದ್ಯಾದಾನ ಮಾಡಲು ಮುಂದಾಗಬೇಕು ಎಂದರು

ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು ಬಂದಂತ ಮಕ್ಕಳ ಪೋಷಕರು ಮಕ್ಕಳಿಗೆ ವಿದ್ಯಾರಂಭ ಮಾಡಿಸಿ ಭಕ್ತಿಯನ್ನು ಸಮರ್ಪಿಸಿ ನಂಬಿಕೆಯನ್ನು ಪುನರ್ಜೀವನಗೊಳಿಸಲಾಯಿತು. ಸರಸ್ವತಿ ಪೂಜೆ ಮಾಡಿ ಆ ನಂತರ ಮಕ್ಕಳಿಗೆ ಹೆತ್ತವರು ಮಕ್ಕಳ ಕೈ ಹಿಡಿದು ಅಕ್ಕಿ ಕಾಳಿನಲ್ಲಿ ಓಂಕಾರ ಮತ್ತು ಗಣೇಶನಾಮ ಹಾಗೂ ತಮ್ಮ ಮಾತೃಭಾಷೆ ಅ ಆ ಇ ಮುಂತಾದವುಗಳನ್ನು ಬರೆಸುವುದರ ಬರೆಯುವ ಮೂಲಕ ಅಕ್ಷರಭ್ಯಾಸ ಮಾಡಿದರು.

ಕಾರ್ಯಕ್ರಮದಲ್ಲಿ ಮೂಡ ಮಾಜಿ ಅಧ್ಯಕ್ಷರಾದ ಎಚ್ ವಿ ರಾಜೀವ್, ಪರಮಪೂಜ್ಯ ಎಲೈವಾರ್ ಸ್ವಾಮೀಜಿ , ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ.ಪ್ರಕಾಶ್, ಹಿರಿಯ ಸಮಾಜಸೇವಕರಾದ ಕೆ ರಘುರಾಮ ವಾಜಪಾಯಿ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷ ಹೇಮನಂದೀಶ್, ನಗರಪಾಲಿಕ ಸದಸ್ಯರಾದ ಪ್ರಮೀಳಾ ಭರತ್, ಹಿರಿಯ ಪತ್ರಕರ್ತರಾದ ಅನಿಲ್ ಕುಮಾರ್, ಮಹರ್ಷಿ ವಿದ್ಯಾ ಸಂಸ್ಥೆಯ ಮುಖ್ಯಸ್ಥರಾದ ತೇಜಸ್ ಶಂಕರ್, ನಗರಪಾಲಿಕೆ ನಾಮನಿರ್ದೇಶಕರಾದ ಜಗದೀಶ್, ಕೆ ಎಂ ಪಿ ಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್, ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಪುರೋಹಿತರಾದ ಸುರೇಶ್ ಹೆಗ್ಡೆ, ಕಡಕೊಳ ಜಗದೀಶ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ನವೀನ್ ಕೆಂಪಿ, ಚಕ್ರಪಾಣಿ, ಸುಚೀಂದ್ರ,ಹಾಗೂ ಶಾಲೆಯ ಶಿಕ್ಷಕ ವೃಂದ ಹಾಜರಿದ್ದರು.


Spread the love