ಶಿರಾಡಿ ಘಾಟ್ ಎರಡನೇ ತಿರುವಿನಲ್ಲಿ ಮಗುಚಿ ಬಿದ್ದ ಗ್ಯಾಸ್ ಟ್ಯಾಂಕರ್: ಸಂಚಾರ ಸ್ಥಗಿತ

Spread the love

ಶಿರಾಡಿ ಘಾಟ್ ಎರಡನೇ ತಿರುವಿನಲ್ಲಿ ಮಗುಚಿ ಬಿದ್ದ ಗ್ಯಾಸ್ ಟ್ಯಾಂಕರ್: ಸಂಚಾರ ಸ್ಥಗಿತ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ 2ನೇ ತಿರುವಿನಲ್ಲಿ ಅನಿಲ ತುಂಬಿದ ಟ್ಯಾಂಕರ್ ಮಗುಚಿ ಬಿದ್ದು ವಾಹನ ಸಂಚಾರ ಸ್ಥಗಿತಗೊಂಡ ಘಟನೆ ವರದಿಯಾಗಿದೆ.

ಫೆಬ್ರವರಿ 5ರಂದು ಬೆಳಿಗ್ಗೆ ಸುಮಾರು 10 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 73 ರ ಹಾಸನ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಶಿರಾಡಿ ಘಾಟ್ ನ ಕೆಂಪುಹೊಳೆ ಎಂಬಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಅನಿಲ ತುಂಬಿಸಿಕೊಂಡು ತೆರಳುತ್ತಿದ್ದ ಅನಿಲ ಟ್ಯಾಂಕರ್ ರಸ್ತೆಗೆ ಅಡ್ಡವಾಗಿ ಮಗುಚಿ ಬಿದ್ದು ಅನಿಲ ಸೋರಿಕೆಯಾಗುತ್ತಿರುವುದರಿಂದ ಸಂಚಾರ ವ್ಯತ್ಯಯವುಂಟಾಗಿರುತ್ತದೆ.

ಆದ್ದರಿಂದ ರಾಷ್ಡ್ರೀಯ ಹೆದ್ದಾರಿ 73 ರ ಶೀರಾಡಿ ಮಾರ್ಗವನ್ನು ಗುಂಡ್ಯ ಎಂಬಲ್ಲಿ ನಿರ್ಭಂದಿಸಿದ್ದು ಸದರಿ ಮಾರ್ಗವಾಗಿ ತೆರಳುವ ವಾಹನ ಸಂಚಾರರು ಸಂಪಾಜೆ-ಮಡಿಕೇರಿ, ಅಥವಾ ಬೆಳ್ತಂಗಡಿ-ಚಾರ್ಮಾಡಿ ಮಾರ್ಗವಾಗಿ ಸಂಚರಿಸಬಹುದಾಗಿದೆ ಎಂದು ದಕ ಜಿಲ್ಲಾ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.


Spread the love