ಶಿಕ್ಷಣ ಸಂಸ್ಥೆಗಳಲ್ಲಿ ಕೋಮು ಸೌಹಾರ್ದತೆ ಕೆಡಿಸುವವರ ವಿರುದ್ದ ಪೊಲೀಸರು ಕ್ರಮ ಕೈಗೊಳ್ಳಿ ಪ್ರಶಾಂತ್‌ ಜತ್ತನ್ನ

Spread the love

ಶಿಕ್ಷಣ ಸಂಸ್ಥೆಗಳಲ್ಲಿ ಕೋಮು ಸೌಹಾರ್ದತೆ ಕೆಡಿಸುವವರ ವಿರುದ್ದ ಪೊಲೀಸರು ಕ್ರಮ ಕೈಗೊಳ್ಳಿ ಪ್ರಶಾಂತ್‌ ಜತ್ತನ್ನ

ಉಡುಪಿ: ಶಿಕ್ಷಣ ಸಂಸ್ಥೆಗಳಿಗೆ ನುಗ್ಗಿ ಅನಾವಶ್ಯಕವಾದ ಗದ್ದಲ ಏಪರ್ಡಿಸುವುದರೊಂದಿಗೆ ಅಲ್ಲಿನ ಕೋಮುಸೌಹಾರ್ದತೆಯನ್ನು ಕೆಡಿಸಲು ಪ್ರಯತ್ನಿಸುವವರ ವಿರುದ್ದ ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ಕ್ರೈಸ್ತ ಒಕ್ಕೂಟ ಇದರ ರಾಜ್ಯಾಧ್ಯಕ್ಷರಾದ ಪ್ರಶಾಂತ್‌ ಜತ್ತನ್ನ ಆಗ್ರಹಿಸಿದ್ದಾರೆ.

ಇತ್ತೀಚಿಗೆ ಯೂನಿಫಾರ್ಮ್ ವಿಚಾರದಲ್ಲಿ ಬಹಳಷ್ಟು ಚರ್ಚೆಗಳು ಆಗುತ್ತಿರುವ ವೇಳೆಯಲ್ಲಿ ಕೆಲವು ಕಾಲೇಜ್ ವಿದ್ಯಾರ್ಥಿಗಳು ಕ್ರಿಶ್ಚಿಯನ್ ಶಾಲೆಯನ್ನು / ಕಾಲೇಜನ್ನು ಹಿಂದೂ ಶಾಲೆಗಳನ್ನಾಗಿ ಕಾಲೇಜ್ ಅನ್ನಾಗಿ ಮಾರ್ಪಡಿಸುತೇವೆ ಎಂದು ಹೇಳಿಕೆ ಕೊಡುವುದರ ಮೂಲಕ ಕೋಮು ಸೌಹಾರ್ದತೆಗೆ ವಿದ್ಯಾರ್ಥಿಗಳೇ ಈ ಸಣ್ಣ ಪ್ರಾಯದಲ್ಲಿ ಸಮಾಜದಲ್ಲಿ ದ್ವೇಷವನ್ನು ಬಿತ್ತುತ್ತಿದ್ದಾರೆ . ಇದನ್ನೆಲ್ಲಾ ನೋಡಿ ಸುಮ್ಮನೆ ಕೂತಿರುವ ಜಿಲ್ಲಾಡಳಿತ ತಕ್ಷಣ ಅವರು ಯಾವುದೇ ಜಾತಿ ಧರ್ಮದವರಾಗಿದ್ದರು ಕೂಡ (ಕ್ರೈಸ್ತ ಮುಸ್ಲಿಂ ಹಿಂದೂ) ಸ್ವಯಂ ಪ್ರೇರಿತರಾಗಿ ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಈ ರೀತಿ ಹೇಳಿಕೆಗಳನ್ನೂ ಕೊಡುವ ಮಕ್ಕಳ ಹಿಂದೆ ಯಾರಿದ್ದಾರೆ ಎಂದು ಪತ್ತೆ ಹಚ್ಚಿ ಅವರನ್ನೂ ಎಚ್ಚರಿಸುವ ಕಾರ್ಯವನ್ನು ಮಾಡಬೇಕು.

ಸಮಾಜ ಜಾಲತಾಣದಲ್ಲಿ ಕ್ರೈಸ್ತರನ್ನು ಮುಸಲ್ಮಾನರನ್ನು ಅಲ್ಪಸಂಖ್ಯಾತರನ್ನು ಕೊಚ್ಚಿ ಕೊಲ್ಲಬೇಕು ಎಲ್ಲರೂ ಖಡ್ಗಗಳನ್ನು ಹಿಡಿದುಕೊಳ್ಳಿ ಎಂದು ಕರೆ ಕೊಡುತ್ತಿರುವವರ ಮೇಲೆ ಜಿಲ್ಲಾಡಳಿತ ಪೊಲೀಸ್ ಇಲಾಖೆ ಇಂತ ಹೇಳಿಕೆಗಳನ್ನು ವಿಡಿಯೋಗಳನ್ನು ಗಂಭೀರವಾಗಿ ಪರಿಗಣಿಸಿ ಇಂತವರ ಮೇಲೆ ಸ್ವಯಂಪ್ರೇರಿತ ಕೇಸುಗಳನ್ನು ದಾಖಲಿಸಿ ಸಮಾಜದಲ್ಲಿ ಶಾಂತಿಯನ್ನು ಕಾಪಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.


Spread the love